Eknath Shinde: ಕರ್ನಾಟಕ ಜೈಲಲ್ಲಿ 40 ದಿನ ಕಳೆದಿದ್ದ 'ಮಹಾ' CM ಏಕನಾಥ ಶಿಂಧೆ; ಗಡಿ ವಿವಾದ ಮತ್ತೆ ಗರಿಗೆದರೋ ಸಾಧ್ಯತೆ

ಗೋಲಿಬಾರ್​ನಲ್ಲಿ 9 ಜನ ಮೃತಪಟ್ಟಿದ್ದರು, ಈ ವೇಳೆಯಲ್ಲಿ ಅನೇಕರನ್ನು ಸೆರೆ ಹಿಡಿದು ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಬಳ್ಳಾರಿ ಜೈಲಿ ಸೇರಿದವರಲ್ಲಿ ಏಕನಾಥ ಶಿಂಧೆ ಸಹ ಇದ್ದರು. ಈಗ ಶಿಂಧೆ ಮುಖ್ಯಮಂತ್ರಿಯಾಗಿದ್ದು, ಗಡಿ ವಿವಾದ ಮತ್ತೆ ಹೆಚ್ಚಾಗೋ ಸಾಧ್ಯತೆ ಇದೆ.

ಏಕನಾಥ್​ ಶಿಂಧೆ

ಏಕನಾಥ್​ ಶಿಂಧೆ

  • Share this:
ಬೆಳಗಾವಿ (ಜು.1): ಮಹಾರಾಷ್ಟ್ರದಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಎನ್ ಸಿಪಿ, ಕಾಂಗ್ರೆಸ್ (Congress) ಹಾಗೂ ಶಿವಸೇನೆ (Shiva Sena) ನೇತೃತ್ವದ ಸರ್ಕಾರ ಪತನಗೊಂಡಿದೆ. ಸದ್ಯ ಶಿವಸೇನೆ ಬಂಡಾಯ ಶಾಸಕರು (Rebel MLA) ಬಿಜೆಪಿ ಜತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ (Eknath Shinde) ನಿನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇನ್ನೂ ಬಿಜೆಪಿಯ ದೇವೇಂದ್ರ ಫಡ್ನಿವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಗೊಳಿಸಲು ಸಿದ್ದತೆಯನ್ನು ನಡೆಸಿದ್ದಾರೆ. ಆದರೇ ಮಹಾರಾಷ್ಟ್ರದ ಹೊಸ ಸಿಎಂ ಏಕನಾಥ ಸಿಂಧೆ ಕರ್ನಾಟಕ ಜೈಲಿನಲ್ಲಿ 40 ದಿನ ಕಳೆದಿದ್ದರು, ಜೈಲು ವಾಸದ ಬಳಿಕವೇ ರಾಜಕೀಯಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು ಎನ್ನುವುದು ಈಗ ಇತಿಹಾಸ.

ರಾಜ್ಯದ ಬಳ್ಳಾರಿ ಜೈಲಿನಲ್ಲಿ 40 ದಿನ ಶಿಕ್ಷೆ

ಮಹಾರಾಷ್ಟ್ರದ ನೂತನ ಸಿಎಂ ಏಕನಾಥ ಸಿಂಧೆ ರಾಜ್ಯದ ಬಳ್ಳಾರಿ ಜೈಲಿನಲ್ಲಿ 40 ದಿನ ಶಿಕ್ಷೆ ಅನುಭವಿಸಿದ್ದರು. ಇದಕ್ಕೆ ಕಾರಣವಾಗಿದ್ದು ಬೆಳಗಾವಿಯ ಗಡಿ ವಿವಾದ ಹೋರಾಟ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದ ಹೋರಾಟಗಳು ನಡೆದಿವೆ. ಅನೇಕ ಹಿಂಸಾಚಾರಗಳು, ಗೋಲಿಬಾರ್, ಗಲಭೆಗಳು ನಡೆದಿವೆ.

ಈ ಹೋರಾಟದಲ್ಲಿ ಸಕ್ರಿಯರಾಗಿದ್ದ ಏಕನಾಥ ಶಿಂಧೆ ಬೆಳಗಾವಿಯಲ್ಲಿ ಬಂಧನಕ್ಕೆ ಒಳಗಾಗಿದ್ದರು, ಬಳಿಕ ಇವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಬಳ್ಳಾರಿ ಜೈಲಿನಲ್ಲಿ 40 ದಿನ ಕಳೆದಿದ್ದರು. ಬಳಿಕ ಮಹಾರಾಷ್ಟ್ರಕ್ಕೆ ವಾಪಸ್ ಆದ ಬಳಿಕ ಶಿವಸೇನೆ ಪಕ್ಷದಲ್ಲಿ ಅವರಿಗೊಂದು ಖಾಯಂ ಸ್ಥಾನಮನ ಫಿಕ್ಸ್ ಆಗಿದ್ದು. ಬಳಿಕ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದರು. ಈಗ ಶಿವಸೇನೆಯ ಉದ್ಧವ್ ಠಾಕ್ರೆ ಸರ್ಕಾರ ಪತನಗೊಳಿಸಿ ತಾವೇ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: Maharashtra Politics: ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ; ಉದ್ಧವ್ ಠಾಕ್ರೆ ಆರೋಪ

1980ರಲ್ಲಿ ಮರಾಠಿಗರ ಉಗ್ರ ಹೋರಾಟ

1980ರಲ್ಲಿ ಬೆಳಗಾವಿ ಸೇರಿದಂತೆ 865 ಗ್ರಾಮ, ಪಟ್ಟಣಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮರಾಠಿಗರು ಉಗ್ರ ಹೋರಾಟ ಆರಂಭಿಸಿದ್ದರು. ಎನ್ ಸಿ ಪಿ ನಾಯಕ ಶರದ್ ಪವಾರ್ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಛಗನ್ ಭುಜಬಲ್ ನೇತೃತ್ವದಲ್ಲಿ ಚಳುವಳಿ ಆರಂಭಗೊಂಡಿತ್ತು.

1986ರ ಜೂನ್ 1ರಂದು ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಸೀಮಾ ಲಡಾಯಿಗೆ ಚಾಲನೆ ಕೊಟ್ಟರು. ಸಾವಿರಾರು ಹೋರಾಟಗಾರರು ಕಳ್ಳ ದಾರಿಯ ಮೂಲಕ ಬೆಳಗಾವಿಗೆ ನುಗ್ಗಿ ಬಂದ್ದರು. ಈ ಪೈಕಿ ಬಂದವರು ಏಕನಾಥ ಶಿಂಧೆ ಸಹ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕನ್ನಡದ ಶಾಲೆಗಳ ಮೇಲೆ ದಾಳಿ ನಡೆಯಿತು, ಕಿರ್ಲೋಸ್ಕರ್ ರಸ್ತೆಯಲ್ಲಿ ಕಾವಲಿಗೆ ನಿಂತಿದ್ದ ಪೊಲೀಸ್ ಪೇದೆಯೊಬ್ಬರನ್ನು ಬೆಂಕಿ ಹಂಚಲಾಗಿತ್ತು.

ಇದನ್ನೂ ಓದಿ: Karnataka Politics: ದೇವೇಗೌಡರ ಪರ ನಿಂತ್ರು ಡಿಕೆ ಬ್ರದರ್ಸ್​; ಕೆ.ಎನ್​ ರಾಜಣ್ಣಗೆ ನೋಟಿಸ್

ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಿಂಧೆ

ಬೆಳಗಾವಿಯಲ್ಲಿ ವ್ಯಾಪಕವಾಗಿ ಹಿಂಸಾಚಾರ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗೆಡೆ ಅವರು ಗೋಲಿಬಾರ್ ಅನುಮತಿ ನೀಡಿದ್ದರು.  ಈ ಗೋಲಿಬಾರ್ ನಲ್ಲಿ 9 ಜನ ಮೃತಪಟ್ಟಿದ್ದರು, ಈ ವೇಳೆಯಲ್ಲಿ ಅನೇಕರನ್ನು ಸೆರೆ ಹಿಡಿದು ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು.  ಬಳ್ಳಾರಿ ಜೈಲಿ ಸೇರಿದವರಲ್ಲಿ ಏಕನಾಥ ಶಿಂಧೆ ಸಹ ಇದ್ದರು.

ಗಡಿ ವಿವಾದ ಮತ್ತೆ ಹೆಚ್ಚಾಗೋ ಸಾಧ್ಯತೆ

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ಪ್ರಭಲ ವಾಗಿಯಾಗಿರೋ ಏಕನಾಥ್ ಶಿಂಧೆ ಹಾಗೂ ಛಗನ್ ಭುಜಬಲ್ ಅವರನ್ನು ಠಾಕ್ರೆ ಸರ್ಕಾರ ಈ ಕಾರಣದಿಂದಲೇ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿತ್ತು. ಈಗ ಶಿಂಧೆ ಮುಖ್ಯಮಂತ್ರಿಯಾಗಿದ್ದು, ಗಡಿ ವಿವಾದ ಮತ್ತೆ ಹೆಚ್ಚಾಗೋ ಸಾಧ್ಯತೆ ಇದೆ.
Published by:Pavana HS
First published: