ವಿಜಯನಗರ: ರಾಜ್ಯ ವಿಧಾನಸಭಾ ಚುನಾವಣೆಯ (Election Ambassador) ರಾಯಭಾರಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ (Manjamma Jogathi) ಅವರು ಮತದಾನ ಮಾಡಿದರು. ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದ ಮಾತಾ ಮಂಜಮ್ಮ ಜೋಗತಿ ಅವರು ಎಲ್ಲರೂ ಮತದಾನ ಮಾಡುವಂತೆ ವಿನಂತಿ ಮಾಡಿದರು.
ಈ ಬಾರಿ ರಾಜ್ಯ ಚುನಾವಣಾ ಆಯೋಗದ ರಾಯಭಾರಿ ಆಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತ ಮಂಜಮ್ಮ ಜೋಗತಿಯವರು ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಅವರು, ಚುನಾವಣೆ ಅಂದ್ರೆ ಭಾರತ ದೇಶದ ಬಹುದೊಡ್ಡ ಹಬ್ಬ ಅಂತ ನಾನು ಭಾವಿಸಿದ್ದೇನೆ. ಪ್ರತಿಯೊಬ್ಬರೂ ಮತದಾನ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಎಂದು ಹೇಳಿದರು.
ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ - ಎಲ್ಲೆಲ್ಲಿ ಎಷ್ಟೆಷ್ಟು ಮತದಾನ ಆಗಿದೆ?
ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರು ಚುನಾವಣೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದ ಮಂಜಮ್ಮ ಜೋಗತಿ ಅವರು, ರಾಜ್ಯದ ಪ್ರತಿಯೊಬ್ಬ ಯುವಕ ಯುವತಿಯರು ಸೂಕ್ತವಾದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಕೇಳಿಕೊಂಡರು.
ರೈಲಿನಲ್ಲಿ ಬಂದವರ ಪರದಾಟ
ಬೆಂಗಳೂರಿನಿಂದ ರಾಯಚೂರಿಗೆ ಮತದಾನ ಮಾಡಲೆಂದು ರೈಲಿನಲ್ಲಿ ಬಂದವರು ಪರದಾಟ ನಡೆಸಿದ್ದಾರೆ. ಬೆಂಗಳೂರಿನಿಂದ ನಿನ್ನೆ ರಾತ್ರಿ ಹೊರಟಿದ್ದ ಬೆಂಗಳೂರು ನಾಂದೇಡ ರೈಲು ಇಂದು ಬೆಳಗ್ಗೆ ಒಂದೂವರೆ ಗಂಟೆ ತಡವಾಗಿ ರಾಯಚೂರು ತಲುಪಿದ್ದು, ಇದರಿಂದ ಮತದಾನಕ್ಕೆಂದು ಊರಿಗೆ ಬಂದಿದ್ದ ಪ್ರಯಾಣಿಕರು ತೀವ್ರ ಕಿರಿಕಿರಿ ಅನುಭವಿಸಿದರು. ಬೆಂಗಳೂರು ನಾಂದೇಡ ರೈಲು ನಿನ್ನೆ ರಾತ್ರಿ 11.30ಕ್ಕೆ ಬೆಂಗಳೂರಿನಿಂದ ಹೊರಟಿತ್ತು. ಆದರೆ ಸರಿಯಾದ ಸಮಯಕ್ಕೆ ರಾಯಚೂರಿಗೆ ತಲುಪದೆ ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.
ಇದನ್ನೂ ಓದಿ: Weather Report: ಮತದಾನದಂದೇ ರಾಜ್ಯದ ಹಲವೆಡೆ ಮಳೆಯಾಗೋ ಸಾಧ್ಯತೆ; ಹೀಗಿದೆ ಇಂದಿನ ಹವಾಮಾನ ವರದಿ
ಪರೀಕ್ಷೆ ಇದ್ದರೂ ವೋಟ್ ಹಾಕಿದ ವಿದ್ಯಾರ್ಥಿನಿ
ಉಡುಪಿ: ಉಡುಪಿ ವಿದ್ಯಾರ್ಥಿನಿ ಸೋನಾಲಿ ಎಂಬಾಕೆ ತನಗೆ ಪರೀಕ್ಷೆ ಇದ್ದರೂ ಕೂಡ ಮತ ಚಲಾಯಿಸೋಕೆ ಬಂದು ಜವಾಬ್ದಾರಿ ಮೆರೆದಿದ್ದಾರೆ. ವಿಶೇಷ ಅಂದ್ರೆ ಸೋನಾಲಿ ಅವರಿಗೆ ಇದು ಮೊದಲ ಮತ. ಮೂಡಬಿದಿರೆಯಲ್ಲಿ ಇಂಜಿನಿಯರಿಂಗ್ ವಿದ್ಯಭ್ಯಾಸ ಮಾಡುತ್ತಿರುವ ಸೋನಾಲಿ ಅವರು ತನ್ನ ಹುಟ್ಟೂರು ಉಡುಪಿಗೆ ಬಂದು ಮತ ಚಲಾಯಿಸಿ ಜವಾಬ್ದಾರಿ ಮೆರೆದಿದ್ದಾರೆ.
ಮೊದಲ ಮತ ಚಲಾಯಿಸಿ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ವಿದ್ಯಾರ್ಥಿನಿ ಸೋನಾಲಿ, ನನ್ನ ವೋಟಿಗೆ ತುಂಬ ಬೆಲೆ ಇದೆ. ನನ್ನ ಮತ ನನ್ನ ಧ್ವನಿ ಅನ್ನೋ ಹೆಮ್ಮೆ ಇದೆ. ಹೀಗಾಗಿ ಪರೀಕ್ಷೆ ಇದ್ದರೂ ಸಹ ಮತ ಹಾಕಲು ಬಂದಿದ್ದೇನೆ. ನಾನು ಉಡುಪಿಯವಳಾದರೂ ಮೂಡುಬಿದಿರೆಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದೇನೆ. ಹೀಗಾಗಿ ಪರೀಕ್ಷೆ ನಡೆಯುತ್ತಿದ್ದರೂ ಮತ ಹಾಕಲೇ ಬೇಕು ಅಂತ ಬಂದಿದ್ದೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ