ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election 2023) ಮತದಾನ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ (EVM) ಭದ್ರವಾಗಿದ್ದು, ಸ್ಟ್ರಾಂಗ್ ರೂಮ್ (Strong Room) ಸೇರಿಕೊಂಡಿದೆ. ಮತದಾನ ಪ್ರಕ್ರಿಯೆ ಆರಂಭಗೊಂಡ ಕ್ಷಣದಿಂದ ಇವಿಎಂ ಯಂತ್ರವನ್ನು ಹಸ್ತಾಂತರಿಸುವಾಗ ಚುನಾವಣಾಧಿಕಾರಿಗಳು (Election Officer) ಫುಲ್ ಅಲರ್ಟ್ ಆಗಿರಬೇಕು. ಆದರೆ ಚಿಕ್ಕಮಗಳೂರು ನಗರದ (Chikkamagaluru City) ಮತಗಟ್ಟೆಯಲ್ಲಿ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಮರೆತು ಹೋಗಿರುವ ಘಟನೆ ನಡೆದಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದ 168ರಲ್ಲಿ ಮತಯಂತ್ರಗಳನ್ನು ಬಿಟ್ಟು ಹೋಗಿದ್ದರು. ಮತಯಂತ್ರಗಳನ್ನು ಗಮನಿಸಿದ ಪಕ್ಷದ ಚುನಾವಣಾ ಏಜೆಂಟ್ಗಳು (Election Agents) ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಲೇ ದೌಡಾಯಿಸಿದ ಅಧಿಕಾರಿಗಳು ಮತಗಟ್ಟೆಗೆ ಬಂದು ಇವಿಎಂ ಯಂತ್ರಗಳನ್ನು ತೆಗೆದುಕೊಂಡು ತೆರಳಿದ್ದಾರೆ. ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜಕೀಯ ಪಕ್ಷದ ಏಜೆಂಟ್ರು ಆಕ್ರೋಶ ಹೊರ ಹಾಕಿದ್ದಾರೆ.
ಇವಿಎಂ ಮರೆತು ಹೋದ ಅಧಿಕಾರಿಗಳು
ಪೆನ್ಷನ್ ಮೊಹಲ್ಲಾದ ಕಾಲೇಜಿನಲ್ಲಿ 168 ಮತ್ತು 169 ಎರಡು ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾನದ ಬಳಿಕ 169ರ ಮತಗಟ್ಟೆಯ ಇವಿಎಂಗಳನ್ನು ಮಾತ್ರ ತೆಗೆದುಕೊಂಡು ಹೋಗಲಾಗಿತ್ತು. 168 ಮತಗಟ್ಟೆಯ ಇವಿಎಂಗಳನ್ನು ಮರೆತು ಹೋಗಿದ್ದಾರೆ.
ಚುನಾವಣಾಧಿಕಾರಿಗಳಿಗೆ ಎಚ್ಚರಿಕೆ
ವಿಷಯ ತಿಳಿಯುತ್ತಲೇ ಪೊಲೀಸ್ ಸಿಬ್ಬಂದಿ ಜೊತೆ ಚುನಾವಣಾಧಿಕಾರಿಗಳು ಇವಿಎಂ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಪೆನ್ಷನ್ ಮೊಹಲ್ಲಾದಲ್ಲಿ 700ಕ್ಕೂ ಅಧಿಕ ಮತಗಳಿವೆ. ಫಲಿತಾಂಶದ ದಿನ ಇಲ್ಲಿಯ ಯಂತ್ರಗಳಲ್ಲಿ ಯಾವುದೇ ಮೋಸ ನಡೆಯಬಾರದು ಎಂದು ಪಕ್ಷದ ಚುನಾವಣಾ ಏಜೆಂಟ್ಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ