ಬೆಂಗಳೂರು (ಅ.31): ಶಿರಾ ಮತ್ತು ರಾಜರಾಜೇಶ್ವರಿನಗರದ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆ ವಿಧಾನಪರಿಷತ್ ಚುನಾವಣಾ ಮತ ಏಣಿಕೆ ದಿನಾಂಕವನ್ನು ಚುನಾವಣಾ ಆಯೋಗ ಮುಂದೂಡಿದೆ. ಅ. 21ರಂದು ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿತ್ತು. ವಿಧಾನ ಪರಿಷತ್ನ 2 ಪದವೀಧರ, 2 ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಇದರ ಮತಏಣಿಕೆ ಕಾರ್ಯ ನ.2ರಂದು ನಡೆಯಬೇಕಿತ್ತು. ನ.3ಕ್ಕೆ ಉಪಚುನಾವಣೆ ಇರುವುದರಿಂದ ಈ ಮತ ಎಣಿಕೆ ಆದೇಶ ಮುಂದೂಡಲಾಗಿದೆ. ಇದರ ಬದಲಾಗಿ ನ.10 ಮತ ಎಣಿಕೆ ಕಾರ್ಯ ನಡೆಯಲಿದೆ.
ಈ ಕುರಿತು ಕೇಂದ್ರ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನ. 10ಕ್ಕೆ ಮತ ಎಣಿಕೆ ನಡೆಯಲಿದೆ. ನ. 13ಕ್ಕೆ ಚುನಾವಣಾ ಪ್ರಕ್ರಿಯೆ ಅಂತ್ಯಗೂಳಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ
ಬೆಂಗಳೂರು ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ, ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಮೂರು ರಾಜಕೀಯ ಪಕ್ಷಗಳು ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಪ್ರಚಾರ ನಡೆಸಿದ್ದರು. ಅಲ್ಲದೇ ಕಳೆದ ಬಾರಿಗೆ ಹೋಲಿಸಿದರೆ ಈ ಚುನಾವಣಾ ಮತದಾನ ಹೆಚ್ಚಿ ಸಂಖ್ಯೆಯಲ್ಲಿ ಶಾಂತಿಯುತವಾಗಿ ನಡೆದಿತ್ತು.
ಇದನ್ನು ಓದಿ: ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ; ಬೆಂಗಳೂರಿನ ಈ ಭಾಗದಲ್ಲಿ ಸಿಗಲ್ಲ ಮದ್ಯ
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಪುಟ್ಟಣ್ಣ, ಕಾಂಗ್ರೆಸ್ನಿಂದ ಪ್ರವೀಣ್ ಪೀಟರ್, ಜೆಡಿಎಸ್ ನಿಂದ ಎಪಿ ರಂಗನಾಥ್ ಚುನಾವಣಾ ಕಣದಲ್ಲಿದ್ದರು. ಈಶಾನ್ಯ ಶಿಕ್ಷಕರ ಕ್ಷೇತ್ರಕದಲ್ಲಿ ಬಿಜೆಪಿಯಿಂದ ಶಶಿಲ್ ನಮೋಶಿ, ಕಾಂಗ್ರೆಸ್ನ ಶರಣಪ್ಪ ಮಟ್ಟೂರು, ಜೆಡಿಎಸ್ ತಿಮ್ಮಯ್ಯ ಪುರ್ಲೆ ಚುನಾವಣೆ ಎದುರಿಸಿದ್ದರು.
ಇನ್ನು ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಎಂ ಚಿದಾನಂದಗೌಡ, ಕಅಂಗ್ರೆಸ್ ರಮೇಶ್ ಬಾಬು, ಜೆಡಿಎಸ್ನಿಂದ ಚೌಡರೆಡ್ಡಿ ತೂಪಲ್ಲಿ ಕಣದಲ್ಲಿದ್ದರು. ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ವಿಎಸ್ ಸಂಕನೂರ, ಕಾಂಗ್ರೆಸ್ ಡಾ.ಆರ್ಎಂ ಕುಬೇರಪ್ಪ, ಜೆಡಿಎಸ್ ಬೆಂಬಲಿತ ಪಕ್ಷೇತರ ಬಸವರಾಜ ಗುರಿಕಾರ ಚುನಾವಣೆ ಎದುರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ