SSLC ಟಾಪರ್​​​ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್

ಕಡುಬಡತನದಲ್ಲಿ ಸಾಧನೈಗೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮಹೇಶ್​ ಮನೆಗೂ ಸಚಿವ ಸುರೇಶ್​ ಕುಮಾರ್ ಭೇಟಿ ನೀಡಿದ್ದಾರೆ. ವಿದ್ಯಾರ್ಥಿ ಮಹೇಶ್ 625ಕ್ಕೆ 616 ಅಂಕಗಳನ್ನು ಪಡೆದಿದ್ದಾನೆ. ಈತ ತನ್ನ ಪೋಷಕರೊಂದಿಗೆ ಕಟ್ಟಡ ಕೆಲಸ ಮಾಡುತ್ತಾ ಸಾಧನೆ ಮಾಡಿದ್ದಾನೆ. ಬಾಲಕ ಮಹೇಶ್ ಕುಟುಂಬ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿದ್ದಾರೆ.

ವಿದ್ಯಾರ್ಥಿ ಮನೆಯಲ್ಲಿ ಸಚಿವ ಸುರೇಶ್ ಕುಮಾರ್

ವಿದ್ಯಾರ್ಥಿ ಮನೆಯಲ್ಲಿ ಸಚಿವ ಸುರೇಶ್ ಕುಮಾರ್

 • Share this:
  ಬೆಂಗಳೂರು(ಆ.11): ಕೊರೋನಾ ಆತಂಕದ ನಡುವೆಯೇ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ನಿನ್ನೆ ಬಂದಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು, ಸುಮಾರು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಅವರಲ್ಲಿ ಬೆಂಗಳೂರಿನ ವಿದ್ಯಾರ್ಥಿ ಕೂಡ ಒಬ್ಬನಾಗಿದ್ದಾನೆ. 

  ಟಾಪರ್ ವಿದ್ಯಾರ್ಥಿ ಆಗಿರುವ ಬೆಂಗಳೂರಿನ ಚಿಕ್ಕಬಿದುರಕಲ್ಲು ನಿವಾಸಿ ಚಿರಾಯು ಮನೆಗೆ ಇಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್ ಭೇಟಿ ನೀಡಿದ್ದಾರೆ.  ಚಿರಾಯು ಷೋನ್ ಸ್ಟಾಟ್ ಸೆಂಟ್​ ಮೆರೀಸ್ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

  ಮನೆಗೆ ಭೇಟಿ ನೀಡಿ ಮಾತನಾಡಿದ ಸಚಿವ ಸುರೇಶ್​ ಕುಮಾರ್, ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ತುಂಬಾ ಕಷ್ಟಗಳ ನಡುವೆ ಪರೀಕ್ಷೆ ನಡೆಸಬೇಕಾಗಿತ್ತು ಎಂದರು.

  ಮುಂದುವರೆದ ಅವರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳನ್ನು ಹಾಡಿ ಹೊಗಳಿದರು. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳೇ ನಿಜವಾದ ಕೊರೋನಾ ವಾರಿಯರ್ಸ್​ ಎಂದು ಮೆಚ್ಚಿಕೊಂಡರು.

  ಇದೇ ವೇಳೆ, ಈ ಬಾರಿ ಕೊರೋನಾ ಆತಂಕದ ನಡುವೆಯೂ ಉತ್ತಮ ಫಲಿತಾಂಶ ಸಿಕ್ಕಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಚಿರಾಯು ಸಮಾಜಕ್ಕೆ ಒಳ್ಳೆಯ ಆದರ್ಶ ವ್ಯಕ್ತಿಯಾಗಲಿ ಎಂದು ಆಶಿಸಿದರು.

  Kodagu Flood: ಕೊಡಗಿನ ಬ್ರಹ್ಮಗಿರಿ ದುರಂತ; ಅರ್ಚಕ ನಾರಾಯಣ ಆಚಾರ್ಯರ ಮನೆಯಲ್ಲಿ ಏನೇನಿತ್ತು ಗೊತ್ತಾ?

  ಯಾದಗಿರಿಯ ಒಬ್ಬ ವಿದ್ಯಾರ್ಥಿ ಕೂಡ ಉತ್ತಮ ಸಾಧನೆ ಮಾಡಿದ್ದಾನೆ. ಅವರ ಪೋಷಕರು ಮನೆಗೆಲಸ ಮಾಡುತ್ತಾರೆ. ಆತ ಒಳ್ಳೆ ಸಾಧನೆ ಮಾಡಿದ್ದಾನೆ. ಇನ್ನು ಮಂಡ್ಯದ ವಿದ್ಯಾರ್ಥಿ ಕೂಡ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

  ಕಡುಬಡತನದಲ್ಲಿ ಸಾಧನೈಗೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮಹೇಶ್​ ಮನೆಗೂ ಸಚಿವ ಸುರೇಶ್​ ಕುಮಾರ್ ಭೇಟಿ ನೀಡಿದ್ದಾರೆ. ವಿದ್ಯಾರ್ಥಿ ಮಹೇಶ್ 625ಕ್ಕೆ 616 ಅಂಕಗಳನ್ನು ಪಡೆದಿದ್ದಾನೆ. ಈತ ತನ್ನ ಪೋಷಕರೊಂದಿಗೆ ಕಟ್ಟಡ ಕೆಲಸ ಮಾಡುತ್ತಾ ಸಾಧನೆ ಮಾಡಿದ್ದಾನೆ. ಬಾಲಕ ಮಹೇಶ್ ಕುಟುಂಬ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿದ್ದಾರೆ.

  ತಾಯಿ ಮಲ್ಲವ್ವ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.  ಮಹೇಶ್ ಕುಟುಂಬ  ಪುಟ್ಟ ಗುಡಿಸಲಿನಲ್ಲಿ ವಾಸ ಮಾಡುತ್ತಿದೆ. ಈತ ಇಂದಿರಾನಗರದ ಜೀವನ ಭೀಮಾನಗರದ ವ್ಯಾಪ್ತಿಯಲ್ಲಿರುವ ಕರ್ನಾಟಕ ಸರ್ಕಾರದ ಕರ್ನಾಟಕ ಪಬ್ಲಿಕ್ ಶಾಲೆಯ (KPS) ವಿದ್ಯಾರ್ಥಿಯಾಗಿದ್ದಾನೆ. ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಓದಬೇಕೆಂಬ ಮಹಾದಾಸೆ ಇದೆ.

  ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿ ಮಹೇಶ್ ಗುಡಿಸಲಿಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಜೊತೆಗೆ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ಬಂದಿದ್ದಾರೆ.
  Published by:Latha CG
  First published: