Bengaluruನಲ್ಲಿ EV Charging Hub ಉದ್ಘಾಟನೆ: ಒಂದೇ ಬಾರಿಗೆ 50 ಕಾರುಗಳಿಗೆ ಚಾರ್ಜಿಂಗ್ ಸೌಲಭ್ಯ

2022ರ ಅಂತ್ಯದ ವೇಳೆಗೆ ನಗರದಲ್ಲಿ 200ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ. ಫೋರಂ ನೈಬರ್‌ಹುಡ್ ಮಾಲ್‌ನಲ್ಲಿರುವ ಚಾರ್ಜಿಂಗ್ ಹಬ್ ಬೆಂಗಳೂರಿನ ಪ್ರಮುಖ ಮೈಲಿಗಲ್ಲು ಆಗಲಿದೆ

ಚಾರ್ಜಿಂಗ್​ ಯುನಿಟ್​ ಉದ್ಘಾಟಿಸಿದ ಶಾಸಕ ಅರವಿಂದ ಲಿಂಬಾವಳಿ

ಚಾರ್ಜಿಂಗ್​ ಯುನಿಟ್​ ಉದ್ಘಾಟಿಸಿದ ಶಾಸಕ ಅರವಿಂದ ಲಿಂಬಾವಳಿ

  • Share this:
ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicle) ಉತ್ತೇಜನ ನೀಡುವ ಸಲುವಾಗಿ ಫಿನ್ಲ್ಯಾಂಡ್ ಮೂಲದ ಫೋರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ, ಎಲೆಕ್ಟ್ರಿಕ್ ವೆಹಿಕಲ್ (EV)-ಚಾರ್ಜಿಂಗ್ (Charging) ಮೂಲಸೌಕರ್ಯ ಸಂಸ್ಥೆಯು ವೈಟ್‌ಫೀಲ್ಡ್‌ನಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸಿದೆ. ವೈಟ್‌ಫೀಲ್ಡ್‌ನ ಫೋರಂ ನೈಬರ್‌ಹುಡ್ ಮಾಲ್‌ನಲ್ಲಿ ಏಕಕಾಲಕ್ಕೆ 50 ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವಂತಹ 50 ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಸಾರ್ವಜನಿಕ ಇವಿ ಚಾರ್ಜಿಂಗ್ ಹಬ್ ಅನ್ನು ಸ್ಥಾಪಿಸಿದೆ.

ಮಹದೇವಪುರ ವಿಧಾನಸಭಾ  ಫೋರಂ ನೈಬರ್ಹುಡ್ ಮಾಲಿನ ನೂತನ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ನಿಲ್ದಾಣಕ್ಕೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

50 ಕಾರುಗಳನ್ನು ಚಾರ್ಜ್ ಮಾಡಲು ಅವಕಾಶ

ಫೋರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಸಂಸ್ಥೆಯ ಹೇಳಿಕೆಯ ಪ್ರಕಾರ, ಚಾರ್ಜಿಂಗ್ ಹಬ್ ಎಲ್ಲಾ ರೀತಿಯ ಎಲೆಕ್ಟ್ರಿಕ್ ಕಾರುಗಳು ಮತ್ತು  ಮೂರು ಮತ್ತು ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್ ವ್ಯವಸ್ಥೆಯನ್ನು ಪೂರೈಸುತ್ತದೆ. "ಸೌಲಭ್ಯವು 10 60KW CCS ಚಾರ್ಜಿಂಗ್ ಪಾಯಿಂಟ್‌ಗಳು, 15 KW DC001 ಚಾರ್ಜಿಂಗ್ ಪಾಯಿಂಟ್‌ಗಳು,  4 ಮತ್ತು 7.4KW ಟೈಪ್ – 2 AC ಚಾರ್ಜಿಂಗ್‍ನ 36 ಪಾಯಿಂಟ್‍ಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಇದು ಒಂದು ಸಮಯದಲ್ಲಿ 50 ಕಾರುಗಳನ್ನು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ" ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರಲ್ಲಿ ಹೆಚ್ಚಿತ್ತಿದೆ ಇವಿಗಳ ಬೇಡಿಕೆ

ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಗುರುವಾರ ಹಬ್ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ನಗರದಲ್ಲಿ 45,000 ಎಲೆಕ್ಟ್ರಿಕ್ ವಾಹನ ಬಳಕೆದಾರರಿದ್ದು, ಇವಿಗಳ ಬೇಡಿಕೆ ಹೆಚ್ಚುತ್ತಿದೆ ಎಂಬುದನ್ನು ಇದನ್ನು ಸೂಚಿಸುತ್ತದೆ. ಐಸಿಇ (ಆಂತರಿಕ ದಹನಕಾರಿ ಎಂಜಿನ್) ಆಟೋಮೊಬೈಲ್‌ಗಳ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳಿಂದ ಗ್ರಾಹಕರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ವಿದ್ಯುತ್ ವಾಹನಗಳ ಸಂಚಾರಕ್ಕೆ ದಾರಿ ಮಾಡಿಕೊಡುತ್ತಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ ಎಂದರು.

ಇದನ್ನು ಓದಿ: ಹೊರಗಿನಿಂದ ಟಾಯ್ಲೆಟ್, ಒಳಗೆ ನೋಡಿದ್ರೆ ಬೆಡ್‌ ರೂಂ! ಕೋಟೆನಾಡಲ್ಲಿ ಹೈಟೆಕ್ ವೇಶ್ಯಾವಾಟಿಕೆ

ಚಾರ್ಜಿಂಗ್ ಹಬ್‍ಗಳನ್ನು ಉದ್ಘಾಟನೆ ಮಾಡಿದ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡ ಶಾಸಕ ಅರವಿಂದ ಲಿಂಬಾವಳಿ ಇದು ದಕ್ಷಿಣ ಭಾರತದ ಅತಿದೊಡ್ಡ ವಿದ್ಯುತ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರಿಸರ ರಕ್ಷಣೆಯ ಆಶಯಕ್ಕೆ ಪೂರಕವಾಗಿರಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ವರ್ಷಾಂತ್ಯಕ್ಕೆ 200ಕ್ಕೂ ಹೆಚ್ಚು ಚಾರ್ಜಿಂಗ್​ ಪಾಯಿಂಟ್​ ಸ್ಥಾಪನೆ

ಕಂಪನಿಯು ನಗರದಾದ್ಯಂತ 200 ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಧೇಶ್ ಝಾ ಈ ಬಗ್ಗೆ ಮಾತನಾಡಿ, ಬೆಂಗಳೂರು ಯಾವಾಗಲೂ ನಮ್ಮ ಪ್ರಮುಖ ಕೇಂದ್ರೀಕೃತ ನಗರಗಳಲ್ಲಿ ಒಂದಾಗಿದೆ. 2022ರ ಅಂತ್ಯದ ವೇಳೆಗೆ ನಗರದಲ್ಲಿ 200ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ. ಫೋರಂ ನೈಬರ್‌ಹುಡ್ ಮಾಲ್‌ನಲ್ಲಿರುವ ಚಾರ್ಜಿಂಗ್ ಹಬ್ ಬೆಂಗಳೂರಿನ ಪ್ರಮುಖ ಮೈಲಿಗಲ್ಲು ಆಗಲಿದೆ ಎಂದಿದ್ದಾರೆ.

ಇದನ್ನು ಓದಿ: ಬಸವ ಭೂಷಣ ಪ್ರಶಸ್ತಿ ಸ್ವೀಕಾರಕ್ಕೆ ದುಬೈಗೆ ತೆರಳಿದ ಮಾಜಿ ಸಿಎಂ

ಪೋರ್ಟಮ್ ಇದುವರೆಗೆ ಎಂಟು ರಾಜ್ಯಗಳು ಮತ್ತು 13 ನಗರಗಳಲ್ಲಿ 188 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ ಮತ್ತು ಅವುಗಳ ಮೂಲಕ ಯಾವುದೇ EV ವಾಹನಗಳಿಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಪೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್, ಅಂಡ್ರಾಯ್ಡ್ ಮತ್ತು iOS ಪ್ಲಾಟ್‌ಫಾರ್ಮ್‌ಗಳಲ್ಲಿ, EV ಬಳಕೆದಾರರಿಗೆ EC-ಚಾರ್ಜಿಂಗ್ ಸ್ಥಾಪನೆಗಳನ್ನು ಪತ್ತೆಹಚ್ಚಲು ಮತ್ತು ಡಿಜಿಟಲ್ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ.

ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ 
ಈ ಸಂಸ್ಥೆಯು ಚಾರ್ಜಿಂಗ್ ತಂತ್ರಜ್ಙಾನದ ಮೇಲೆ ಗಮನಾರ್ಹವಾದ ಕೆಲಸ ಮಾಡುತ್ತಿದ್ದು. ಈ ಹಿಂದೆ ಕೂಡ ಹಲವು ಕಡೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ BSES ಯಮುನಾ ಪವರ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಿತ್ತು. ಯೋಜನೆಯು ಚಾರ್ಜರ್‌ಗಳು ಮತ್ತು ಎಲೆಕ್ಟ್ರಿಕ್ ವೆಹಿಕಲ್‌ಗಳ (ಇವಿ) ನಡುವೆ ಲಭ್ಯವಿರುವ ಲೋಡ್‌ನ ವಿತರಣೆಯ ಮೇಲೆ ಕೇಂದ್ರೀಕರಿಸುವುದಾಗಿತ್ತು. ಅಲ್ಲದೇ, ಬೆಂಗಳೂರು ಮೂಲದ ಸುಧಾರಿತ ಬ್ಯಾಟರಿ ತಂತ್ರಜ್ಞಾನದ ಸ್ಟಾರ್ಟಪ್ ಲಾಗ್ 9 ಮೆಟೀರಿಯಲ್ಸ್ ಫಿನ್ನಿಷ್ ಕ್ಲೀನ್ ಎನರ್ಜಿ ಕಂಪನಿ ಫೋರ್ಟಮ್‌ನ ಭಾರತೀಯ ಅಂಗಸಂಸ್ಥೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಸಾರ್ವಜನಿಕ ವೇಗದ ಚಾರ್ಜರ್‌ಗಳನ್ನು ನಿಯೋಜಿಸಲು ಸಹಕಾರಿಯಾಗಿದೆ.
Published by:Seema R
First published: