Eid Mubarak 2019; ಮುಸ್ಲಿಂ ಬಾಂಧವರಿಗೆ ಇಂದು ಪವಿತ್ರ ರಂಜಾನ್​; ರಾಜ್ಯಾದ್ಯಂತ ಮನೆಮಾಡಿದೆ ಹಬ್ಬದ ಸಂಭ್ರಮ!

Eid-ul-Fitr 2019

MAshok Kumar | news18
Updated:June 5, 2019, 11:56 AM IST
Eid Mubarak 2019; ಮುಸ್ಲಿಂ ಬಾಂಧವರಿಗೆ ಇಂದು ಪವಿತ್ರ ರಂಜಾನ್​; ರಾಜ್ಯಾದ್ಯಂತ ಮನೆಮಾಡಿದೆ ಹಬ್ಬದ ಸಂಭ್ರಮ!
ಸಾಂದರ್ಭಿಕ ಚಿತ್ರ.
  • News18
  • Last Updated: June 5, 2019, 11:56 AM IST
  • Share this:
ಬೆಂಗಳೂರು (ಜೂನ್​.05); ವಿಶ್ವದಾದ್ಯಂತ ಇಂದು ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಸಂಭ್ರಮ. ಒಂದು ತಿಂಗಳ ಕಾಲ ಕಠಿಣ ಉಪವಾಸ  ಮಾಡಿ ದೇವರ ಧಾನ್ಯದಲ್ಲಿದ್ದ ಮುಸ್ಲಿಮರು ಇಂದು ಸಾಮೂಹಿಕ ಪ್ರಾರ್ಥನೆ ಮೂಲಕ ತಮ್ಮ ಉಪವಾಸವನ್ನು ಅಂತ್ಯ ಮಾಡಲಿದ್ದಾರೆ. ಈ ಹಬ್ಬ ರಾಜ್ಯದಲ್ಲೂ ಅತ್ಯಂತ ಭರ್ಜರಿಯಾಗಿ ಆಚರಿಸಲಾಗಿತ್ತಿದೆ.

ಬೆಂಗಳೂರಿನಲ್ಲೂ ರಂಜಾನ್ ಹಬ್ಬದ ಕಳೆ ಮನೆ ಮಾಡಿದೆ. ನಗರದ ಪ್ರಸಿದ್ಧ ಚಾಮರಾಜನಗರ ಈದ್ಗಾ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು. ಅಲ್ಲದೆ ಪರಸ್ಪರ ಶುಭಾಶಯ ಕೋರಿದರು.

ಚಾಮರಾಜನಗರ ಮಾತ್ರವಲ್ಲ ಮೈಸೂರು ರಸ್ತೆ, ಆಟ್​.ಟಿ ನಗರ, ಶಿವಾಜಿ ನಗರ ಸೇರಿದಂತೆ ರಾಜಧಾನಿಯ ನಾನಾ ಕಡೆಗಳಲ್ಲಿ ಮುಸ್ಲಿಂ ಬಾಂಧವರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯ ಪ್ರಸಿದ್ಧ ಈದ್ಗಾ ಮೈದಾನದಲ್ಲೂ ಇಂದು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಈದ್ಗಾ ಮೈದಾನದಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್​ ನೀಡಲಾಗಿತ್ತು.

ಇದನ್ನೂ ಓದಿ : ಮಾನವೀಯತೆಗೆ ಮೆಚ್ಚುಗೆ; ರಂಜಾನ್​ ಉಪವಾಸ ಕೈಬಿಟ್ಟು ಹಿಂದೂ ಗೆಳೆಯನಿಗೆ ರಕ್ತದಾನ ಮಾಡಿದ ಯುವಕ

ವರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ  ಉಪವಾಸ ಇರುವ ಬಾಂಧವರು ಈ ಸಮಯದಲ್ಲಿ ಬಡವರಿಗೆ ದಾನ ಧರ್ಮ ಮಾಡೋದು ಪ್ರತೀತಿ. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರೋಜಾ ಆಚರಣೆ ಮಾಡುತ್ತಾರೆ. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸುತ್ತಾರೆ. ಅನಾಥರು, ದುರ್ಬಲರ ಕಷ್ಟ ಕಾರ್ಪಣ್ಯಗಳ ಮನವರಿಕೆ ಮಾಡುವುದು ಉಪವಾಸದ ಉದ್ದೇಶ.

First published:June 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ