ಬರುವ ಶೈಕ್ಷಣಿಕ ವರ್ಷದಿಂದ ಪ್ರತಿ ಶನಿವಾರ ಬ್ಯಾಗ್​ಲೆಸ್​ ಡೇ; ಶಿಕ್ಷಣ ಸಚಿವ ಸುರೇಶ್​ ಕುಮಾರ್​​

ಪ್ರತಿ ಶನಿವಾರ ಮಕ್ಕಳಿಗೆ ಪಠ್ಯಪುಸ್ತಕದ ಪಾಠ ಹೊರತಾಗಿ, ಪಠ್ಯೇತರ ಚಟುವಟಿಕೆ, ಕ್ರೀಡಾ, ಹಾಗೂ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಚಟುವಟಿಕೆ ನಡೆಸಲಾಗುವುದು. ಇನ್ನು ಈ ಯೋಜನೆಯನ್ನು ಪ್ರತಿಶನಿವಾರ ಜಾರಿಗೆ ತರಬೇಕಾ ಅಥವಾ ತಿಂಗಳಲ್ಲಿ ಎರಡು ಶನಿವಾರ ಮಾತ್ರ ಜಾರಿಗೆ ತರಬೇಕಾ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ

news18-kannada
Updated:January 27, 2020, 4:38 PM IST
ಬರುವ ಶೈಕ್ಷಣಿಕ ವರ್ಷದಿಂದ ಪ್ರತಿ ಶನಿವಾರ ಬ್ಯಾಗ್​ಲೆಸ್​ ಡೇ; ಶಿಕ್ಷಣ ಸಚಿವ ಸುರೇಶ್​ ಕುಮಾರ್​​
ಶಾಲಾ ಮಕ್ಕಳೊಂದಿಗೆ ಸಚಿವ ಸುರೇಶ್ ಕುಮಾರ್
  • Share this:
ಕಲಬುರಗಿ (ಜ.27): ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುವ ಸಲುವಾಗಿ ಬರುವ ಶೈಕ್ಷಣಿಕ ವರ್ಷದಿಂದ ಪ್ರತಿ ಶನಿವಾರ ಬ್ಯಾಗ್​ಲೆಸ್​ ಡೇ ಯೋಜನೆ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದಾರೆ. 

ವಾರದ ಆರು ದಿನ ಕೂಡ ಮಕ್ಕಳು ಮಣಭಾರದ ಬ್ಯಾಗ್​ ಹೊತ್ತು ತರುವುದರಿಂದ ಅವರಲ್ಲಿ ಕಲಿಕೆ ಆಸಕ್ತಿ ಕಡಿಮೆಯಾಗುತ್ತಿದೆ. ಇದರಿಂದ ಅವರಿಗೆ ಪಠ್ಯೇತರ ಚಟುವಟಿಕೆಯತ್ತ ಕೂಡ ಗಮನ ಹೋಗುತ್ತಿಲ್ಲ. ಈ ಹಿನ್ನೆಲೆ ಅವರಲ್ಲಿ ಕಲಿಕೆ ಉತ್ಸಾಹ ಹೆಚ್ಚಿಸುವ ಮೂಲಕ ಹೊಸ ಓದಿನ ಜೊತೆ ಇತರೆ ಚಟುವಟಿಕೆಯಲ್ಲಿ ಅವರನ್ನು ಭಾಗಿಯನ್ನಾಗಿ ಮಾಡಲು ಈ ಯೋಜನೆ ಉತ್ತಮವಾಗಿದೆ ಎಂದರು.

ಪ್ರತಿ ಶನಿವಾರ ಮಕ್ಕಳಿಗೆ ಪಠ್ಯಪುಸ್ತಕದ ಪಾಠ ಹೊರತಾಗಿ, ಪಠ್ಯೇತರ ಚಟುವಟಿಕೆ, ಕ್ರೀಡಾ, ಹಾಗೂ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಚಟುವಟಿಕೆ ನಡೆಸಲಾಗುವುದು. ಇನ್ನು ಈ ಯೋಜನೆಯನ್ನು ಪ್ರತಿಶನಿವಾರ ಜಾರಿಗೆ ತರಬೇಕಾ ಅಥವಾ ತಿಂಗಳಲ್ಲಿ ಎರಡು ಶನಿವಾರ ಮಾತ್ರ ಜಾರಿಗೆ ತರಬೇಕಾ ಎಂಬ ಬಗ್ಗೆ ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಅಧಿಕೃತವಾಗಿ ಸುತ್ತೋಲೆ ಬಿಡುಗಡೆ ಮಾಡಲಾಗುವುದು.

ಇನ್ನು ಇದೇ ವೇಳೆ ಮಕ್ಕಳ ಕಲಿಕೆ ಕುರಿತು ಅಪಹಾಸ್ಯದ ವಿಡಿಯೋ ಮಾಡುವ ಶಿಕ್ಷಕರಿಗೆ ಎಚ್ಚರಿಕೆ ನೀಡಿದ ಅವರು, ಈ ರೀತಿಯ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ರೀತಿಯ ಘಟನೆಗಳು ಬೆಳಕಿಗೆ ಬಂದಾಕ್ಷಣ ಶಿಕ್ಷಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ: ಪಾಠದೊಂದಿಗೆ ಪರಿಸರ ಪ್ರೀತಿ ಹೇಳುವ ಕಲ್ಮಡ ಸರ್ಕಾರಿ ಪ್ರಾಥಮಿಕ ಶಾಲೆ

ಇನ್ನು ಮಕ್ಕಳು ಸಾಕಷ್ಟು ಪ್ರಮಾಣದ ನೀರು ಕುಡಿಯದ ಕಾರಣ ಅವರಲ್ಲಿ ನಿರ್ಜಲೀಕರಣ, ಮೂತ್ರ ಸೋಂಕಿನಂತಹ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದ್ದು, ಇದಕ್ಕಾಗಿ ಕೇರಳ ಸರ್ಕಾರ ಶಾಲೆಗಳಲ್ಲಿ ವಾಟರ್​ ಬೆಲ್​ ಯೋಜನೆ ಜಾರಿಗೆ ತಂದಿತ್ತು. ಇದೇ ರೀತಿಯ ಯೋಜನೆಯನ್ನು ರಾಜ್ಯದಲ್ಲಿ ತರುವ ಕುರಿತು ಕೂಡ ಸುರೇಶ್​ ಕುಮಾರ್​ ತಿಳಿಸಿದ್ದರು. ವಾಟರ್​ ಬೆಲ್​ ಯೋಜನೆ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ ಹೆಜ್ಜೆ. ನಮ್ಮ ರಾಜ್ಯದ ಶಾಲೆಗಳಲ್ಲಿಯೂ ಇದನ್ನು ಅನುಷ್ಟಾನ ಗೊಳಿಸುವ ಕುರಿತು ಯೋಚಿಸಿ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಶಿಕ್ಷಣ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದರು. 
First published:January 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ