• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ಕೊಟ್ಟ ಕೆಇಆರ್​ಸಿ; ನ.1ರಿಂದಲೇ ಹೊಸ ದರ ಜಾರಿ

ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ಕೊಟ್ಟ ಕೆಇಆರ್​ಸಿ; ನ.1ರಿಂದಲೇ ಹೊಸ ದರ ಜಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚುವರಿ ವಿದ್ಯುತ್ ಬಳಕೆಯಾಗಿರುವ ಜೊತೆಗೆ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪನೆಗೂ ಹೆಚ್ಚು ಖರ್ಚಾಗಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ.

  • Share this:

ಬೆಂಗಳೂರು; ಕೊರೋನಾ ಕಾರಣದಿಂದ ತಡೆಹಿಡಿಯಲಾಗಿದ್ದ ವಿದ್ಯುತ್ ದರ ಏರಿಕೆಯನ್ನು ಇದೀಗ ಏರಿಕೆ ಮಾಡಿರುವ ಕೆಇಆರ್​ಸಿ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ರಾಜ್ಯದ ಜನರಿಗೆ ಶಾಕ್ ನೀಡಿದೆ. ಅದರಂತೆ ಹೊಸ ದರ ನವೆಂಬರ್ 1ರಿಂದಲೇ ಅನ್ವಯವಾಗಲಿದೆ.


ಮಾರ್ಚ್ ನಲ್ಲಿ ವಿದ್ಯುತ್ ದರ ಏರಿಕೆಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಈಗ ವಿದ್ಯುತ್ ದರವನ್ನು ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ. ನವೆಂಬರ್ 1ರಿಂದಲೇ ಹೊಸ ದರ ಜಾರಿಯಾಗಲಿದ್ದು, ಐದು ತಿಂಗಳ ಮಟ್ಟಿಗೆ ಹೊಸ ಪರಿಷ್ಕೃತ ದರ ಇರಲಿದೆ. 


ಇದನ್ನು ಓದಿ: ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ, ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತ; ಸಿದ್ದರಾಮಯ್ಯ ಭವಿಷ್ಯ


ಹೆಚ್ಚುವರಿ ವಿದ್ಯುತ್ ಬಳಕೆಯಾಗಿರುವ ಜೊತೆಗೆ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪನೆಗೂ ಹೆಚ್ಚು ಖರ್ಚಾಗಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ.

top videos
    First published: