ಯಾದಗಿರಿ (ಮೇ. 1):ಕೋವಿಡ್ ಸಂಕಷ್ಟದ ನಡುವೆ ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದ ಕುಟುಂಬ ಈಗ ಬೀದಿಗೆ ಬಿದ್ದಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದೆ. ಗ್ರಾಮದ ಬಡ ಕೂಲಿ ಕಾರ್ಮಿಕೆ ವೃದ್ದೆ ಮಾಳಮ್ಮಳ ಮನೆ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಬೆಳಿಗ್ಗೆ ಎಂದಿನಂತೆ ತನ್ನ ಇಬ್ಬರು ಮಕ್ಕಳ ಜೊತೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆಂದು ತೆರಳಿದಳು. ಮಾಳಮ್ಮಳ ಮನೆಯು ಹಳೆದಾಗಿದೆ. ಇದ್ದಕ್ಕಿದ್ದಂತೆ ವಿದ್ಯುತ್ ವೈರ್ ಮನೆಯ ಪತ್ರಾಸ್ ಮೂಲಕ ಮನೆಗೆ ಬೆಂಕಿ ವ್ಯಾಪಿಸಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇರಲಿಲ್ಲ. ಆದರೆ, ಕೂಲಿ ಮಾಡಿ ಸಂಪಾದಿಸಿದ್ದ ನಗದು ಹಣ,ಆಹಾರ ಸಾಮಾಗ್ರಿಗಳು,ಚಿನ್ನಾಭರಣ,ಬಟ್ಟೆ ಹಾಗೂ ಅಗತ್ಯ ದಾಖಲೆಗಳು ಸುಟ್ಟು ಕರಕಲಾಗಿವೆ.
ಮದುವೆಗೆಂದು ತಂದಿಟ್ಟ ಹಣ ಹಾನಿ...!
ಮಾಳಮ್ಮರ ಮೊಮ್ಮಗಳ ಮದುವೆ ನಿಗದಿ ಮಾಡಲಾಗಿತ್ತು. ಮೊಮ್ಮಗಳ ಮದುವೆಗೆಂದು 85 ಸಾವಿರ ಹಣ ಸಾಲಗಾರರಿಗೆ ಪಾವತಿ ಮಾಡಲು ತಂದಿಟ್ಟಿದ್ದರು. ಬೆಂಕಿ ಅನಾಹುತದಿಂದ 85 ಸಾವಿರ ಹಣ ಸುಟ್ಟು ಹಾನಿಯಾಗಿವೆ. ಜೊತೆಗೆ 4 ಕ್ವಿಂಟಾಲ್ ಜೋಳ, 30 ಗ್ರಾಂ ಚಿನ್ನಾಭರಣ, 50 ಕೆಜಿ ತೊಗರಿ, 50 ಕೆಜಿ ಗೋಧಿ, 75 ಕೆಜಿ ಅಕ್ಕಿ ಸೇರಿ ಬಟ್ಟೆಗಳು ಕೂಡ ಬೆಂಕಿಗಾಹುತಿಯಾಗಿದ್ದಾವೆ. ಕೂಲಿ ಮಾಡಿ ಕಷ್ಟದ ಜೊತೆ ಬದುಕು ಸಾಗಿಸುತ್ತಿದ್ದ ಕುಟುಂಬ ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮಾಳಮ್ಮ ಮನೆಯಲ್ಲಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದಳು. ಅಪಾರ ಪ್ರಮಾಣದ ಹಾನಿಯಾದ ಹಿನ್ನೆಲೆ ವೃದ್ದೆಯು ಕಣ್ಣೀರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದಳು. ಧರಿಸಲು ಬಟ್ಟೆ ಕೂಡ ಇಲ್ಲದಂತಾಗಿದೆ. ಮನೆ ಕಳೆದುಕೊಂಡ ವೃದ್ದೆಯ ಕುಟುಂಬಸ್ಥರು ಈಗ ಬೀದಿಯಲ್ಲಿ ವಾಸವಾಗಿದ್ದಾರೆ. ಮರದ ನೆರಳಿನಲ್ಲಿ ಆಶ್ರಯ ಪಡೆದು ವಾಸವಾಗಿದ್ದಾರೆ.ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಈಗ ಮನೆ ಬೆಂಕಿ ತಗುಲಿ ಹಾನಿಯಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನು ಓದಿ: ಪ್ರಧಾನಿ ಮೋದಿಯವರ ಮನ್ ಕೀ ಬಾತ್ನಿಂದ ಪ್ರೇರಣೆ; ಕೆರೆ ನಿರ್ಮಾಣಕ್ಕೆ ಮುಂದಾದ ವ್ಯಕ್ತಿ
ವಿದ್ಯುತ್ ತಗುಲಿ ಮಾಳಮ್ಮಳ ಮನೆಗೆ ಬೆಂಕಿ ತಗುಲಿ ಹಾನಿಯಾಗಿದೆ.85 ಸಾವಿರ ರೂ ಹಣ,ಚಿನ್ನಾಭರಣ ಹಾಗೂ ಮನೆಯಲ್ಲಿರುವ ಎಲ್ಲಾ ವಸ್ತುಗಳು ಸುಟ್ಟು ಹಾನಿಯಾಗಿವೆ. ಮನೆಯಲ್ಲಿ ರುವ ಎಲ್ಲಾ ವಸ್ತುಗಳು ಸುಟ್ಟು ಹಾನಿಯಾಗಿವೆ. ವಾಸಕ್ಕೆ ಮನೆಯಿಲ್ಲದೇ ಮರದ ನೆರಳಿನಲ್ಲಿ ಉಳಿದುಕೊಂಡಿದ್ದಾರೆ. ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಿ ಆಶ್ರಯ ಮನೆ ಸೌಲಭ್ಯ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇಬ್ಬರು ಮಕ್ಕಳ ಜೊತೆ ಕಷ್ಟ ನಷ್ಟದ ಜೊತೆ ನೆಮ್ಮದಿ ಬದುಕು ಸಾಗಿಸುತ್ತಿದ್ದ ಈಗ ವೃದ್ದೆಗೆ ಬರಸಿಡಿಲು ಬಡಿದಂತಾಗಿದೆ.ಯಾರಾದರೂ ಸಹಾಯ ಮಾಡಿ ಊಟಕ್ಕೆ ಗತಿಯಿಲ್ಲ.ಬಟ್ಟೆಗಳಿಲ್ಲ. ಸಹಾಯ ಮಾಡಿ ಅನುಕೂಲ ಮಾಡಬೇಕೆಂದು ಮಾಳಮ್ಮ ನೋವು ತೊಡಿಕೊಂಡಳು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ದಾನಿಗಳು ಮುಂದೆ ಬಂದು ಸಹಾಯ ಮಾಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ