Ramadan: ಪವಿತ್ರ ರಂಜಾನ್; ನಾಳೆ ಮಾತ್ರ ಕರಾವಳಿಯಲ್ಲಿ, ಉಳಿದೆಡೆ ಸೋಮವಾರವೇ ಈದ್‌ ಉಲ್‌ ಫಿತ್ರ್‌ ಆಚರಣೆ

ಇಸ್ಲಾಂ ಸಂಪ್ರದಾಯದ ಪ್ರಕಾರ ಚಂದ್ರನ ದರ್ಶನವಾಗದೆ ರಂಜಾನ್ ಹಬ್ಬ ಆಚರಣೆ ಮಾಡುವಂತಿಲ್ಲ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಕರ್ನಾಟಕ ಚಂದ್ರ ದರ್ಶನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಕರವಾಳಿಯಲ್ಲಿ ಮಾತ್ರ ಭಾನುವಾರ ರಂಜಾನ್ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು (ಮೇ 23); ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಚಂದ್ರನ ಗೋಚರಿಸುವಿಕೆಯ ಆಧಾರದ ಮೇಲೆ ಕರಾವಳಿ ಭಾಗದಲ್ಲಿ ಮಾತ್ರ ನಾಳೆ ಹಬ್ಬ ಆಚರಿಸಿದರೆ, ಉಳಿದೆಡೆ ಸೋಮವಾರ ರಂಜಾನ್ ಹಬ್ಬ ಆಚರಿಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ.

ಇಸ್ಲಾಂ ಸಂಪ್ರದಾಯದ ಪ್ರಕಾರ ಚಂದ್ರನ ದರ್ಶನವಾಗದೆ ರಂಜಾನ್ ಹಬ್ಬ ಆಚರಣೆ ಮಾಡುವಂತಿಲ್ಲ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಕರ್ನಾಟಕ ಚಂದ್ರ ದರ್ಶನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಕರವಾಳಿಯಲ್ಲಿ ಮಾತ್ರ ಭಾನುವಾರ ರಂಜಾನ್ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಜ್ಯದ ಯಾವುದೇ ಭಾಗದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನ ಆಗಿಲ್ಲ. ಹೀಗಾಗಿ ಕರವಾಳಿ ಹೊರತಾಗಿ ಉಳಿದ ಎಲ್ಲಾ ಕಡೆ ಸೋಮವಾರ ಹಬ್ಬ ಆಚರಿಸಲಾಗುವುದು ಎಂದು ಸಮಿತಿಯ ಮುಖ್ಯಸ್ಥ ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.

ಈವರೆಗಿನ ಮಾಹಿತಿಯಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ ಹಾಗೂ ಚಿಕ್ಕಮಗಳೂರಿನ ಕೆಲವು ಪ್ರದೇಶಗಳಲ್ಲಿ ಮಾತ್ರ ರಂಜಾನ್ ಹಬ್ಬವನ್ನು ಭಾನುವಾರ ಆಚರಿಸಲಾಗುತ್ತದೆ. 30 ದಿನಗಳ ಉಪವಾಸ ಶನಿವಾರಕ್ಕೆ ಅಂತ್ಯವಾಗಿದ್ದು, ಭಾನುವಾರ ಹಬ್ಬ ಆಚರಣೆಯಲ್ಲಿ ಯಾವುದೇ ತೊಡಕಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಈ ದೇಶಕ್ಕೆ ಕೊರೋನಾ ಬಂದದ್ದು ಮೋದಿಯಿಂದಲೇ ಹೊರತು ತಬ್ಲಿಘಿಗಳಿಂದಲ್ಲ; ಸಿದ್ದರಾಮಯ್ಯ ವಾಗ್ದಾಳಿ
First published: