ಕೊಡಗು: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ಕಾರಿಗೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ (egg) ಎಸೆದ ಆರೋಪಿ ಸಂಪತ್ (Sampath) ನನ್ನ ಬೆಂಬಲಿಗನಲ್ಲ. ಅವನು ನನಗೆ ಗೊತ್ತೇ ಇಲ್ಲ ಎಂದು ಮಾಜಿ ಸಚಿವ ಬಿ.ಎ.ಜೀವಿಜಯ (Former Minister B.A.Jeevijaya) ಸ್ಪಷಪಡಿಸಿದರು. ನಾನು ಜೆಡಿಎಸ್ ನಲ್ಲಿ (JDS) ಇದ್ದಾಗ ಅವನನ್ನು ನೋಡಿಯೇ ಇಲ್ಲ. ನಮ್ಮ ಪಕ್ಷದ ಬೆಂಬಲಿಗನೂ ಅಲ್ಲ, ಕಾರ್ಯಕರ್ತನೂ ಅಲ್ಲ ಎಂದ ಅವರು, ಶಾಸಕ ಅಪ್ಪಚ್ಚು ರಂಜನ್ (MLA Appachcu Ranjan) ಅವರ ಬೆಂಬಲಿಗ ಎಂಬುದಕ್ಕೆ ಹಲವಾರು ಫೋಟೋಗಳಿವೆ. ನನ್ನ ಜೊತೆ ಇರುವ ಒಂದು ಫೋಟೋ (Photo) ಇದ್ದರೆ ತೋರಿಸಲಿ ಎಂದು ಸವಾಲು ಎಸೆದಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅವನಿಗೆ ಅಪ್ಪಚ್ಚು ರಂಜನ್, ಗುತ್ತಿಗೆ ಕಾಮಗಾರಿಯನ್ನು (Tender Work) ನೀಡಿದ್ದಾರೆ ಎಂದು ತಿಳಿಸಿದರು.
2004ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಮಯದಲ್ಲಿ ಸಂಪತ್‍ನ ತಂದೆಯನ್ನ ಸೋಮವಾರಪೇಟೆ ಪಟ್ಟಣ ಪಂಚಾಯತ್ ಸದಸ್ಯನಾಗಿ ನಾಮನಿರ್ದೆಶನ ಮಾಡಿದ್ದಾರೆ. ಇವರು ಬಿಜೆಪಿ ಪಕ್ಷದ ಕಾರ್ಯಕರ್ತ ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಶಾಸಕರು ತಮ್ಮ ತಪ್ಪನ್ನು ಮರೆಮಾಚಲು ಸುಳ್ಳನ್ನು ಸೃಷ್ಟಿ ಮಾಡಿ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲ
ಬಿಜೆಪಿಯವರು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಬರುವಾಗ ಗುಡ್ಡೆಹೊಸೂರಿನಲ್ಲಿ ಮಾತ್ರ ಗಲಾಟೆ ಮಾಡಿದ್ದಲ್ಲ. ತಿತಿಮತಿ, ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆಯಲ್ಲೂ ಗಲಾಟೆ ಮಾಡಿದ್ದಾರೆ. ರಕ್ಷಣೆ ಮಾಡುವಲ್ಲಿ ಪೊಲೀಸರ ವ್ಯೆಫಲ್ಯವಿದೆ ಎಂದು ಪೊಲೀಸರ ಕಾರ್ಯ ವೈಖರಿಯನ್ನು ಖಂಡಿಸಿದರು.
ಇದನ್ನೂ ಓದಿ: Siddaramaiah ಅಂದು ತಿಂದಿದ್ದು ಕಣಿಲೆ ಅಕ್ಕಿ ರೊಟ್ಟಿ , ಮಾಂಸಾಹಾರ ಅಲ್ಲ: ವೀಣಾ ಅಚ್ಚಯ್ಯ
ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠ ಪಕ್ಷ
ಗುಡ್ಡೆಹೊಸೂರು ಘಟನೆಯ ಆರೋಪಿಗಳನ್ನು ಬಿಡಿಸಲು ರಾತ್ರಿ ಅಪ್ಪಚ್ಚು ರಂಜನ್ ಮತ್ತು ಬೋಪಯ್ಯ ಯಾಕೆ ಪೊಲೀಸ್ ಠಾಣೆಗೆ ಹೋಗಿದ್ದರು. ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಇದರಿಂದ ಹತಾಶರಾಗಿ ಬಿಜೆಪಿಯವರು ಈ ರೀತಿಯ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಇವರದ್ದು ಒಡೆದು ಆಳುವ ನೀತಿ
ಚುನಾವಣೆ ಸಮಯದಲ್ಲಿ ಯಾವ ರೀತಿಯಿಂದಾದರೂ ಕಾಂಗ್ರೆಸ್‍ಗೆ ಹಿನ್ನಡೆಯಾಗಬೇಕೆಂದು ಜಾತಿ, ಧರ್ಮಗಳ ಮಧ್ಯೆ ಒಡೆದು ಆಳುವ ನೀತಿ ಬಿಜೆಪಿಯವರ ಅಜೆಂಡಾ. ಆದ್ದರಿಂದಲೇ ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಪತ್ ನನ್ನ ಜೊತೆ ಕಾಂಗ್ರೆಸ್ ಸೇರಿಲ್ಲ
ನಾನು ಕಾಂಗ್ರೆಸ್ ಪಕ್ಷ ಸೇರುವ ಸಮಯದಲ್ಲಿ ನನ್ನ ಬೆಂಬಲಿಗರ ಸಭೆ ಕರೆದು ಚರ್ಚಿಸಬೇಕೆಂಬ ಅಭಿಲಾಷೆ ಇತ್ತು. ಕೋವಿಡ್ ಸಮಯವಾದ್ದರಿಂದ ಜಿಲ್ಲಾಧಿಕಾರಿ ಅವರು ಸಭೆಗೆ ಅನುಮತಿ ನೀಡಲಿಲ್ಲ. ಹೀಗಾಗಿ ನಾಯಕರಾದ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್ ಅವರು ಒತ್ತಾಯಿಸಿದಾಗ ಹತ್ತು ಜನ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆಯಾಗಿದ್ದೇನೆ.
ಇದನ್ನೂ ಓದಿ: KPTCL Exam Scam: ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ನಡೆಯಿತಾ ಅಕ್ರಮ? ಪ್ರಶ್ನೆ ಪತ್ರಿಕೆ ಲೀಕ್, ತಂದೆ-ಮಗ ಲಾಕ್!
ಉಳಿದ ಬೆಂಬಲಿಗರು ಜಿಲ್ಲೆಯಲ್ಲಿ ಪಕ್ಷ ಸೇರ್ಪಡೆಯಾದರೂ ಇದರಲ್ಲಿ ಎಲ್ಲೂ ಇವನು ನನ್ನೊಂದಿಗೆ ಕಾಂಗ್ರೆಸ್ ಸೇರಿಲ್ಲ. ಪಕ್ಷ ಸೇರಿದನೆಂಬ ಅವನ ಹೇಳಿಕೆ ಬರೀ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ