• Home
  • »
  • News
  • »
  • state
  • »
  • Karnataka ULB Elections: 5 ನಗರಸಭೆ, 19 ಪುರಸಭೆ, 34 ಪ.ಪಂ.ನ 1185 ವಾರ್ಡ್​ಗಳಿಗೆ ಇಂದು ಚುನಾವಣೆ

Karnataka ULB Elections: 5 ನಗರಸಭೆ, 19 ಪುರಸಭೆ, 34 ಪ.ಪಂ.ನ 1185 ವಾರ್ಡ್​ಗಳಿಗೆ ಇಂದು ಚುನಾವಣೆ

ಮತದಾನದ ಸಾಂದರ್ಭಿಕ ಚಿತ್ರ

ಮತದಾನದ ಸಾಂದರ್ಭಿಕ ಚಿತ್ರ

Local Body Elections, Voting today- ಕರ್ನಾಟಕದ 5 ನಗರಸಭೆ ಮತ್ತು 19 ಪುರಸಭೆ ಸೇರಿ 58 ಸ್ಥಳೀಯ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಚುನಾವಣೆ ಇದೆ. ಒಂಬತ್ತು ವಾರ್ಡ್​ಗಳಿಗೆ ಉಪಚುನಾವಣೆಯೂ ಇದೆ.

  • Share this:

    ಬೆಂಗಳೂರು, ಡಿ. 27: ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಗಿಯಲಿದೆ. ಕರ್ನಾಟಕ ಬಂದ್​ಗೆ ಹಿಂದಿನ ದಿನ, ಅಂದರೆ ಡಿ. 30, ಗುರುವಾರ ಫಲಿತಾಂಶ ಪ್ರಕಟವಾಗಲಿದೆ.


    ಚುನಾವಣೆ ನಡೆಯುತ್ತಿರುವುದು ಐದು ನಗರಸಭೆ (City Municipality Council), 19 ಪುರಸಭೆ (Town Municipal Council) ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ (Town Panchayat). ಹಾಗೆಯೇ, ವಿವಿಧ ಕಾರಣಗಳಿಂದ ತೆರವಾಗಿರುವ 5 ನಗರಸಭೆ, 3 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಯ 9 ವಾರ್ಡ್​ಗಳಿಗೆ ಉಪಚುನಾವಣೆ ಇದೆ. ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ ಪುರಸಭೆ ಮತ್ತು ಚಂದಾಪುರ ಪುರಸಭೆಗಳೂ ಚುನಾವಣೆ ಎದುರಿಸುತ್ತಿವೆ.


    ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು: 

    ಸಂಜಿಲ್ಲೆಸ್ಥಳೀಯ ಸಂಸ್ಥೆಒಟ್ಟು ವಾರ್ಡ್​ಗಳು
    1ಚಿಕ್ಕಮಗಳೂರುಚಿಕ್ಕಮಗಳೂರು ನಗರಸಭೆ35
    2ತುಮಕೂರುಶಿರಾ ನಗರಸಭೆ31
    3ಗದಗಗದಗ-ಬೆಟಗೇರಿ ನಗರಸಭೆ35
    4ವಿಜಯನಗರಹೊಸಪೇಟೆ ನಗರಸಭೆ35
    5ಬೆಂಗಳೂರು ನಗರಹೆಬ್ಬಗೋಡಿ ನಗರಸಭೆ31
    ಪುರಸಭೆಗಳು
    6ಬೆಂಗಳೂರು ನಗರಜಿಗಣಿ ಪುರಸಭೆ23
    7ಬೆಂಗಳೂರು ನಗರಚಂದಾಪುರ ಪುರಸಭೆ23
    8ಬೆಳಗಾವಿಅಥಣಿ ಪುರಸಭೆ27
    9ಧಾರವಾಡಅಣ್ಣಿಗೇರಿ ಪುರಸಭೆ23
    10ಹಾವೇರಿಬಂಕಾಪೂರ ಪುರಸಭೆ23
    11ರಾಮನಗರಬಿಡದಿ ಪುರಸಭೆ23
    12ದಾವಣಗೆರೆಮಲೆಬನ್ನೂರು ಪುರಸಭೆ23
    13ಉಡುಪಿಕಾಪು ಪುರಸಭೆ23
    14ಬೆಳಗಾವಿಹಾರೋಗೇರಿ ಪುರಸಭೆ23
    15ಬೆಳಗಾವಿಮುನವಳ್ಳಿ ಪುರಸಭೆ23
    16ಬೆಳಗಾವಿಅಗಾರಖುರ್ದು ಪುರಸಭೆ23
    17ಕೊಪ್ಪಳಕಾರಟಗಿ ಪುರಸಭೆ23
    18ಬಳ್ಳಾರಿಕರೆಕುಪ್ಪ ಪುರಸಭೆ23
    19ಬಳ್ಳಾರಿಕುರುಗೋಡು ಪುರಸಭೆ23
    20ವಿಜಯನಗರಹಗರಿಬೊಮ್ಮನಹಳ್ಳಿ ಪುರಸಭೆ23
    21ರಾಯಚೂರುಮಸ್ಕಿ ಪುರಸಭೆ23
    22ಯಾದಗಿರಿಕೆಂಭಾವಿ ಪುರಸಭೆ23
    23ಯಾದಗಿರಿಕೆಕ್ಕೇರಾ ಪುರಸಭೆ23
    ಪಟ್ಟಣ ಪಂಚಾಯಿತಿಗಳು
    24ಚಿತ್ರದುರ್ಗನಾಯಕನ ಹಟ್ಟಿ ಪ.ಪಂ.16
    25ದಕ್ಷಿಣಕನ್ನಡವಿಟ್ಲಾ ಪ.ಪಂ.18
    26ದಕ್ಷಿಣ ಕನ್ನಡಕೋಟೆಕಾರು ಪ.ಪಂ.17
    27ಬೆಳಗಾವಿಎಂ.ಕೆ. ಹುಬ್ಬಳ್ಳಿ ಪ.ಪಂ.14
    28ಬೆಳಗಾವಿಕಂಕನವಾಡಿ ಪ.ಪಂ.17
    29ಬೆಳಗಾವಿನಾಗನೂರ ಪ.ಪಂ.17
    30ಬೆಳಗಾವಿಯಕ್ಸಾಂಬ ಪ.ಪಂ.17
    31ಬೆಳಗಾವಿಚೆನ್ನಮ್ಮನ ಕಿತ್ತೂರು ಪ.ಪಂ.18
    32ಬೆಳಗಾವಿಅರಭಾವಿ ಪ.ಪಂ.16
    33ಬೆಳಗಾವಿಐನಾಪುರ ಪ.ಪಂ.19
    34ಬೆಳಗಾವಿಶೇಡಬಾಳ ಪ.ಪಂ.16
    35ಬೆಳಗಾವಿಚಿಂಚಿಲಿ ಪ.ಪಂ.19
    36ಬೆಳಗಾವಿಬೋರಗಾಂವ ಪ.ಪಂ.17
    37ಬೆಳಗಾವಿಕಲ್ಲೋಳಿ ಪ.ಪಂ.16
    38ವಿಜಯಪುರನಲತವಾಡ ಪ.ಪಂ.14
    39ವಿಜಯಪುರನಿಡಗುಂದಿ ಪ.ಪಂ.16
    40ವಿಜಯಪುರದೇವರಹಿಪ್ಪರಗಿ ಪ.ಪಂ.17
    41ವಿಜಯಪುರಆಲಮೇಲ ಪ.ಪಂ.19
    42ವಿಜಯಪುರಮನಗೂಳಿ ಪ.ಪಂ.16
    43ವಿಜಯಪುರಕೋಲ್ಹಾರ ಪ.ಪಂ.17
    44ಬಾಗಲಕೋಟೆಕಮತಗಿ ಪ.ಪಂ.16
    45ಬಾಗಲಕೋಟೆಬೆಳಗಲಿ ಪ.ಪಂ.18
    46ಬಾಗಲಕೋಟೆಅಮೀನಗಡ ಪ.ಪಂ.16
    47ಹಾವೇರಿಗುತ್ತಲ ಪ.ಪಂ.18
    48ಉತ್ತರಕನ್ನಡಜಾಲಿ ಪ.ಪಂ.18
    49ಕೊಪ್ಪಳತಾವರೆಗೇರಾ ಪ.ಪಂ.18
    50ಕೊಪ್ಪಳಭಾಗ್ಯನಗರ ಪ.ಪಂ.19
    51ಕೊಪ್ಪಳಕನಕಗಿರಿ ಪ.ಪಂ.17
    52ವಿಜಯನಗರಮರಿಯಮ್ಮನಹಳ್ಳಿ ಪ.ಪಂ.18
    53ರಾಯಚೂರುಕವಿತಾಳ ಪ.ಪಂ.16
    54ರಾಯಚೂರುತುರ್ವಿಹಾಳ ಪ.ಪಂ.14
    55ರಾಯಚೂರುಬಳಗಾನೂರು ಪ.ಪಂ.12
    56ರಾಯಚೂರುಸಿರವಾರ ಪ.ಪಂ.20


    ಇದನ್ನೂ ಓದಿ: ಕನ್ನಡ ಬಾವುಟ ಸುಟ್ಟ MES ನಿಷೇಧ ಸರಿಯಲ್ಲ, ಕರ್ನಾಟಕ ಬಂದ್ ಕೂಡ ಬೇಕಿಲ್ಲ: Actor Chetan ವಾದ


    ಉಪಚುನಾವಣೆ ನಡೆಯುತ್ತಿರುವುದು:


    * ಚಾಮರಾಜನಗರ ನಗರಸಭೆಯ 6ನೇ ವಾರ್ಡ್
    * ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯ 21ನೇ ವಾರ್ಡ್
    * ಉತ್ತರಕನ್ನಡ ಜಿಲ್ಲೆ ದಾಂಡೇಲಿ ನಗರಸಭೆಯ 18ನೇ ವಾರ್ಡ್
    * ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆಯ 10ನೇ ವಾರ್ಡ್
    * ಬೆಳಗಾವಿ ಜಿ್ಲಲೆ ಮೂಡಲಗಿ ಪುರಸಭೆಯ 9ನೇ ವಾರ್ಡ್
    * ವಿಜಯಪುರ ಜಿಲ್ಲೆ ಚಡಚಣ ಪ.ಪಂ.ನ 4ನೇ ವಾರ್ಡ್
    * ಕಲಬುರ್ಗಿ ಜಿಲ್ಲೆ ಸೇಡಂ ಪುರಸಭೆಯ 13ನೇ ವಾರ್ಡ್
    * ಹಾವೇರಿ ಜಿಲ್ಲೆ ಹಾನಗಲ್ ಪುರಸಭೆಯ 19ನೇ ವಾರ್ಡ್
    * ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರಸಭೆಯ 9ನೇ ವಾರ್ಡ್.

    Published by:Vijayasarthy SN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು