ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಬಹುತೇಕ ಖಚಿತ. ಆದ್ರೆ ಉಪಮುಖ್ಯಮಂತ್ರಿಗಳು (Deputy CM) ಯಾರಾಗ್ತಾರೆ ಅನ್ನೋದು ಸದ್ಯದ ಕುತೂಹಲ. ನಮ್ಮನ್ನೂ ಉಪಮುಖ್ಯಮಂತ್ರಿ ಮಾಡಿ ಅನ್ನೋ ಕೂಗು ಎದ್ದಿದೆ. ಅನೇಕ ಡಿಸಿಎಂ ಆಕಾಂಕ್ಷಿಗಳು ನೇರವಾಗಿ ಕೇಳದೇ ತಮ್ಮದೇ ಸಮುದಾಯದವರನ್ನು ಮುಂದೆಬಿಟ್ಟು ಹೇಳಿಸ್ತಿದ್ದಾರೆ. ವಿವಿಧ ಸ್ವಾಮೀಜಿಗಳು (Swamiji) ತಮ್ಮ ಸಮುದಾಯದ ನಾಯಕನಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಸಿಎಂ ರೇಸ್ನಲ್ಲಿ ಇಬ್ಬರು ಇದ್ರೆ, ಡಿಸಿಎಂ ರೇಸ್ನಲ್ಲಿ ಹಲವು ನಾಯಕರಿದ್ದಾರೆ. ಎರಡು ದಿನಗಳ ಹಿಂದೆ ಮಾಜಿ ಸಚಿವ ಶಿವಾನಂದ್ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ತಂದೆ ಡಿಸಿಎಂ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ಹೇಳಿದ್ದರು.
ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಸ್ಥಾನಗಳನ್ನು ರಚನೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಡಿಸಿಎಂ ಸ್ಥಾನಕ್ಕಾಗಿ ರೇಸ್ನಲ್ಲಿರುವ ಪ್ರಮುಖರು ಯಾರು ಅನ್ನೋದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Karnataka CM: ಸಿಎಂ ಸ್ಥಾನ ಯಾರಿಗೆ, ಸಿದ್ದುಗೋ? ಡಿಕೆಶಿಗೋ? ಇಂದು ಅಧಿಕೃತ ಘೋಷಣೆ
ಡಿಸಿಎಂ ರೇಸ್ನಲ್ಲಿ ನಾಯಕರ ಪಟ್ಟಿ!
1.ಎಂ.ಬಿ ಪಾಟೀಲ್- ಲಿಂಗಾಯತ ನಾಯಕ
2.ಹೆಚ್.ಕೆ ಪಾಟೀಲ್ - ರೆಡ್ಡಿ ಲಿಂಗಾಯತ
3.ಡಾ. ಜಿ ಪರಮೇಶ್ವರ್- ದಲಿತ ನಾಯಕ
4.ಕೆ.ಹೆಚ್ ಮುನಿಯಪ್ಪ- ದಲಿತ ನಾಯಕ
5.ಆರ್.ವಿ ದೇಶಪಾಂಡೆ -ಬ್ರಾಹ್ಮಣ ನಾಯಕ
6.ಜಮೀರ್ ಅಹ್ಮದ್ ಖಾನ್- ಮುಸ್ಲಿಂ ನಾಯಕ
7.ಸಲೀಂ ಅಹ್ಮದ್- ಮುಸ್ಲಿಂ ನಾಯಕ
8.ಯು.ಟಿ ಖಾದರ್ -ಮುಸ್ಲಿಂ ನಾಯಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ