ಕುಂದಗೋಳ, ಚಿಂಚೋಳಿ ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆಯಿಂದ ಮನೆ ಮನೆ ಪ್ರಚಾರ

ಇಂದು ಕುಂದಗೋಳ, ಚಿಂಚೋಳಿ ವಿಧಾನಸಭಾ ಉಪ ಚುನಾವಣೆ ಭಾನುವಾರ ಮೇ 19ರಂದು ಮತದಾನ ನಡೆಯಲಿದ್ದು, ಲೋಕಸಭಾ ಫಲಿತಾಂಶದಂತೆ ಈ ಎರಡು ಉಪ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಿಲಿದೆ. 

Seema.R | news18
Updated:May 17, 2019, 10:13 PM IST
ಕುಂದಗೋಳ, ಚಿಂಚೋಳಿ ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆಯಿಂದ ಮನೆ ಮನೆ ಪ್ರಚಾರ
ಡಿಕೆ ಶಿವಕುಮಾರ್​-ಯಡಿಯೂರಪ್ಪ
Seema.R | news18
Updated: May 17, 2019, 10:13 PM IST
ಹುಬ್ಬಳ್ಳಿ/ ಕಲಬುರಗಿ (ಮೇ.17): ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಗಮನ ಸೆಳೆದಿರುವ ಚಿಂಚೋಳಿ, ಕುಂದಗೋಳ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಅಂತಿಮ ತೆರೆ ಬಿದ್ದಿದೆ.

ಸಿಎಸ್​ ಶಿವಳ್ಳಿ ಸಾವಿನಿಂದ ತೆರವಾಗಿದ್ದ ಕುಂದಗೋಳ ಹಾಗೂ ಉಮೇಶ್​ ಜಾಧವ್​ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ಕ್ಷೇತ್ರಗಳು ಕಾಂಗ್ರೆಸ್​ ಹಾಗೂ ಬಿಜೆಪಿಗೆ ಸೀಟು ಹೆಚ್ಚಳದ ದೃಷ್ಟಿಯಿಂದ ಅತಿ ಮುಖ್ಯ ಚುನಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಕ್ಷೇತ್ರಗಳಲ್ಲಿ ಮೊಕ್ಕಂ ಹೂಡಿ ಒಂದು ತಿಂಗಳ ಕಾಲ ಚುನಾವಣಾ ಪ್ರಚಾರ ನಡೆಸಿದರು.

ಬಹಿರಂಗ ಚುನಾವಣೆ ಪ್ರಚಾರ ಇಂದು ಮುಗಿದ್ದಿದೆ. ಇದೇ ದಿನ ಎರಡು ಪಕ್ಷದ ನಾಯಕರು ರೋಡ್​ ಶೋ ನಡೆಸಲು ಮುಂದಾಗಿದ್ದರು. ಆದರೆ, ಪಶ್ಚಿಮ ಬಂಗಾಳದಲ್ಲಿ ರೋಡ್​ ಶೋ ವೇಳೆ ನಡೆದ ಹಿಂಸಾಚಾರ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾರಣ ನೀಡಿ, ರೋಡ್​ ಶೋಗೆ ತಡೆ ನೀಡಿತ್ತು.

ನಾಳೆಯಿಂದ ನಾಯಕರು ಮನೆ ಮನೆ ಪ್ರಚಾರ ನಡೆಸಲಿದ್ದು, 7ನೇ ಹಂತದ ಲೋಕಸಭಾ ಚುನಾವಣೆಯಂದೇ ಕರ್ನಾಟಕದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ  ನಡೆಯಲಿದೆ. ಭಾನುವಾರ ಮೇ 19ರಂದು ಮತದಾನ ನಡೆಯಲಿದ್ದು, ಲೋಕಸಭಾ ಫಲಿತಾಂಶ ದಿನದಂದೇ ಈ ಎರಡು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಿಲಿದೆ.

ಇದನ್ನು ಓದಿ: ಉಗ್ರಗಾಮಿಗಳು ಇಂದು ದೇಶದಲ್ಲಿ ಭಕ್ತರಾಗುತ್ತಿದ್ದಾರೆ; ಸಿದ್ದರಾಮಯ್ಯ ಆತಂಕ

ಕುಂದಗೋಳ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನ ಹೊಣೆ ಹೊತ್ತ ಡಿಕೆ ಶಿವಕುಮಾರ್​ ಚುನಾವಣಾ ಪ್ರಚಾರ ಆರಂಭವಾದಾಗಿನಿಂದ ಸ್ಥಳದಲ್ಲಿ ಮೊಕ್ಕಂ ಹೂಡಿ ಕುಸುಮಾ ಶಿವಳ್ಳಿ ಪರ ಪ್ರಚಾರ ನಡೆಸಿದ್ದರು. ಇನ್ನು ಸಿದ್ದರಾಮಯ್ಯ , ದಿನೇಶ್​ ಗುಂಡೂರಾವ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಕೂಡ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.ಕಾಂಗ್ರೆಸ್​ ನಾಯಕರಿಗೆ ಕಡಿಮೆ ಇಲ್ಲದಂತೆ ಬಿಜೆಪಿ ನಾಯಕರು ಕೂಡ ವೀರಶೈವ ಧರ್ಮವನ್ನು ಅಸ್ತ್ರವಾಗಿಸಿಕೊಂಡು ಎರಡು ಕ್ಷೇತ್ರದಲ್ಲಿ ಮತಯಾಚಿಸಿದರು. ಬಿಎಸ್​ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್​ ಶೆಟ್ಟರ್​ ಸೇರಿದಂತೆ ಜಾಧವ್​ ಮಗ ಅವಿನಾಶ್​ ಜಾಧವ್​, ಚಿಕ್ಕನಗೌಡ್ರ ಪರ ಭರ್ಜರಿ ಪ್ರಚಾರ ನಡೆಸಿದ್ದರು.

ಇಂದಿನಿಂದ ಆಯಾ ಕ್ಷೇತ್ರದವರನ್ನು ಹೊರತುಪಡಿಸಿ, ಹೊರಗಿನಿಂದ ಬಂದ ನಾಯಕರು ಕ್ಷೇತ್ರವನ್ನು ತೊರೆಯಬೇಕಿದೆ. ಅದರಂತೆ ಇಂದು ಸಂಜೆಯ ಎಲ್ಲ ಪಕ್ಷಗಳ ನಾಯಕರು ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರದಿಂದ ಹೊರಬಂದಿದ್ದಾರೆ.


First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ