ಬೆಂಗಳೂರು ಕಾರ್ಪೋರೇಟರ್​ಗಳಿಗೆ ತಟ್ಟಿದ ರೇಡ್​ ಬಿಸಿ; ಚುನಾವಣಾ ಆಯೋಗದಿಂದ ದಾಳಿ

ಪೊಲೀಸರ ಸಹಾಯ ಪಡೆದು ಮಲ್ಲೇಶ್ವರಂ ಕಾಂಗ್ರೆಸ್ ಕಾರ್ಪೊರೇಟರ್ ಮಂಜುನಾಥ್, ಮಾರಪ್ಪನ ಪಾಳ್ಯ ಜೆಡಿಎಸ್ ಕಾರ್ಪೊರೇಟರ್ ಮಹಾದೇವು ಮನೆಗಳ‌ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ.

Rajesh Duggumane | news18
Updated:April 17, 2019, 8:06 AM IST
ಬೆಂಗಳೂರು ಕಾರ್ಪೋರೇಟರ್​ಗಳಿಗೆ ತಟ್ಟಿದ ರೇಡ್​ ಬಿಸಿ; ಚುನಾವಣಾ ಆಯೋಗದಿಂದ ದಾಳಿ
ಕೇಂದ್ರ ಚುನಾವಣೆ ಆಯೋಗ
Rajesh Duggumane | news18
Updated: April 17, 2019, 8:06 AM IST
ಥಾಮಸ್​/ಮಂಜುನಾಥ್​ ಹೊಸಕೋಟೆ

ಬೆಂಗಳೂರು (ಏ.17): ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಆದಾಯ ತೆರಿಗೆ ಇಲಾಖೆ ದಾಳಿ ಕೂಡ ನಡೆಸುತ್ತಿದೆ. ಮಂಗಳವಾರ ರಾತ್ರಿ ಚುಣಾವಣಾ ಅಧಿಕಾರಿಗಳು ಕಾರ್ಪೋರೇಟರ್​ಗಳ ಮನೆಗಳ‌ ಮೇಲೆ ರೇಡ್​ ನಡೆಸಿದ್ದಾರೆ.

ಪೊಲೀಸರ ಸಹಾಯ ಪಡೆದು ಮಲ್ಲೇಶ್ವರಂ ಕಾಂಗ್ರೆಸ್ ಕಾರ್ಪೊರೇಟರ್ ಮಂಜುನಾಥ್, ಮಾರಪ್ಪನ ಪಾಳ್ಯ ಜೆಡಿಎಸ್ ಕಾರ್ಪೊರೇಟರ್ ಮಹಾದೇವು ಮನೆಗಳ‌ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಆದರೆ, ರೇಡ್​ ವೇಳೆ ಏನು ಲಭ್ಯವಾಗಿಲ್ಲ ಎನ್ನಲಾಗಿದೆ. ಚುನಾವಣಾ ಆಯೋಗದ ಆದೇಶ ಹಿನ್ನೆಲೆಯಲ್ಲಿ ಅಧಿಕಾರಿಗಳು ರೇಡ್​ ನಡೆಸಿದ್ದಾರೆ.

ಈ ದಾಳಿಗೆ ಸಂಬಂಧಿಸಿ ಮಹಾದೇವು ಪ್ರತಿಕ್ರಿಯಿಸಿದ್ದು, “ಯಾರೋ ಕೊಟ್ಟ ದೂರಿನ‌ ಮೇರೆಗೆ ಅಧಿಕಾರಿಗಳು ಬಂದು ತಪಾಸಣೆ ನಡೆಸಿದರು. ಅವರಿಗೆ ಏನೂ ಸಿಗದೆ ವಾಪಸು ಹೋದರು,” ಎಂದಿದ್ದಾರೆ.

ಇದನ್ನೂ ಓದಿ: ಮುಂದುವರೆದ ಐಟಿ ದಾಳಿ; ದೇವೇಗೌಡರ ಕುಟುಂಬಕ್ಕೆ ಮತ್ತೆ ಶಾಕ್

ಮಾಜಿ ಕಾರ್ಪೋರೇಟರ್​ಗೂ ಬಿಸಿ: ಮಾಜಿ ಕಾರ್ಪೋರೆಟರ್ ಜಯಪ್ಪರೆಡ್ಡಿ ಮನೆ ಮೇಲೂ ರೇಡ್​ ನಡೆದಿದೆ. ಆರ್​ಟಿ ನಗರ ಬಳಿಯ ಚೋಳನಾಯಕನಹಳ್ಳಿ ಮನೆಯಲ್ಲಿ ಅಕ್ರಮ ಹಣ ಹಾಗೂ ಚುನಾವಣಾ ಸಂಬಂಧಿ ವಸ್ತುಗಳನ್ನು ಇಟ್ಟಿರುವ ಶಂಕೆ ಮೇರೆಗೆ ದಾಳಿ ನಡೆಸಲಾಗಿದೆ. ಕಾರ್ಪೋರೇಟರ್​ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಜಯಸಿಂಹ ಅವರ ಸಂಜಯನಗರದ ನಿವಾಸದ ಮೇಲೂ ಚುನಾವಣಾ ಆಯೋಗ ಕಣ್ಣಿಟ್ಟಿದೆ. ದಾಳಿ ವೇಳೆ ಏನು ಸಿಗದೆ ವಾಪಾಸಾಗಿದ್ದಾರೆ.
Loading...

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626