Crime News: ಎಂಟು ಕೋಟಿ ಮೌಲ್ಯದ ಆಂಬರ್ ಗ್ರೀಸ್ ಪತ್ತೆ ಮಾಡಿದ ಬೆಂಗಳೂರು ಪೊಲೀಸರು!

ಮೇಣದ ರೀತಿಯ ವಸ್ತುವನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದಯ ಬಂಧಿತ ಆರೋಪಿಗಳಿಗೆ 1. ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಇದನ್ನು ಬೇರೆ ದಂಧೆಕೋರರಿಗೆ ಮಾರಾಟಕ್ಕೆ ಯೋಜನೆ ರೂಪಿಸಿದ್ದಾಗ ಕೆ.ಜಿ‌‌.ಹಳ್ಳಿ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು (ಜೂನ್ 09); ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಲು ಅಪರೂಪ ಎನ್ನಿಸಿಕೊಂಡಿರುವ ಹಾಗೂ ನಿಷೇಧಿತಗೊಂಡಿರುವ ತಿಮಿಂಗಲ ವೀರ್ಯದಿಂದ ಹೊರಬರುವ ಮೇಣ ರೀತಿಯಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ನಾಲ್ವರು ದಂಧೆಕೋರರನ್ನು ಕಾಡುಗೊಂಡನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೈಯದ್ ತಜ್ಮೀಲ್ ,ಸಲೀಂ‌ಪಾಷಾ, ರಫಿ ಉಲ್ಲಾ  ಮತ್ತು ನಾಸೀರ್ ಪಾಷಾ ಬಂಧಿತ ಅರೋಪಿಗಳು. ಬಂಧಿತರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳೆಬಾಳುವ  8 ಕೋಟಿ ರೂಪಾಯಿ ಮೌಲ್ಯದ  6.700 ಕೆ.ಜಿ. ಅಂಬೆಗ್ರೀಸ್ (ಸ್ಪೆರ್ಮ್ ವೇಲ್) ವಶಪಡಿಸಿಕೊಳ್ಳಲಾಗಿದೆ‌.ಸ್ಪೆರ್ಮ್ ವೇಲ್ ಪ್ರಭೇಧದ ತಿಮಿಂಗಿಲದಿಂದ ಹೊರಹಾಕುವ ವಿರ್ಯಾಣುಗಳಅಂಬಗ್ರೀಸ್ ಎಂಬುವುದು ತಿಮಿಂಗಲದಿಂದ ಪಡೆದ ವೀರ್ಯದ ವಸ್ತುವಾಗಿದ್ದು ಘನ ಮೇಣದ ವಾಸನೆಯಿಂದ ಕೂಡಿರಲಿದೆ‌‌.

ಈ ವಸ್ತುವನ್ನು ಸುಗಂದ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ‌‌‌. ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆಯಿದೆ.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸುಮಾರು ಒಂದೂವರೆ ಕೋಟಿ ಇದೆ..ಪರ್ಪ್ಯೂಮ್ ಗಾಗಿ ಬಳಕೆಯಾಗುವ ಆಂಬೇ ಗ್ರೀಸ್ ಭಾರತದಲ್ಲಿ ಮಾರಾಟ ಮಾಡುವುದು ಕಾನೂನು ಪ್ರಕಾರ ಮಾರಾಟ ಮಾಡುವಂತಿಲ್ಲ. ಸಂಶೋಧನೆ ಮಾತ್ರ ಬಳಸಬಹುದಾಗಿದೆ.

ಮೇಣದ ರೀತಿಯ ವಸ್ತುವನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದಯ ಬಂಧಿತ ಆರೋಪಿಗಳಿಗೆ 1. ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಇದನ್ನು ಬೇರೆ ದಂಧೆಕೋರರಿಗೆ ಮಾರಾಟಕ್ಕೆ ಯೋಜನೆ ರೂಪಿಸಿದ್ದಾಗ ಕೆ.ಜಿ‌‌.ಹಳ್ಳಿ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇನ್ನು ಸ್ಪೆರ್ಮ್ ವೆಲ್ ಜಾತಿಯ ತಿಮಿಂಗಿಲದಲ್ಲಿ ಮಾತ್ರ ಇಂತಹ ವಸ್ತು ಉತ್ಪತಿಯಾಗುತ್ತದೆ. ಈ ಪ್ರಭೇದದ ತಿಮಿಂಗಿಲ ಕಾಟ್ಲಾ ಫೀಶ್ ಮತ್ತು ಸ್ಕ್ವಿಡ್ ಗಳನ್ನ ಭೇಟೆಯಾಡಿ ತಿನ್ನುತ್ತದೆ. ಹೀಗಾಗಿ ಕಾಟ್ಲಾ ಫಿಶ್ ನ ಮುಳ್ಳುಗಳು ತಿಮಿಂಗಿಲದ ಹೊಟ್ಟೆಯಲ್ಲಿ ಹಲವು ತಿಂಗಳವರೆಗೂ ಜೀರ್ಣವಾಗುವುದಿಲ್ಲ.

ಇದನ್ನೂ ಓದಿ: Nikhil-Zameer: ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು & ಜಮೀರ್ ಬೆಂಬಲಿಗರ ನಡುವೆ ಗಲಾಟೆ.. ಕಾರಣವೇನು?

ಇದರಿಂದ ಹೊಟ್ಟೆಯಲ್ಲಿದ್ದಂತೆ ರಾಸಾಯನಿಕವಾಗಿ ಮೇಣದ ಕಲ್ಲಿನಂತೆ ರಚನೆಯಾಗು ತ್ತದೆ. ತಿಮಿಂಗಿಲ ವಾಂತಿ ಅಥವಾ ವೀರ್ಯದ ಮೂಲಕ‌ ಅದನ್ನ  ಹೊರ ಹಾಕುತ್ತದೆ. ಇದು ಸಾಕಷ್ಟು ಹಗುರವಾಗಿರುವ ಕಾರಣ ನೀರಿನಲ್ಲಿ ತೇಲುತ್ತದೆ .ಇಂತಹ ತೇಲುವ ಅಂಬೇಗ್ರೀಸ್ ,ಮೊದಲ ವಾರ ವಿಪರೀತ ವಾಸನೆ ಇರುತ್ತೆ. ನಂತರದ ದಿನಗಳಲ್ಲಿ ಇದು ಸುವಾಸನೆ ಬೀರುವ ಮೇಣದ ಕಲ್ಲಾಗಿ ಪರಿವರ್ತನೆಯಾಗುತ್ತದೆ.

ಸಾಮಾನ್ಯವಾಗಿ ಇದು ಕರಾವಳಿ ಭಾಗದಲ್ಲಿ ಕಂಡು ಬರುತ್ತದೆ.ಕೋಲಾರ ಮೂಲದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ .ಈ ಆಂಬೇಗ್ರಿಸ್ ನ್ನ ಅರಣ್ಯ ಇಲಾಖೆಗೆ ಹ್ಯಾಂಡೋವರ್ ಮಾಡಿದ ಬಳಿಕ ನಿಖರವಾದ ಬೆಲೆ ತಿಳಿಯಲಿದೆ. ಸದ್ಯ ಅಂಬರ್ ಗ್ರೀಸ್ ತಂದು ಮಾರಾಟ ಮಾಡಿದ್ದ ಕೋಲಾರದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: ಜೂನ್.14ರ ನಂತರ ಕರ್ನಾಟಕದಲ್ಲಿ 4 ರಿಂದ 5 ಹಂತದಲ್ಲಿ ಅನ್​ಲಾಕ್ ಪ್ರಕ್ರಿಯೆ ಆರಂಭ: ಸಚಿವ ಆರ್​. ಅಶೋಕ್ ಮಾಹಿತಿ!

ಅಲ್ಲದೆ, ಬಂಧಿತ ಆತ ಯಾರು? ಈ ವಸ್ತುವನ್ನು ಎಲ್ಲಿಂದ ತಂದಿದ್ದ? ಈ ರೀತಿ ಎಷ್ಟು ಬಾರಿ ಮಾರಾಟ ಮಾಡಲಾಗಿದೆ? ಯಾರಿಗೆಲ್ಲಾ ಮಾರಾಟ ಮಾಡಲಾಗಿದೆ? ಸರಬರಾಜು ಹೇಗಾಯ್ತು? ಇದರ ಹಿಂದೆ ಇರುವ ಕಿಂಗ್​ಪಿನ್ ಯಾರು? ಎಂಬುದರ ಬಗ್ಗೆ ತನಿಖೆ ನಡೆಸಲಾಗ್ಯಿದೆ.. ಈ ಮಧ್ಯೆ ಪ್ರಮುಖ ಆರೋಪಿ ಪತ್ತೆಯಾದ್ರೆ ಮೂಲ ಎಲ್ಲಿ ಅಂತ ತಿಳಿಯಲಿದೆ.‌ಸದ್ಯ ನಾಲ್ವರು ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: