Bengaluru: ಮತದಾನ ಹೆಚ್ಚಿಸಲು ಮಹತ್ವದ ಹೆಜ್ಜೆ ಇಟ್ಟ ಚುನಾವಣಾ ಆಯೋಗ

(ಸಾಂದರ್ಭಿಕ ಚಿತ್ರ)

(ಸಾಂದರ್ಭಿಕ ಚಿತ್ರ)

ರಿಯಲ್ ಟೈಮ್ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿರುವ ಬಿಬಿಎಂಪಿ, ವೋಟಿಂಗ್ ಮಾಡಲು ಕಾರಿನಲ್ಲಿ ಬರೋರಿಗೆ ಮತಗಟ್ಟೆ ಸುತ್ತಮುತ್ತಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚುನಾವಣೆ ದಿನ (Election Day) ಪಾರ್ಕಿಂಗ್ ಸಮಸ್ಯೆ ಎಂದು ಹೇಳಿ ಜನ ವೋಟಿಂಗ್ ಮಾಡದೇ ಮನೆಯಲ್ಲೇ ಉಳಿಯುತ್ತಾರೆ. ಯಾಕಂದ್ರೆ ಮತಗಟ್ಟೆ (Election Booth) ಮುಂದೆ ಎಷ್ಟು ವಾಹನವಿದೆ? ಎಷ್ಟು ಜನರಿದ್ದಾರೆ ಅನ್ನೋದು ಗೊತ್ತೇ ಆಗಲ್ಲ. ವೋಟ್ (Vote)​ ಮಾಡೋಕೆ ಹೋದರೂ ಅಲ್ಲಿ ಪಾರ್ಕಿಂಗ್ (Parking)​ ಸಿಗಲ್ಲ. ಇನ್ನು ಪಾರ್ಕಿಂಗ್​ ಸಿಕ್ಕರೂ ಜನರ ಸಾಲು ಹೆಚ್ಚಾಗಿರುತ್ತೆ. ಇದೇ ಕಾರಣಕ್ಕೆ ಜನ ವೋಟಿಂಗ್​ ಬೂತ್​​ಗೆ (Voting Booth) ಬರಲ್ಲ. ಇದೀಗ ವೋಟ್​ ಹಾಕದ ಜನರನ್ನು ಕರೆತರಲು ಚುನಾವಣಾ ಆಯೋಗ (Election Commission) ಆ್ಯಪ್​ ಒಂದನ್ನು ಸಿದ್ಧ ಮಾಡುತ್ತಿದೆ.


ರಿಯಲ್ ಟೈಮ್ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿರುವ ಬಿಬಿಎಂಪಿ, ವೋಟಿಂಗ್ ಮಾಡಲು ಕಾರಿನಲ್ಲಿ ಬರೋರಿಗೆ ಮತಗಟ್ಟೆ ಸುತ್ತಮುತ್ತಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.


ಈ ಸಂಬಂಧ ಪ್ರತ್ಯೇಕ ಪಾರ್ಕಿಂಗ್ ಆಪ್ ಬಿಡುಗಡೆ ಮಾಡಲಿದೆ. ಇನ್ನೊಂದು ವಾರದಲ್ಲಿ ಚುನಾವಣಾ ಆಯೋಗ ಪಾರ್ಕಿಂಗ್ ಆಪ್ (Parking App) ಬಿಡುಗಡೆ ಮಾಡಲಿದೆ.‌


ಇದೇ ರೀತಿ ಮತಗಟ್ಟೆಯ ದಿನ ಮತದಾರರ ಕ್ಯೂ ಕುರಿತು ಮತ್ತೊಂದು ಆಪ್ ರೆಡಿ ಮಾಡುತ್ತಿದ್ದು, ಕ್ಯೂಯಿಂಗ್ ಆಪ್ ನಲ್ಲಿ ಎಷ್ಟು ಮತದಾರರು ಇದ್ದಾರೆ ಎಂಬ ಮಾಹಿತಿ ತಿಳಿಯುತ್ತದೆ. ನಿಮ್ಮ ಮೊಬೈಲ್​ನಲ್ಲಿ ರಿಯಲ್ ಟೈಮ್ ವೀಕ್ಷಿಸಿ ಮತದಾರ ಸಂಖ್ಯೆ ಕಡಿಮೆ ಇದ್ದಾಗ ಬರಬಹುದಾಗಿದೆ.




ಇದನ್ನೂ ಓದಿ:  BJP Vs Congress: ಯಡಿಯೂರಪ್ಪ‌ ಹೆಗಲ ಮೇಲೆ ಬಂದೂಕು ಇಟ್ಟು, ನನಗೆ ಗುರಿ ಇಟ್ಟಿದ್ದಾರೆ: ಶೆಟ್ಟರ್


ಆ್ಯಪ್​ನಲ್ಲಿ ಏನಿರುತ್ತೆ?


*ಉಚಿತ ಪಾರ್ಕಿಂಗ್, ಸರತಿ ಸಾಲಿನ ಬಗ್ಗೆ ಮಾಹಿತಿ


*ನಿಮ್ಮ ಮತಗಟ್ಟೆ ಲೈವ್ ದೃಶ್ಯ ವೀಕ್ಷಿಸಬಹುದು


*ಮತಗಟ್ಟೆ ದಿನ ಪಾರ್ಕಿಂಗ್ ಜಾಗ ಕುರಿತು ಮಾಹಿತಿ


*ರಿಯಲ್ ಟೈಮ್ ವಿಡಿಯೋ, ಮತದಾನಕ್ಕೆ ಪ್ಲ್ಯಾನ್


*ವಾಹನದಲ್ಲಿ ಬರೋರಿಗೆ ಪಾರ್ಕಿಂಗ್ ಬಗ್ಗೆ ಮಾಹಿತಿ


*ಸಾಲು ಎಷ್ಟಿದೆ ಎಂಬ ಕುರಿತು ಲೈವ್ ನೋಡಲು ಅವಕಾಶ

First published: