News18 India World Cup 2019

ಉತ್ತರ ಕರ್ನಾಟಕ್ಕೆ ಸಿಎಂ ಮಾಡಿರುವ ಅನ್ಯಾಯದ ಕುರಿತು ದಾಖಲೆ ಬಿಡುಗಡೆ- ಶಾಸಕ ಎ. ಎಸ್. ಪಾಟೀಲ ನಡಹಳ್ಳಿ

news18
Updated:September 3, 2018, 7:36 PM IST
ಉತ್ತರ ಕರ್ನಾಟಕ್ಕೆ ಸಿಎಂ ಮಾಡಿರುವ ಅನ್ಯಾಯದ ಕುರಿತು ದಾಖಲೆ ಬಿಡುಗಡೆ- ಶಾಸಕ ಎ. ಎಸ್. ಪಾಟೀಲ ನಡಹಳ್ಳಿ
news18
Updated: September 3, 2018, 7:36 PM IST
- ಮಹೇಶ ವಿ.ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ ( ಸೆ.03) :  ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರದೇಶವಾರು ಮಾಡಿರುವ ತಾರತಮ್ಯದ ಕುರಿತು 3 ತಿಂಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ತಿಳಿಸಿದ್ದಾರೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾತನಾಡಿದ ಅವರು, ಮೈಸೂರು ಭಾಗಕ್ಕೆ ಸೀಮಿತವಾಗಿ ಸರಕಾರ ಕೆಲಸ ಮಾಡುತ್ತಿದೆ ಸಿಎಂ ಅವರ ನಡವಳಿಕೆಯಿಂದ ಕಂಡು ಬರುತ್ತಿದೆ. 40 ಜನ ಕಾಂಗ್ರೆಸ್ ಶಾಸಕರು ಉತ್ತರ ಕರ್ನಾಟಕದಿಂದ ಗೆದ್ದು ಬಂದಿದ್ದಾರೆ. ಅವರು ಖಂಡಿತ ಸಿಡಿದೇಳುತ್ತಾರೆ. ಆಗ ಈ ಸರಕಾರ ಬಿದ್ದು ಹೋಗಲಿದೆ ಎಂದು ತಿಳಿಸಿದರು

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರ ಮಾತಿನ ವೈಖರಿ, ಅವರ ಆದೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎಷ್ಟು ದಿನ ಕುರ್ಚಿಯಲ್ಲಿರುತ್ತಾರೊ ಗೊತ್ತಿಲ್ಲ. ಹೀಗಾಗಿ ಜೆಡಿಎಸ್ ಗೆ ಮತ ಹಾಕಿದ ಭಾಗಕ್ಕೆ ಹೆಚ್ಚಿನ ಅನುದಾನ ಕೊಡುತ್ತಿದ್ದಾರೆ. ಈಗ ಬಿಜೆಪಿ ಶಾಸಕರು ಪ್ರತಿಪಕ್ಷದ ಸ್ಥಾನದಲ್ಲಿದ್ದೇವೆ. ಈ ಕೆಲಸದಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇವೆ, ಸರಕಾರ ತಾನಗಿಯೇ ಬೀಳುತ್ತೆ. ನಾವ್ಯಾರು ಬೀಳಿಸುವ ಅವಶ್ಯಕತೆ ಇಲ್ಲ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಸರಕಾರ ಬಿದ್ದ ಮೇಲೆ ಆ ಸಂದರ್ಭದಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಸಿಎಂ ಆಗಿ 100 ದಿನ ಕಳೆದರೂ ಉತ್ತರ ಕರ್ನಾಟಕಕ್ಕೆ ಭೇಟಿ ನೀಡದಿರುವುದು ವಿಪರ್ಯಾಸ. ಈ ಭಾಗದಲ್ಲಿ ಬರಗಾಲ ಎದುರಾಗಿದ್ದರೂ ಅವರು ಭೇಟಿ ನೀಡುವ ಗ್ಯಾರಂಟಿ ಇಲ್ಲ ಎಂದು ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...