ಮೈಸೂರು ಭಾಗಕ್ಕೆ ಖಂಡಿತವಾಗಿ ಮಂತ್ರಿ ಸ್ಥಾನ ಸಿಗಬೇಕು; ಸಚಿವ ಸುರೇಶ್​ ಕುಮಾರ್​

ಕೆಲವರಿಗೆ 'ರಾಜ್ಯೋತ್ಸವ' ಅಂತಾ ಹೇಳಲು ಬರುವುದಿಲ್ಲ. ಕೆಲವರಿಗೆ ಕೊರತೆಗಳಿರುತ್ತವೆ. ಅದನ್ನು ಈ ರೀತಿ ಮಾಡುವುದು ಸರಿಯಲ್ಲ. ಹೀಗಾಗಲೇ ಶಾಲೆಯಲ್ಲಿ ಯಾರೂ ಮೊಬೈಲ್ ಬಳಸದಂತೆ ಸೂಚಿಸಲಾಗಿದೆ. ಆಗಾಗ ದೊಡ್ಡವರಲ್ಲಿ ಇರುವ ವಿಕೃತಿ ಪ್ರಕಟವಾಗುತ್ತಿದೆ. ಈ ಬಗ್ಗೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಚಿವ ಸುರೇಶ್ ಕುಮಾರ್

ಸಚಿವ ಸುರೇಶ್ ಕುಮಾರ್

 • Share this:
  ಮೈಸೂರು(ಫೆ.10): ಮೈಸೂರು ಭಾಗಕ್ಕೆ ಖಂಡಿತವಾಗಿಯೂ ಸಚಿವ ಸ್ಥಾನ ಸಿಗಬೇಕು. ಮೈಸೂರು ಜಿಲ್ಲೆಯ ಅಭಿವೃದ್ಧಿಗಾಗಿ ಸಚಿವ ಸ್ಥಾನ ನೀಡಬೇಕು. ಮುಂದಿನ ದಿನಗಳಲ್ಲಿ ಅದು ಆಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಸಚಿವ ಸ್ಥಾನ ಸಿಗಬೇಕೆಂದು ಅಭಿಪ್ರಾಯಪಟ್ಟರು. ಸಚಿವ ಸಂಪುಟ ಖಾತೆ ಹಂಚಿಕೆ ವಿಚಾರವಾಗಿ, "ಅದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ, ಹೀಗಾಗಲೇ ಕೆಲವರಿಗೆ ಹೆಚ್ಚುವರಿ ಖಾತೆ ನೀಡಿದ್ದಾರೆ. ಉಳಿದವರಿಗೆ ಇಂದು ಖಾತೆ ಹಂಚಿಕೆಯಾಗಲಿದೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸ್ಥಾನಗಳು ನಿಗದಿಯಾಗಲಿವೆ," ಎಂದರು.

  ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ವಿಚಾರವಾಗಿ, "ಸಹಜವಾಗಿ ಎಲ್ಲರಿಗೂ ಈ ಬಗ್ಗೆ ಆಕಾಂಕ್ಷೆಯಿದೆ. ಕೆಲವರು ಮೂರು ನಾಲ್ಕು ಬಾರಿ ಗೆದ್ದವರಿದ್ದಾರೆ. ಅವರ ಜಿಲ್ಲೆಯ ಅಭಿವೃದ್ದಿಗಾಗಿ ಸಚಿವ ಸ್ಥಾನ ಕೇಳುವುದು ಸಹಜ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ," ಎಂದು ಹೇಳಿದರು.

  ದೆಹಲಿಯ ಶಾಹಿನ್ ಬಾಗ್ ಸಿಎಎ ವಿರೋಧಿ ಹೋರಾಟ; ಇಂದು ಸುಪ್ರೀಂ ಅಂಗಳದಲ್ಲಿ ಪ್ರತಿಭಟನೆ ತೆರವು ಅರ್ಜಿ ವಿಚಾರಣೆ

  ಪಠ್ಯದಿಂದ ಟಿಪ್ಪು ವಿಷಯ ಕೈಬಿಡಲ್ಲ

  ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯದಿಂದ ಟಿಪ್ಪು ವಿಷಯವನ್ನು ಕೈಬಿಡಲು ಸಾಧ್ಯವಿಲ್ಲ ಎಂದು
  ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿದೆ. ವಿಸ್ತೃತ ಚರ್ಚೆ ಬಳಿಕ ಇನ್ನೊಂದು ಸಮಿತಿ ಮಾಡಿ ಚರ್ಚೆ ಮಾಡಲಾಗುವುದು. ಈ ಬಾರಿ ಶಾಲೆಯ ಆರಂಭದ ದಿನದಿಂದಲೇ ಪುಸ್ತಕ ಸಮವಸ್ತ್ರ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಈ ಬಾರಿ ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡಲು ಸಾಧ್ಯವಿಲ್ಲ ಎಂದರು.

  'ಪಕ್ಕೆಲುಬು' ವಿಡಿಯೋ ವೈರಲ್​ 

  ವಿದ್ಯಾರ್ಥಿಯೊಬ್ಬ 'ಪಕ್ಕೆಲುಬು' ಪದವನ್ನು ತಪ್ಪಾಗಿ ಉಚ್ಛರಿಸಿದ್ದ ವಿಡಿಯೋ ವೈರಲ್ ವಿಚಾರವಾಗಿ, ಇದು ಶಿಕ್ಷಕರ ಮನಸ್ಥಿತಿಯ ಪ್ರಶ್ನೆ.ಆ ಶಿಕ್ಷಕರು ಅಮಾನತು ವಾಪಸ್ಸು ಪಡೆಯಿರಿ ಅಂತಾ ನನ್ನ ಬಳಿ ಬಂದಿದ್ದರು. ಶಿಕ್ಷಕರ ಅಮಾನತು ವಾಪಸ್ಸು‌ ಪಡೆಯೋಣ, ಅದು ಇರಲಿ. ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಇದಾದ ಮೇಲೂ 'ಪುಳಿಯೊಗರೆ' ಮತ್ತು 'ನಪುಂಸಕ' ಪದಗಳ ತಪ್ಪು ಉಚ್ಛಾರಣೆ ಮಾಡಿದ ವಿಡಿಯೋಗಳು ವೈರಲ್​ ಆಗಿವೆ. ಕೆಲವರಿಗೆ 'ರಾಜ್ಯೋತ್ಸವ' ಅಂತಾ ಹೇಳಲು ಬರುವುದಿಲ್ಲ. ಕೆಲವರಿಗೆ ಕೊರತೆಗಳಿರುತ್ತವೆ. ಅದನ್ನು ಈ ರೀತಿ ಮಾಡುವುದು ಸರಿಯಲ್ಲ. ಹೀಗಾಗಲೇ ಶಾಲೆಯಲ್ಲಿ ಯಾರೂ ಮೊಬೈಲ್ ಬಳಸದಂತೆ ಸೂಚಿಸಲಾಗಿದೆ. ಆಗಾಗ ದೊಡ್ಡವರಲ್ಲಿ ಇರುವ ವಿಕೃತಿ ಪ್ರಕಟವಾಗುತ್ತಿದೆ. ಈ ಬಗ್ಗೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

  ಸೋತ ಶಾಸಕರಿಂದ ಹೊಸ ಲೆಕ್ಕಾಚಾರ; ಅಧಿಕಾರಕ್ಕಾಗಿ ಭಿನ್ನ ದಾರಿ ಹಿಡಿದ ವಿಶ್ವನಾಥ್, ಎಂಟಿಬಿ ನಾಗರಾಜ್
  First published: