ಸಾಲ ಮನ್ನಾಗೆ ಚುನಾವಣಾ ಆಯೋಗ ತಡೆ; ಮೇ 27ವರೆಗೆ ರೈತರಿಗೆ ಇಲ್ಲ ಸಾಲ ಮನ್ನಾ ಭಾಗ್ಯ

ಸಾಲ ಮನ್ನಾ ಯೋಜನೆಯಲ್ಲಿ ರೈತರಿಗೆ ನೇರ ಹಣ ವರ್ಗಾವಣೆ ಆಗುವುದರಿಂದ ಅದು ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂಬುದು ಆಯೋಗದ ಅಭಿಪ್ರಾಯ.

Vijayasarthy SN | news18
Updated:March 21, 2019, 6:39 PM IST
ಸಾಲ ಮನ್ನಾಗೆ ಚುನಾವಣಾ ಆಯೋಗ ತಡೆ; ಮೇ 27ವರೆಗೆ ರೈತರಿಗೆ ಇಲ್ಲ ಸಾಲ ಮನ್ನಾ ಭಾಗ್ಯ
ಪ್ರಾತಿನಿಧಿಕ ಚಿತ್ರ
Vijayasarthy SN | news18
Updated: March 21, 2019, 6:39 PM IST
ಬೆಂಗಳೂರು(ಮಾ. 21): ರಾಜ್ಯದಲ್ಲಿ ಸಾಲ ಮನ್ನಾ ಆಗಿಲ್ಲವೆಂದು ಆತಂಕಗೊಂಡಿರುವ ಲಕ್ಷಾಂತರ ರೈತರು ಚುನಾವಣೆ ಮುಗಿಯುವವವರೆಗೂ ಕಾಯುವುದು ಅನಿವಾರ್ಯವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಕಾರದ ಸಾಲ ಮನ್ನಾ ಯೋಜನೆಗೆ ಚುನಾವಣಾ ಆಯೋಗ ತಡೆ ನೀಡಿದೆ. ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಸಾಲ ಮನ್ನಾ ಭಾಗ್ಯ ಇರುವುದಿಲ್ಲ. ಇದು ಕೇಂದ್ರ ಸರಕಾರದ ರೈತ ಯೋಜನೆಗೂ ಅನ್ವಯವಾಗುತ್ತದೆ.

ಯಾರಿಗಿರುವುದಿಲ್ಲ ಸಾಲ ಮನ್ನಾ ಭಾಗ್ಯ?

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಾಲ ಮನ್ನಾ ಯೋಜನೆಯಲ್ಲಿ ರೈತರಿಗೆ ಒಂದೇ ಕಂತಿನಲ್ಲಿ ಸಾಲದ ಹಣ ಪಾವತಿಯಾಗುತ್ತದೆ. ಆದರೆ, ಈವರೆಗೆ ಸಹಕಾರ ಬ್ಯಾಂಕುಗಳಲ್ಲಿರುವ 4.13 ಲಕ್ಷ ರೈತರಿಗೆ 1,908 ಕೋಟಿ ರೂ ಸಾಲ ಮಾತ್ರ ಮನ್ನಾ ಆಗಿದೆ. ವಾಣಿಜ್ಯ ಬ್ಯಾಂಕುಗಳ 7.5 ಲಕ್ಷ ಖಾತೆಗಳಿಗೆ ಸರಕಾರ 2,900 ಕೋಟಿ ರೂ ಸಾಲ ಮನ್ನಾ ಹಣ ಪಾವತಿ ಮಾಡಿದ್ದಾಗಿದೆ. ಆದರೆ, ಸಹಕಾರ ಬ್ಯಾಂಕುಗಳ ಸಾಲದ ವಿಚಾರದಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮೈತ್ರಿ ಸರಕಾರ 1,500 ಕೋಟಿ ರೂ ಕೊಡುವುದರಲ್ಲಿತ್ತು. ಈ ಹಣ ಬಿಡುಗಡೆಗೆ ಈಗ ಚುನಾವಣೆ ಆಯೋಗ ತಡೆ ಹಿಡಿದಿದೆ. ಮೇ 27ರಂದು ನೀತಿ ಸಂಹಿತೆ ಮುಗಿಯುವವರೆಗೂ ಈ ಹಣವನ್ನು ಸರಕಾರ ರಿಲೀಸ್ ಮಾಡುವಂತಿಲ್ಲ.

ಇದನ್ನೂ ಓದಿ: ಕುಡಿದು ಮನೆಗೆ ಬಂದ ಗಂಡನ ಮರ್ಮಾಂಗವನ್ನೇ ಕತ್ತರಿಸಿದ ಹೆಂಡತಿ..!

ಒಟ್ಟಾರೆಯಾಗಿ, ಸಹಕಾರ ಬ್ಯಾಂಕುಗಳಲ್ಲಿರುವ ರೈತರ 9,448 ಕೋಟಿ ರೂಪಾಯಿಗಳಷ್ಟು ಸಾಲ ಮನ್ನಾ ಮಾಡುವ ಯೋಜನೆ ಇದೆ. ಹಾಗೆಯೇ ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ 12 ಸಾವಿರ ಕೋಟಿ ರೂ ಸಾಲವನ್ನೂ ಸರಕಾರ ಮನ್ನಾ ಮಾಡಲಿದೆ.

ಇದೇ ವೇಳೆ, ಕೇಂದ್ರ ಸರಕಾರದ ರೈತ ಯೋಜನೆಗೂ ಚುನಾವಣಾ ಆಯೋಗದ ತಡೆ ಬಿದ್ದಿದೆ. ಕೇಂದ್ರದ ಈ ರೈತ ಯೋಜನೆ ಇನ್ನೂ ಸರಿಯಾಗಿ ಟೇಕಾಫ್ ಆಗಿಯೇ ಇಲ್ಲ ಎಂಬ ಮಾತಿದೆ. ರಾಜ್ಯದಲ್ಲಿ ಬೆರಳೆಣಿಕೆಯಷ್ಟು ರೈತರಿಗಷ್ಟೇ ಮೊದಲ ಕಂತಿನ ಹಣ ಪಾವತಿಯಾಗಿದೆ. ಮೊದಲ ಕಂತಿನ ಹಣ ಪಡೆದವರಿಗೆ ಎರಡನೇ ಕಂತಿನ ಹಣ ನೀಡಲು ತಡೆ ಇಲ್ಲ. ಆದರೆ, ಹೊಸದಾಗಿ ರೈತರ ಅಕೌಂಟ್​ಗೆ ಹಣ ಹಾಕಲು ಸಾಧ್ಯವಿಲ್ಲ. ವರ್ಷಕ್ಕೆ 4 ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿಯನ್ನು ರೈತರ ಅಕೌಂಟ್​ಗೆ ಹಾಕಲಾಗುವುದು ಎಂದು ಕೇಂದ್ರ ಸರಕಾರವು ಈ ಬಾರಿಯ ಬಜೆಟ್​ನಲ್ಲಿ ಘೋಷಿಸಿತ್ತು. ಈಗ ಚುನಾವಣೆ ಮುಗಿಯುವವರೆಗೂ ರೈತರ ಖಾತೆಗೆ ಕೇಂದ್ರದ ಹಣ ಬೀಳುವ ಸಾಧ್ಯತೆ ಇಲ್ಲ.
Loading...

First published:March 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...