• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shiggaon: ಕಾಂಗ್ರೆಸ್ ಅಭ್ಯರ್ಥಿ ಒಡೆತನದ ಹೋಟೆಲ್ ಮೇಲೆ ಚುನಾವಣಾಧಿಕಾರಿಗಳ ದಾಳಿ

Shiggaon: ಕಾಂಗ್ರೆಸ್ ಅಭ್ಯರ್ಥಿ ಒಡೆತನದ ಹೋಟೆಲ್ ಮೇಲೆ ಚುನಾವಣಾಧಿಕಾರಿಗಳ ದಾಳಿ

ಯಾಸಿರ್ ಖಾನ್ ಪಠಾಣ್, ಕಾಂಗ್ರೆಸ್ ಅಭ್ಯರ್ಥಿ

ಯಾಸಿರ್ ಖಾನ್ ಪಠಾಣ್, ಕಾಂಗ್ರೆಸ್ ಅಭ್ಯರ್ಥಿ

ಯಾಸಿರ್ ಖಾನ್ ಆಪ್ತ ಮೊಹಮ್ಮದ್ ಮಳಗಿ ಎಂಬವರ ಮನೆಯಲ್ಲಿ 1,71,950 ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ.

  • Share this:

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ (Shiggaon Constituency) ಕಾಂಗ್ರೆಸ್ ಅಭ್ಯರ್ಥಿ ಯಾಸಿರ್​​ಖಾನ್ ಪಠಾಣ್ (Yasirkhan Pathan) ಒಡೆತನದ ಹೋಟೆಲ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿಯ ಹೋಟೆಲ್ ಮೇಲೆ ಏಳು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. FST ತಂಡ ಹಾಗೂ ARO ಅಧಿಕಾರಿಗಳಿಂದ ಜಂಟಿಯಾಗಿ ಸಹಾಯಕ ಚುನಾವಣಾ ಅಧಿಕಾರಿ (Election Commission) ಸಂತೋಷ್ ಹಿರೇಮಠ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ವೇಳೆ 6.10 ಲಕ್ಷ ರೂಪಾಯಿ ನಗದು ಸಿಕ್ಕಿದೆ ಎಂದು ತಿಳಿದು ಬಂದಿದೆ.


ಯಾಸಿರ್ ಖಾನ್ ಆಪ್ತ ಮೊಹಮ್ಮದ್ ಮಳಗಿ ಎಂಬವರ ಮನೆಯಲ್ಲಿ 1,71,950 ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ. ರಾತ್ರಿ ಎರಡು ಗಂಟೆಯವರೆಗೂ ಹೋಟೆಲ್​ನಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಹೋಗುವಾಗ ಬಿಳಿ ಬ್ಯಾಗ್ ಹಿಡಿದುಕೊಂಡು ಹೋಗಿದ್ದಾರೆ.


ಡಿಕೆ ಶಿವಕುಮಾರ್​ ಆಪ್ತನ ಮನೆ ಮೇಲೆ ಐಟಿ ದಾಳಿ


ಕಾಂಗ್ರೆಸ್ (Congress) ಮುಖಂಡ, ಕೆಪಿಸಿಸಿ (KPCC) ಸದಸ್ಯ ಹಾಗೂ ಡಿಕೆ ಶಿವಕುಮಾರ್ (DK Shivakumar) ಅವರ ಆಪ್ತ ರಾಬರ್ಟ್​​ ದದ್ದಾಪುರಿ ಮನೆ ಮೇಲೆ ಐಟಿ ಅಧಿಕಾರಿಗಳು (IT) ದಾಳಿ ನಡೆಸಿದ್ದಾರೆ.


6 ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಧಾರವಾಡದ (Dharwad) ವಿವೇಕಾನಂದ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಆದಾಯದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ರಾಬರ್ಟ್​ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: Dakshina Kannada News: ಕರಾವಳಿಯಲ್ಲಿ ಹೆಚ್ಚಾಯ್ತು ಜೇನುತುಪ್ಪ ಸಂಗ್ರಹ, ಬೇಸಿಗೆಯೇ ಕಾರಣ!


ಕೆಲ ದಿನಗಳ ಹಿಂದಷ್ಟೇ ಐಟಿ ಅಧಿಕಾರಿಗಳು ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕ ಪ್ರಶಾಂತ್ ಕೇಕರೆ ಮನೆ ಮೇಲೆ ದಾಳಿ ನಡೆಸಿದ್ದರು.

top videos
    First published: