• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hijab Row: ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್​ಗೆ ಸೋಲು, ಹಾಗಾದ್ರೆ ಹಿಜಾಬ್​ ವಿವಾದ ಲಾಭ ಸಿಕ್ಕಿದ್ದು ಯಾರಿಗೆ?

Hijab Row: ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್​ಗೆ ಸೋಲು, ಹಾಗಾದ್ರೆ ಹಿಜಾಬ್​ ವಿವಾದ ಲಾಭ ಸಿಕ್ಕಿದ್ದು ಯಾರಿಗೆ?

ಹಿಜಾಬ್‌

ಹಿಜಾಬ್‌

2022 ರಲ್ಲಿ, ಬಿ.ಸಿ.ನಾಗೇಶ್ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಜಾರಿಗೊಳಿಸಿದ್ದರು. ಬಳಿಕ ಮುಸಲ್ಮಾನರ ಆರ್ಥಿಕ ಬಹಿಷ್ಕಾರಕ್ಕೆ ಮನವಿ ಮಾಡಿದ್ದರು.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು(ಮೇ.14): ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Assembly Elections 2023) ಬಂದಿದೆ. ಕಾಂಗ್ರೆಸ್ ಪಕ್ಷ ಬಹುಮತದ ಮ್ಯಾಜಿಕ್ ನಂಬರ್ ದಾಟಿದೆ. ಕರ್ನಾಟಕ ಶಿಕ್ಷಣ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಸಿ.ನಾಗೇಶ್ (BC Nagesh) ಸೇರಿದಂತೆ ಕೇಸರಿ ಪಾಳಯದ ಹಲವು ಪ್ರಮುಖ ನಾಯಕರು ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿ.ಸಿ.ನಾಗೇಶ್ ಸೋಲು ಕಂಡಿದ್ದಾರೆ. 2022 ರಲ್ಲಿ, ಬಿ.ಸಿ.ನಾಗೇಶ್ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಜಾರಿಗೊಳಿಸಿದ್ದರು. ಬಳಿಕ ಮುಸಲ್ಮಾನರ ಆರ್ಥಿಕ ಬಹಿಷ್ಕಾರಕ್ಕೆ ಮನವಿ ಮಾಡಿದ್ದರು.


ಆದರೆ, ಇದೆಲ್ಲದರ ನಡುವೆ ಬಿಜೆಪಿ ತನ್ನ ಭದ್ರಕೋಟೆಯಾದ ಉಡುಪಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ, ಅಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ. ಉಡುಪಿ ಹಿಜಾಬ್ ವಿವಾದದ ಹುಟ್ಟಿಕೊಂಡ ಕೇಂದ್ರವಾಗಿತ್ತು. ಈ ಬಾರಿ ಉಡುಪಿಯಲ್ಲಿ ರಘುಪತಿ ಭಟ್ ಟಿಕೆಟ್ ಕಡಿತಗೊಳಿಸಿ ಯಶ್ಪಾಲ್ ಸುವರ್ಣಗೆ ಬಿಜೆಪಿ ಟಿಕೆಟ್ ನೀಡಿತ್ತು. ಸುವರ್ಣ ಅವರು ಕಾಲೇಜಿನ ಉಪಾಧ್ಯಕ್ಷರಾಗಿದ್ದು, ಹೆಣ್ಮಕ್ಕಳು ಹಿಜಾಬ್ ಧರಿಸಿ ತರಗತಿಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದ್ದರು.


ಇದನ್ನೂ ಓದಿ: Political Retirement: ಹೀನಾಯ ಸೋಲಿನಿಂದ ಕಂಗೆಟ್ಟ ಬಿಎಸ್​ವೈ ಆಪ್ತ, ಬಿಕ್ಕಿ ಬಿಕ್ಕಿ ಅಳುತ್ತಲೇ ರಾಜಕೀಯ ನಿವೃತ್ತಿ ಘೋಷಣೆ!


ಇದೇ ಸಂದರ್ಭದಲ್ಲಿ ಕರಾವಳಿ ಕ್ಷೇತ್ರದಲ್ಲಿ ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟು ಹಾಕದಂತೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಇದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಸುಮಾರು 32 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.


ಈ ಜಿಲ್ಲೆಯ ಇತರ ಮೂರು ಸ್ಥಾನಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಅಂತರದಲ್ಲಿ ಗೆದ್ದಿದ್ದಾರೆ. ಅಂದರೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿಯ ಧ್ರುವೀಕರಣ ನೀತಿಯ ಪರಿಣಾಮವು ಗೋಚರಿಸಿದೆ. ಇಲ್ಲಿನ ಒಟ್ಟು 8 ರಲ್ಲಿ 6 ಸ್ಥಾನಗಳನ್ನು ಗೆದ್ದಿದೆ. ಆದರೆ, ಉತ್ತರ ಕನ್ನಡದಲ್ಲಿ ಈ ಪ್ರಯತ್ನ ವಿಫಲವಾಗಿದೆ. ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಜನಸಂಖ್ಯೆಯು ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ತುಸು ಕಡಿಮೆ ಇದೆ. . ಆದರೂ ಇಲ್ಲಿ ಬಿಜೆಪಿ ತೀರಾ ಹಿಂದುಳಿದಿದೆ. ಇಲ್ಲಿ 6 ಸ್ಥಾನಗಳ ಪೈಕಿ ಒಂದರಲ್ಲಿ ಮಾತ್ರ ಗೆಲುವು ದಾಖಲಿಸಲು ಸಾಧ್ಯವಾಗಿದೆ.


ಇದನ್ನೂ ಓದಿ: Karnataka Police: ಸರ್ಕಾರ ಬದಲಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ? ಏನಿದು ಕೇಂದ್ರದ ಪ್ಲಾನ್‌!
ಇನ್ನೊಂದೆಡೆ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಧ್ರುವೀಕರಣ ಯಶಸ್ವಿಯಾಗಿದೆ. ಮೂರು ಜಿಲ್ಲೆಗಳ 19 ಸ್ಥಾನಗಳ ಪೈಕಿ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದೆ. ಆದರೆ ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ 2011ರ ಜನಗಣತಿ ಪ್ರಕಾರ ಇಲ್ಲಿನ ಮೂರು ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಶೇ.20ರಷ್ಟಿದೆ ಎಂಬುವುದು ಉಲ್ಲೇಖನೀಯ.

First published: