ಪಕ್ಷದ ಪರ ಪ್ರಚಾರ ಆರೋಪ; ಎಸಿಪಿ ಸೇರಿ ನಾಲ್ವರು ಪೊಲೀಸ್​ ಅಧಿಕಾರಿ ವರ್ಗಾವಣೆ ಮಾಡಿದ ಚುನಾವಣಾ ಆಯೋಗ

ಯಶವಂತಪುರದ ಉಪವಿಭಾಗದ ಎಸಿಪಿ ರವಿಪ್ರಸಾದ್​ ಪಿ, ಜ್ಞಾನಭಾರತಿ ಇನ್ಸ್​ಪೆಕ್ಟರ್​ ವಿ ಶಿವರೆಡ್ಡಿ, ಪೀಣ್ಯ ಇನ್ಸ್​ಪೆಕ್ಟರ್​ ಶ್ರೀನಿವಾಸ್​ ವಿಟಿ ಮತ್ತು ಯಶವಂತಪುರದ ಇನ್ಸ್​ಪೆಕ್ಟರ್​ ಮುದ್ದುರಾಜ್​ ವೈ ವರ್ಗಾವಣೆಗೊಂಡ ಅಧಿಕಾರಿಗಳು.

Seema.R | news18
Updated:April 17, 2019, 1:24 PM IST
ಪಕ್ಷದ ಪರ ಪ್ರಚಾರ ಆರೋಪ; ಎಸಿಪಿ ಸೇರಿ ನಾಲ್ವರು ಪೊಲೀಸ್​ ಅಧಿಕಾರಿ ವರ್ಗಾವಣೆ ಮಾಡಿದ ಚುನಾವಣಾ ಆಯೋಗ
ಬೆಂಗಳೂರು ಪೊಲೀಸ್​ ಲೋಗೊ
Seema.R | news18
Updated: April 17, 2019, 1:24 PM IST
ಬೆಂಗಳೂರು (ಎ.17): ರಾಜ್ಯದ 14 ಕ್ಷೇತ್ರಗಳು ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದ್ದು, ಇನ್ನೇನು ಮತದಾನಕ್ಕೆ ಒಂದು ದಿನ ಬಾಕಿ ಇದೆ ಎನ್ನುವಾಗ ಪೊಲೀಸ್​ ಇಲಾಖೆಯಲ್ಲಿ ಭಾರೀ ಬದಲಾವಣೆ ಆಗಿದೆ.  ಎಸಿಪಿ ಸೇರಿದಂತೆ ಮಧ್ಯಮ ಕ್ರಮಾಂಕದ ನಾಲ್ವರು ಬೆಂಗಳೂರು ಪೊಲೀಸ್​ ಅಧಿಕಾರಿಯನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ದೂರು ಬಂದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ಮೇರೆಗೆ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ.

ನಾಲ್ವರು ಪೊಲೀಸ್​ ಅಧಿಕಾರಿಗಳು ಆಡಳಿತ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು.ಈ ದೂರಿನ ಅನ್ವಯ ಬೆಂಗಳೂರು ಪ್ರಾದೇಶಿಕ ಆಯುಕ್ತ ಅಧಿಕಾರಿ ಶಿವಯೋಗಿ ಕಲಸದ್​ ಮತ್ತು ಬೆಂಗಳೂರು ರೈಲ್ವೆ ಪೊಲೀಸ್​ ಪ್ರಧಾನ ಇನ್ಸ್​ಪೆಕ್ಟರ್​ ಡಿ.ರೂಪ ಅವರನ್ನು ಒಳಗೊಂಡ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ.

ಯಶವಂತಪುರದ ಉಪವಿಭಾಗದ ಎಸಿಪಿ ರವಿಪ್ರಸಾದ್​ ಪಿ, ಜ್ಞಾನಭಾರತಿ ಇನ್ಸ್​ಪೆಕ್ಟರ್​ ವಿ ಶಿವರೆಡ್ಡಿ, ಪೀಣ್ಯ ಇನ್ಸ್​ಪೆಕ್ಟರ್​ ಶ್ರೀನಿವಾಸ್​ ವಿಟಿ ಮತ್ತು ಯಶವಂತಪುರದ ಇನ್ಸ್​ಪೆಕ್ಟರ್​ ಮುದ್ದುರಾಜ್​ ವೈ ವರ್ಗಾವಣೆಗೊಂಡ ಅಧಿಕಾರಿಗಳು.

ಇದನ್ನು ಓದಿ; ಅದೃಷ್ಟದ ರೇಂಜ್​ ರೋವರ್ ಕಾರನ್ನು​ ರಿಪೇರಿಗೆ ಬಿಟ್ಟ ಎಚ್​ಡಿಕೆ; ಭಾರತಕ್ಕೆ ಬಂದ ಮೊದಲ ಲೆಕ್ಸೆಸ್ ದುಬಾರಿ​ ಕಾರಿ​ನಲ್ಲಿ ಸಿಎಂ ಓಡಾಟ!

ಎಸಿಪಿ ರವಿಪ್ರಸಾದ್​ ಅವರನ್ನು ಈಗ ಅಪರಾಧ ತನಿಖಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ, ಶಿವರೆಡ್ಡಿ, ಮುದ್ದುರಾಜ್​ ಅವರನ್ನು ಕ್ರಮವಾಗಿ ರಾಜ್ಯ ಗುಪ್ತಚರ ವಿಭಾಗ ಮತ್ತು ಆಂತರಿಕ ಸುರಕ್ಷಾ ವಿಭಾಗ ದಳಕ್ಕೆ ವರ್ಗಾವಣೆ ಮಾಡಲಾಗಿದೆ.
Loading...

ಈ ವರ್ಗಾವಣೆ ಕುರಿತು ತನಿಖಾ ಅಧಿಕಾರಿ ಹಾಗೂ ರಾಜ್ಯ ಚುನಾವಣಾ ಮುಖ್ಯಸ್ಥ ಸಂಜೀವ್​ ಕುಮಾರ್ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ರಾಜಕೀಯ ಪಕ್ಷಗಳಿಂದ ಬಂದ ದೂರಿನ ಕುರಿತು ಪರಿಶೀಲನೆ ನಡೆಸದೆ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626