• Home
 • »
 • News
 • »
 • state
 • »
 • Crime News: ಬುದ್ದಿ ಮಾತು ಹೇಳಿದ ತಮ್ಮನ ಕೊಲೆ ಮಾಡಿದ ಅಣ್ಣ..!

Crime News: ಬುದ್ದಿ ಮಾತು ಹೇಳಿದ ತಮ್ಮನ ಕೊಲೆ ಮಾಡಿದ ಅಣ್ಣ..!

ಘಟನಾ ಸ್ಥಳ

ಘಟನಾ ಸ್ಥಳ

ಬುದ್ದಿ ಮಾತು ಹೇಳಿದ ತಮ್ಮನಿಗೆ ಚಾಕು ಇರಿದು ಕೊಲೆ ಮಾಡಿದ ಅಣ್ಣ...!ಕುಟುಂಬಸ್ಥರ ಎದುರೆ ಕೊಲೆ ಮಾಡಿ ಎಸ್ಕೆಪ್...!ಯಾದಗಿರಿ:ಒಡಹುಟ್ಟಿದ್ದ ಅಣ್ಣ ತಮ್ಮಂದಿರು ಒಂದೆ ಮನೆಯಲ್ಲಿ ವಾಸವಾಗಿದ್ದರು.ಆದರೆ, ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

 • Share this:

  ಯಾದಗಿರಿ():ಒಡಹುಟ್ಟಿದ್ದ ಅಣ್ಣ ತಮ್ಮಂದಿರು (Brothers) ಒಂದೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬುದ್ದಿ ಮಾತು ಹೇಳಿದ ತಮ್ಮನಿಗೆ ಅಣ್ಣ ಕೋಪಗೊಂಡು ಚಾಕು ಇರಿದು ಕೊಲೆ ಮಾಡಿದ್ದಾನೆ. ಯಾದಗಿರಿ (Yadgiri) ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಂಪಾಡ ತಾಂಡಾದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ದೇವಿಂದ್ರ ಚವ್ಹಾಣ ಹಾಗೂ ಜೈರಾಮ ಸಹೋದರರು ಒಂದೆ ಮನೆಯಲ್ಲಿ ವಾಸವಾಗಿದ್ದರು. ದೇವಿಂದ್ರ ಜೀವನ ನಡೆಸಲು ಹೈದ್ರಾಬಾದ್ ನಲ್ಲಿ (Hyderabad) ಕೂಲಿ ಕೆಲಸ ಮಾಡಲು ಕುಟುಂಬಸ್ಥರ ಜೊತೆ ತೆರಳಿದನು. ಹೈದ್ರಾಬಾದ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಅದೆ ರೀತಿ ಜೈರಾಮ ಪುಣೆಯಲ್ಲಿ ವಲಸೆ ಹೋಗಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದನು.


  ಯುಗಾದಿ ಹಬ್ಬದ ದಿನ ಯಂಪಾಡ ತಾಂಡಾದಲ್ಲಿ ಆಂಜನೇಯ ದೇವಸ್ಥಾನದ ಜಾತ್ರೆ ಹಿನ್ನೆಲೆ ಸಹೋದರಿಬ್ಬರು ಪುಣೆ ಹಾಗೂ ಹೈದ್ರಾಬಾದ್ ನಿಂದ ತಾಂಡಾಕ್ಕೆ  ಕುಟುಂಬಸ್ಥರ ಜೊತೆ ಆಗಮಿಸಿದರು. ಈ ವೇಳೆ ಸಹೋದರಿಬ್ಬರು ಯಂಪಾಡ ಗ್ರಾಮದಲ್ಲಿ ನಡೆಯುತ್ತಿರುವ ಅಂಜನೇಯ ದೇವಸ್ಥಾನ ಜಾತ್ರೆ ಹಾಗೂ ಯುಗಾದಿ ಹಬ್ಬದ ನಿಮಿತ್ಯವಾಗಿ ತಾಂಡಾಕ್ಕೆ ಆಗಮಿಸಿದರು.


  ಜಮ್ಲಾನಾಯಕ ಮಕ್ಕಳ ನಡುವೆ ಆಸ್ತಿ ನಡುವೆ ಕದನ...!


  ಚಂದ್ರಪ್ಪ ಹಾಗೂ ರೇಣುಕಾ ದಂಪತಿಗಳಿಗೆ ನಾಲ್ಕು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಕೊಲೆಯಾದ ದೇವಿಂದ್ರ ಚವ್ಹಾಣನ ತಂದೆ ಚಂದ್ರಪ್ಪ ಹೆಸರಿನಲ್ಲಿ 7 ಎಕರೆ ಜಮೀನು ಇದ್ದು,ಚಂದ್ರಪ್ಪ ತಾಂಡಾದ ನಿವಾಸಿಯಾದ ಜಮ್ಲಾನಾಯಕ ಅವರ ಮಕ್ಕಳಿಗೆ ಮೂರು ವರ್ಷದ ಹಿಂದೆ ಲಿಸ್ಗೆ ಹಾಕಿದರು.


  ಆದರೆ, ಜಮ್ಲಾನಾಯಕ ನಾಯಕನ ಮಕ್ಕಳು ಭೂಮಿ ಮಾಟಗೇಜ್ ( ಮುದ್ದತ್ತು ನೊಂದಣಿ)  ಮಾಡಿಕೊಂಡು ಚಂದ್ರಪ್ಪನಿಂದ ಪಹಣಿ ಪಡೆದು ಗುರುಮಠಕಲ್ ಪಟ್ಟಣದ ಕೆಬಿಎಸ್  ಬ್ಯಾಂಕ್ ಒಂದರಲ್ಲಿ ಚಂದ್ರಪ್ಪನ ಹೆಸರಿನಲ್ಲಿ ನಕಲಿ ಸಹಿ ಮಾಡಿ ಒಂದು ಲಕ್ಷ ರೂಪಾಯಿ ಸಾಲ ಪಡೆಯಲಾಗಿತ್ತು.ಈ ವಿಷಯ ದೇವಿಂದ್ರನಿಗೆ ಗೊತ್ತಾಗಿದೆ.ನಂತರ ಕೋರ್ಟ್ ಮೊರೆ ಹೋಗಿದ್ದರು.


  ದೇವಿಂದ್ರ ಓದಿಕೊಂಡಿದ್ದು ಮನೆಯಲ್ಲಿ ಇತನೊಬ್ಬನೇ ಹುಷಾರ್ ಇದ್ದನು. ಜಮೀನು ಚಂದ್ರಪ್ಪ ಹೆಸರಿನಲ್ಲಿ ಇರುವಂತೆ ದೇವಿಂದ್ರ ಹೋರಾಟ ಮಾಡಿದನು.
  ಈ ವಿಚಾರವಾಗಿ ಜಮ್ಲಾನಾಯಕನ ಮಕ್ಕಳಾದ ಹಣಮ್ಯಾ,ತೇಜು,ಸೂರ್ಯ,ಶಾಣ್ಯ ಹಾಗೂ ಪಾಂಡ್ಯ ನಡುವೆ ಜಗಳವಾಗಿತ್ತು. ಆದರೆ,ಅಣ್ಣನಾದ ಜೈರಾಮ ಜಮ್ಲಾನಾಯಕ ಮಕ್ಕಳ ಜೊತೆ ಓಡಾಡಿಕೊಂಡಿದ್ದನು.


  ಜಮ್ಲಾನಾಯಕ ನ ಮಕ್ಕಳು ಜೈರಾಮನ ಜೊತೆ ಪಾರ್ಟಿ ಮಾಡಿ ಮದ್ಯಪಾನ ಮಾಡಿ ಸುತ್ತಿದ್ದರು. ಇದನ್ನು ಅರಿತ ತಮ್ಮನಾದ ದೇವಿಂದ್ರ ಚವ್ಹಾಣ ನೀನು ಜಮ್ಲಾನಾಯಕ ಮಕ್ಕಳ ಜೊತೆ ಓಡಾಡಬೇಡ ಅವರು ನಮಗೆ ಆಗಲ್ಲ ಅವರ ಸಹವಾಸ ಮಾಡಬೇಡವೆಂದು ಅಣ್ಣನಾದ ಜೈರಾಮಗೆ ಬುದ್ದಿ ಮಾತು ಹೇಳಿದನು.


  ಇದನ್ನೂ ಓದಿ: Kodagu: ಆರೋಪಿಗಳು ಬಾಯಿಬಿಟ್ಟ ವರ್ಷದ ಹಿಂದೆ ಹುಲಿ ಕೊಂದ ಕತೆ


  ತಮ್ಮನನ್ನು ಕೊಲೆ ಮಾಡಿ ಅಣ್ಣ ಪರಾರಿ...!


  ನಿನ್ನೆ ರಾತ್ರಿ ದೇವಿಂದ್ರ ಅಣ್ಣನಿಗೆ ಬುದ್ದಿ ಮಾತು ಹೇಳಿದನು. ಈ ವಿಚಾರವಾಗಿ ಸಹೋದರರ ನಡುವೆ ಸಣ್ಣ ಜಗಳ ಜರುಗಿದೆ. ದೇವಿಂದ್ರ ಮನೆ ಮುಂಭಾಗದ ಮಂಚದ ಮೇಲೆ ಮಲಗಿದನು. ಈ ವೇಳೆ ದೇವಿಂದ್ರನ ತಂದೆ ಚಂದ್ರಪ್ಪ ಕೂಡ ಮಗನ ಜೊತೆ ಮಲಗಿದನು. ದೇವಿಂದ್ರನ ಕುಟುಂಬಸ್ಥರು ಮನೆ ಮುಂಭಾಗದಲ್ಲಿ ಇದ್ದರು.


  ಈ ವೇಳೆ ಕುಡಿದ ಮತ್ತಿನಲ್ಲಿದ್ದ ಜೈರಾಮ ಚಾಕು ತೆಗೆದುಕೊಂಡು ಬಂದು ತಮ್ಮನ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಕೊಲೆ ಮಾಡುವ ವೇಳೆ ಜೈರಾಮಳ ಪತ್ನಿ ಕೂಡ ಇದ್ದಳು. ಏಕಾ ಏಕಿ ಚಾಕು ಇರಿದು ಜೈರಾಮ ಎಸ್ಕೆಪ್ ಆಗಿದ್ದಾನೆ.


  ಇದನ್ನೂ ಓದಿ: SSLC ಪರೀಕ್ಷಾ ಕೇಂದ್ರದ ಮೇಲೆ ಹೆಜ್ಜೇನು ದಾಳಿ..! ಹಲವರು ಆಸ್ಪತ್ರೆಗೆ ದಾಖಲು


  ಜೈರಾಮನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅದೆ ರೀತಿ ದೇವಿಂದ್ರನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಜೈರಾಮನ ಮಕ್ಕಳೆದರು ತಮ್ಮ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿದ್ದು  ಈ ಕುರಿತು ಜೈರಾಮನ ವಿರುದ್ಧ ಕೊಲೆ ಮಾಡಿರುವ ಬಗ್ಗೆ ಗುರುಮಠಕಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಮ್ಲಾನಾಯಕ ಮಕ್ಕಳ ಕುಮ್ಮಕ್ಕಿಂದ ಜೈರಾಮನು ದೇವಿಂದ್ರನನ್ನು ಕೊಲೆ ಮಾಡಿದ್ದಾನೆಂದು ಕೊಲೆಯಾದ ದೇವಿಂದ್ರನ ತಂದೆ ಚಂದ್ರಪ್ಪ ಆರೋಪಿಸಿದ್ದಾನೆ. ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.ಯಂಪಾಡ ತಾಂಡಾದಲ್ಲಿ ಸ್ಮಶಾನ ಮೌನ ಆವರಿಸಿದೆ.

  Published by:Divya D
  First published: