HOME » NEWS » State » EDUCATION MINISTER SURESH KUMAR EXPLAINS THE SEVERITY OF COVID SCENARIO THROUGH A REAL LIFE INSTANCE SKTV

Covid Effect: ಕೋವಿಡ್ ನಿರ್ಲಕ್ಷ್ಯದ ನಿಜಸ್ವರೂಪ ಬಿಚ್ಚಿಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್

ಕೊರೊನಾ ವಿಚಾರದಲ್ಲಿ ಜನ ನಿರ್ಲಕ್ಷ್ಯವಹಿಸಿ ಸಮಸ್ಯೆಗೆ ಸಿಲುಕಿಕೊಳ್ಳೋದು ಮಾತ್ರವಲ್ಲ, ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಅಂತದ್ದೇ ಒಂದು ಸನ್ನಿವೇಶವನ್ನು ತಮ್ಮ ಫೇಸ್ಬುಕ್ ಪೋಸ್ಟ್​ನಲ್ಲಿ ಸಚಿವ ಸುರೇಶ್ ಕುಮಾರ್ ವಿವರಿಸಿದ್ದಾರೆ.

Soumya KN | news18-kannada
Updated:April 17, 2021, 11:19 AM IST
Covid Effect: ಕೋವಿಡ್ ನಿರ್ಲಕ್ಷ್ಯದ ನಿಜಸ್ವರೂಪ ಬಿಚ್ಚಿಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್​ ಕುಮಾರ್.
  • Share this:
ಬೆಂಗಳೂರು(ಏಪ್ರಿಲ್ 17): ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅಲ್ಲಿ ತಮ್ಮ ನಿರ್ಧಾರಗಳು, ಅನಿಸಿಕೆಗಳು ಮಾತ್ರವಲ್ಲದೇ ದೈನಂದಿನ ಚಟುವಟಿಕೆಗಳಲ್ಲಿ ಗಮನಾರ್ಹ ವಿಚಾರವಿದ್ದರೆ ಅದನ್ನೂ ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಕೊರೊನಾ ವಿಚಾರದಲ್ಲಿ ಜನ ನಿರ್ಲಕ್ಷ್ಯವಹಿಸಿ ಸಮಸ್ಯೆಗೆ ಸಿಲುಕಿಕೊಳ್ಳೋದು ಮಾತ್ರವಲ್ಲ, ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಅಂತದ್ದೇ ಒಂದು ಸನ್ನಿವೇಶವನ್ನು ತಮ್ಮ ಫೇಸ್ಬುಕ್ ಪೋಸ್ಟ್​ನಲ್ಲಿ ಸಚಿವ ಸುರೇಶ್ ಕುಮಾರ್ ವಿವರಿಸಿದ್ದಾರೆ.

ಕನಕಪುರ ರಸ್ತೆಯ ತಲಘಟ್ಟಪುರದ ಬಳಿಯ ಹಳ್ಳಿಯೊಂದರಲ್ಲಿ ವಾಸವಿದ್ದ ದಂಪತಿಯ ಕುರಿತು ಸಚಿವರು ವಿವರಣೆ ನೀಡಿದ್ದಾರೆ. ಗಂಡನಿಗೆ ಕೋವಿಡ್ ಬಂದು ಮನೆಯಲ್ಲೇ ತೀರಿಹೋಗಿದ್ದರು. ಆದರೆ ಅಂತ್ಯಸಂಸ್ಕಾರ ಮಾಡಲು ಯಾರೂ ಇರಲಿಲ್ಲವಂತೆ. ಮನೆಯಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನಿರಿಸಿ ಉಳಿದವರು ದಿಕ್ಕು ತೋಚದಂತೆ ಆಗಿಬಿಟ್ಟಿದ್ದರು ಎಂದು ಸಚಿವರಿಗೆ ಅವರ ಮಿತ್ರರೊಬ್ಬರು ತಿಳಿಸಿದ್ದಾರೆ.


ನಿನ್ನೆ ನಡೆದ ಘಟನೆಯಿದು.

ಕನಕಪುರ ರಸ್ತೆಯ ತಲಗಟ್ಟಪುರ ಹತ್ತಿರದ ಒಂದು ಹಳ್ಳಿಯಲ್ಲಿ
ಗಂಡ ಹೆಂಡತಿ ವಾಸವಾಗಿದ್ದರು.

ಅದರಲ್ಲಿ ಗಂಡನಿಗೆ...Posted by Suresh Kumar S on Friday, 16 April 2021


ಕೂಡಲೇ ಕಾರ್ಯಪ್ರವೃತ್ತರಾದ ಸಚಿವ ಸುರೇಶ್ ಕುಮಾರ್ ಬೆಂಗಳೂರಿನ ರಾಜಾಜಿನಗರದ ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ವಿಚಾರ ತಿಳಿಸಿ ಆ ಕುಟುಂಬಕ್ಕೆ ಸಹಾಯ ಮಾಡಲು ಕೇಳಿಕೊಂಡಿದ್ದಾರೆ. ನಂತರ ಕಾರ್ಯಕರ್ತರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಕೆಂಗೇರಿಯ ಚಿತಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದ್ದಾರೆ.


ಅಲ್ಲಿ ಶವದ ಪರವಾಗಿ  ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ. ಅಲ್ಲದೇ ಅವರು ಶವದ ಹತ್ತಿರವಿರಲಿ, ಅದರ ವಾಹನ ಹತ್ತಿರ ಬರಲು ಕೂಡಾ ಹೆದರುತ್ತಿದ್ದರು. ಮೃತದೇಹದ ಪೂಜಾಕಾರ್ಯಯೂ ಮಾಡಲಿಲ್ಲ, ಕೊನೆಗೆ ಕಾರ್ಯಕರ್ತರೇ ಅಂತಿಮ ಸಂಸ್ಕಾರ ಮಾಡಿ ಬಂದರು. ಧೈರ್ಯದಿಂದ, ಒಳ್ಳೆ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ಆ ಕಾರ್ಯ ಮಾಡಿದ ಕಾರ್ಯಕರ್ತರಾದ ಗಿರೀಶ್, ಲಿಂಗರಾಜು, ಉಮೇಶ್ ಹಾಗೂ ಪ್ರವೀಣ್ ರವರಿಗೆ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

ಸಚಿವರ ಈ ಪೋಸ್ಟ್​ಗೆ ಅನೇಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಸಚಿವರ ಕಾಳಜಿಗೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ. ಕೊರೊನಾ ಸಂದರ್ಭದಲ್ಲಿ ಯಾವುದೇ ಸಣ್ಣ ಪ್ರಮಾಣದ ನಿರ್ಲಕ್ಷ್ಯ ಕೂಡಾ ಜೀವಕ್ಕೇ ಎರವಾಗಬಹುದು ಎನ್ನುವುದನ್ನು ಜನರು ಈ ಪ್ರಕರಣದಿಂದ ತಿಳಿದು ಎಚ್ಚೆತ್ತುಕೊಳ್ಳಬೇಕಿದೆ.


Published by: Soumya KN
First published: April 17, 2021, 11:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories