ಚಾಮರಾಜನಗರ (ನವೆಂಬರ್ 25): ಶೀಘ್ರದಲ್ಲೇ ಖಾಸಗಿ ಶಾಲಾ ಮುಖ್ಯಸ್ಥರ ಸಭೆ ನಡೆಸಿ ಪೋಷಕರು ಹಾಗೂ ಖಾಸಗಿ ಶಾಲೆಗಳು ಇಬ್ಬರಿಗೂ ತೊಂದರೆಯಾಗದಂತೆ ಹಿತಕರ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಶುಲ್ಕ ಕಟ್ಟಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗೆ ಪಾಸ್ ಮಾಡಲ್ಲ ಅಂತ ಶಾಲೆಗಳು ಹೇಳುವಂತಿಲ್ಲ ಎಂದಿದ್ದ ಸಚಿವ ಸುರೇಶ್ ಕುಮಾರ್ ವಿರುದ್ದ ಖಾಸಗಿ ಶಾಲೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಶುಲ್ಕ ಪಾವತಿಸದೆ ಇದ್ದರೆ ಆನ್ ಲೈನ್ ಕ್ಲಾಸ್ ಬಂದ್ ಮಾಡುವ ಎಚ್ಚರಿಕೆ ನೀಡಿದ್ದವು. ಈ ಬಗ್ಗೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಬೆಂಗಳೂರಿಗೆ ಹೋದ ನಂತರ ಖಾಸಗಿ ಶಾಲೆ ಮುಖ್ಯಸ್ಥರ ಜೊತೆ ಸಭೆ ಮಾಡುತ್ತೇನೆ ಎಂದಿದ್ದಾರೆ.
ಕೋವಿಡ್ ಹಿನ್ನೆಲೆ ಕೆಲವು ಪೋಷಕರು ಫೀಸ್ ಕಟ್ಟುವ ಸ್ಥಿತಿಯಲ್ಲಿ ಇಲ್ಲ, ಇದ್ದವರು ಕಟ್ಟುತ್ತಿಲ್ಲ, ಇದರಿಂದ ಖಾಸಗಿ ಶಾಲೆಗಳ ಶಿಕ್ಷಕರು ಸಂಬಳ ಇಲ್ಲದೆ ತೊಂದರೆಗೀಡಾಗಿದ್ದಾರೆ. ಶುಲ್ಕ ಪಾವತಿಸದಿದ್ದರೂ ಪಾಸ್ ಮಾಡಬೇಕೆಂದು ಹೇಳಿದ್ದೆ. ನನ್ನ ಮಾತನ್ನು ಖಾಸಗಿ ಶಾಲೆಯವರು ಯಾವ ರೀತಿ ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪೋಷಕರಿಗೆ ಹಾಗೂ ಖಾಸಗಿ ಶಾಲೆಗಳಿಗೆ ತೊಂದರೆಯಾಗದಂತೆ ಹಿತಕರ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಪಟ್ಟುಹಿಡಿದು ಬೇಕಾದ ಖಾತೆಯನ್ನೇ ಗಿಟ್ಟಿಸಿಕೊಂಡ ಶಾಸಕ ದುರ್ಯೋಧನ ಐಹೊಳೆ; ಅಂಬೇಡ್ಕರ್ ನಿಗಮ ನೀಡಿ ಅಸ್ತು ಎಂದ ಸಿಎಂ
ಇದನ್ನು ಮಾಧ್ಯಮದ ಮುಂದೆ ಚರ್ಚೆ ಮಾಡಲ್ಲ. ನಾನೇ ಖುದ್ದಾಗಿ ಕುಳಿತು ಚರ್ಚೆ ಮಾಡಿ ಪೋಷಕರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಳ್ಖುವುದಾಗಿ ಹೇಳಿದರು.
ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗೆ ಪಾಸ್ ಮಾಡಲ್ಲ ಅಂತ ಶಾಲೆಗಳು ಹೇಳೋ ಹಾಗೆ ಎಂದು ಸಚಿವರು ಹೇಳಿಕೆ ನೀಡಿದ್ದರು.
ಇದರಿಂದ ಕೆರಳಿದ ಖಾಸಗಿ ಶಾಲೆಗಳು ಸರ್ಕಾರದ ವಿರುದ್ದವೇ ಹೋರಾಟಕ್ಕೆ ನಿರ್ಧರಿದ್ದವು. ಶುಲ್ಕ ಕಟ್ಟದಿದ್ದರೆ ಆನ್ ಲೈನ್ ತರಗತಿ ಬಂದ್ ಮಾಡ್ತೀವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದವು.
ಶಿಕ್ಷಣ ಮಂತ್ರಿಗಳು ಇಂತಹ ಹೇಳಿಕೆ ಕೊಡುವುದು ಸರಿಯಲ್ಲ. ಶೇಕಡ 60 ರಿಂದ 70 ರಷ್ಟು ಪೋಷಕರು ಈ ವರ್ಷದ ಶುಲ್ಕ ಕಟ್ಟಿಲ್ಲ. ಕಳೆದ ವರ್ಷದ ಶುಲ್ಕವನ್ನೂ ಕಟ್ಟಿಲ್ಲ. ಸಚಿವರ ಹೇಳಿಕೆಯಿಂದ ಪೋಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ನಾವು ಕಷ್ಟ ಪಟ್ಟು ಶಾಲೆ ನಡೆಸುತ್ತಿದ್ದೇವೆ. ಸಚಿವರು ಮನುಷ್ಯತ್ವ ಇಲ್ಲದೆ ಹೇಳಿಕೆ ಕೊಡ್ತಿದ್ದಾರೆ ಎಂದು ಕ್ಯಾಮ್ಸ್ ಆಕ್ರೋಶ ವ್ಯಕ್ತಪಡಿಸಿತ್ತು.
ಶುಲ್ಕ ಕಟ್ಟದೇ ಹೋದ್ರೆ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮಣ್ಣು ತಿನ್ನಬೇಕಾ.? ಕೂಡಲೇ ಸಚಿವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕು. 30ನೇ ತಾರೀಖಿನ ಒಳಗೆ ಸ್ಪಷ್ಟನೆ ನೀಡದೇ ಹೋದರೆ ಖಾಸಗಿ ಶಾಲೆಗಳು ನವೆಂಬರ್ 30 ರಿಂದ ಆನ್ ಲೈನ್ ತರಗತಿ ನಡೆಸುವುದಿಲ್ಲ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಎಚ್ಚರಿಕೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ