ಮತದಾನದ ಹಕ್ಕಿನಿಂದ ವಂಚಿತರಾದ ಚುನಾವಣಾ ರಾಯಭಾರಿ; ಈ ಬಾರಿ ರಾಹುಲ್​ ದ್ರಾವಿಡ್​ ಓಟ್​ ಮಾಡುವಂತಿಲ್ಲ

ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ  ರಾಹುಲ್​ ದ್ರಾವಿಡ್​ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆಶ್ಚರ್ಯವಾದರೂ ಇದು ಸತ್ಯ.

Seema.R | news18
Updated:April 14, 2019, 12:05 PM IST
ಮತದಾನದ ಹಕ್ಕಿನಿಂದ ವಂಚಿತರಾದ ಚುನಾವಣಾ ರಾಯಭಾರಿ; ಈ ಬಾರಿ ರಾಹುಲ್​ ದ್ರಾವಿಡ್​ ಓಟ್​ ಮಾಡುವಂತಿಲ್ಲ
ರಾಹುಲ್​ ದ್ರಾವಿಡ್​
Seema.R | news18
Updated: April 14, 2019, 12:05 PM IST
ಥಾಮಸ್​ ಪುಷ್ಪರಾಜ್​

ಬೆಂಗಳೂರು (ಎ.14): ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗರಾಗಿರುವ ರಾಹುಲ್​ ದ್ರಾವಿಡ್​ ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿ. 2018ರ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರಿಗೆ  ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ  ರಾಹುಲ್​ ದ್ರಾವಿಡ್​ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆಶ್ಚರ್ಯವಾದರೂ ಇದು ಸತ್ಯ. ಈ ಬಾರಿ ದ್ರಾವಿಡ್​ ಕುಟುಂಬ ಮತದಾನದ ಹಕ್ಕಿನಿಂದ ವಂಚಿತವಾಗಿದೆ.

ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತಿದ್ದ ಕ್ರಿಕೆಟಿಗ ಇದೇ ಮೊದಲ ಬಾರಿ ಈ ಹಕ್ಕಿನಿಂದ ವಂಚಿವಾಗಿದೆ. ಇದಕ್ಕೆ ಕಾರಣ ಸ್ಥಳಾಂತರ. ಇಂದಿರಾನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಮತ್ತಿಕೆರೆಗೆ ಸ್ಥಳಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಗೊಂದಲ ಸೃಷ್ಟಿಯಾಗಿದೆ.

ಈ ಹಿಂದೆ ಇಂದಿರಾನಗರದಲ್ಲಿ ಮತದಾನದ ಹಕ್ಕನ್ನು ಹೊಂದಿದ್ದ ದ್ರಾವಿಡ್​ ಕುಟುಂಬ ಮತ್ತಿಕೆರೆಗೆ ಸ್ಥಳಾಂತರವಾದ ಬಳಿಕ ಅಲ್ಲಿನ ಮತದಾರ ಪಟ್ಟಿಯಲ್ಲಿ ಹೆಸರನ್ನು ನಮೂದಿಸಿಲ್ಲ. ಸ್ಥಳಾಂತರವಾಗುತ್ತಿದ್ದಂತೆ ಇಂದಿರಾನಗರದಲ್ಲಿದ್ದ ಮತ ಪಟ್ಟಿಯ ಹೆಸರನ್ನು ಅಳಿಸಿ ಹಾಕುವಂತೆ ದ್ರಾವಿಡ್​ ಸಹೋದರ ವಿಜಯ್​ ಫಾರ್ಮ್​ 7ನ್ನು ಇಂದಿರಾನಗರದ ಮತದಾನದ ಅಧಿಕಾರಿಗಳಿಗೆ ನೀಡಿದ್ದರು. ಅದರಂತೆ ದ್ರಾವಿಡ್​ ಕುಟುಂಬದ ಹೆಸರನ್ನು ಅಳಿಸಲಾಗಿದೆ.

ಎಲ್ಲರಿಗೂ ಒಂದೇ ಕಾನೂನು; ಚುನಾವಣಾಧಿಕಾರಿ

ಆದರೆ, ಇವರ ಕುಟುಂಬ  ಅಶ್ವಥ್​ ನಗರದ  ಆರ್​ಎಂವಿ ಬಡಾವಣೆಗೆ ವರ್ಗಾಗೊಂಡಿದೆ. ಈ ಪ್ರದೇಶ ಮತ್ತಿಕೆರೆ ವಾರ್ಡ್​ಗೆ ಬರಲಿದೆ. ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಲು ಕುಟುಂಬ ವಿಫಲವಾಗಿರುವುದು ಈ ಸಮಸ್ಯೆ ಉಂಟಾಗಿದೆ.
Loading...

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​, ಮತದಾನ ಪಟ್ಟಿಯ ಕರಡು ಪ್ರತಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ಅಂತಿಮ ಪಟ್ಟಿಯನ್ನು ಮಾರ್ಚ್​ನಲ್ಲಿ ಸಿದ್ದಮಾಡಲಾಗಿದೆ.

ದ್ರಾವಿಡ್​ ಮನೆಗೆ ನಮ್ಮ ಸಿಬ್ಬಂದಿಗಳು ಹೋಗಿದ್ದರು. ಅವರ ಕುಟುಂಬದ ಸದಸ್ಯರು ಮನೆಯೊಳಗೆ ಬಿಡಲಿಲ್ಲ. ಈ ಬಗ್ಗೆವಿದೇಶಿ ಪ್ರವಾಸದಲ್ಲಿದ್ದ  ರಾಹುಲ್​ ಅವರ ಗಮನಕ್ಕೂ ಕೂಡ ತರಲಾಯಿತು, ಆದರೆ, ಅವರಿಂದ ಯಾವುದೇ ಸಂದೇಶ ಸಿಗಲಿಲ್ಲ.

ಇದನ್ನು ಓದಿ: ಮುನಿಸು ಮರೆತ ನಾಯಕರು; ಚಾಮುಂಡೇಶ್ವರಿಯಲ್ಲಿ ಇಂದು ಸಿದ್ದರಾಮಯ್ಯ- ಜಿ.ಟಿ. ದೇವೇಗೌಡ ಜಂಟಿ ಪ್ರಚಾರ

ಅವರ ಕುಟುಂಬ ಸದಸ್ಯರು ಕೇವಲ ಫಾರ್ಮ್​ 7  ಅರ್ಜಿ ಮಾತ್ರ ನೀಡಿದ್ದಾರೆ. ಮತದಾನ ಪಟ್ಟಿಗೆ ಹೆಸರು ಸೇರಿಸುವ ಫಾರ್ಮ್​ 6ಅರ್ಜಿ  ನೀಡದ ಪರಿಣಾಮ ಈ ರೀತಿಯಾಗಿದೆ. ಇದರಲ್ಲಿ ನಮ್ಮ ತಪ್ಪಿಲ್ಲ. ಮಾರ್ಚ್​ 16ಕ್ಕೆ ಮುಂಚೆ ಅವರು ಫಾರ್ಮ್​ 6 ಅರ್ಜಿ ನೀಡಿದ್ದರೆ ಅವರ ಹೆಸರು ದಾಖಲಾಗುತ್ತಿದ್ದು . ಇದನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ. ಚುನಾವಣೆ ನಂತರವೇ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಅವರು ಚುನಾವಣಾ ರಾಯಭಾರಿಯಾಗಿದ್ದರು. ಅವರಿಗೆ ಮತದಾನದ ಅವಕಾಶ ನೀಡಲು ಬರುವುದಿಲ್ಲ ಎಲ್ಲರಿಗೂ ಒಂದೇ ರೀತಿಯ ಕಾನೂನು ಎಂದು ಸ್ಪಷ್ಟಪಡಿಸಿದರು.

First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626