• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BC Nagesh: ದೇಶವನ್ನು ಇಟಲಿಕರಣ ಮಾಡಲು ಹೋಗ್ತಿಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಬಿ ಸಿ ನಾಗೇಶ್ ತಿರುಗೇಟು

BC Nagesh: ದೇಶವನ್ನು ಇಟಲಿಕರಣ ಮಾಡಲು ಹೋಗ್ತಿಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಬಿ ಸಿ ನಾಗೇಶ್ ತಿರುಗೇಟು

ಬಿ.ಸಿ.ನಾಗೇಶ್

ಬಿ.ಸಿ.ನಾಗೇಶ್

ದೇಶದಲ್ಲಿ ಇಟಲೀಕರಣ ಮಾಡಲು ಹೋಗುತ್ತಿಲ್ಲ. ಇಟಲೀಕರಣ ಮಾಡಲು ಹೊರಟವರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ಪಂಚಾಯತ್ ಗೊಂದು ಮಾದರಿ ಕನ್ನಡ ಶಾಲೆ ಆರಂಭಿಸಿದ್ದಾರೆ ಎಂದರು.

  • Share this:

ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsava) ಹಿನ್ನಲೆ ಅಮೃತ ಭಾರತಿಗೆ ಕನ್ನಡಾದರತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಕೊಪ್ಪಳ (Koppal) ಜಿಲ್ಲೆಯ ಮೂರು ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕೊಪ್ಪಳ, ಗಂಗಾವತಿ (Gangavati), ಅಳವಂಡಿಯಲ್ಲಿ (Alavandi) ಜರುಗುತ್ತಿರುವ ಅಭಿಯಾನಕ್ಕೆ ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister BC Nagesh) ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ.ನಾಗೇಶ್, ಪಠ್ಯದಲ್ಲಿ (Text book row) ಬ್ರಾಹ್ಮಿಕರಣ ಮಾಡಲಾಗುವುದು ಎಂಬ ಆರೋಪಕ್ಕೆ ತಿರುಗೇಟು ನೀಡಿದರು. ಆರೋಪ ಮಾಡಲು ಏನು ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.  


ಪಠ್ಯದಲ್ಲಿ ಇತಿಹಾಸ ರಾಷ್ಟೀಯತೆ ಇದೆ. ಈಗಾಗಲೇ ಪಠ್ಯ ಪುಸ್ತಕಗಳು ಮುದ್ರಣಗೊಂಡು ಹೊರ ಬಂದಿವೆ. ಕಾಂಗ್ರೆಸ್ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದೆ. ಈ ಮೊದಲು ಟಿಪ್ಪು ಸುಲ್ತಾನ್, ಭಗತ್ ಸಿಂಗ್, ಬಸವಣ್ಣ ಅವರ ಪಠ್ಯ ತೆಗೆದಿದ್ದಾರೆ ಎಂಬ ಗೊಂದಲ ಮೂಡಿಸಿದರು ಎಂದು ಆಕ್ರೋಶ ಹೊರ ಹಾಕಿದರು.


ಕಾಂಗ್ರೆಸ್ ಗೊಂದಲ ಮೂಡಿಸ್ತಿದೆ


ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿ, ನ್ಯಾಯಲಯ ತೀರ್ಪು ಎಲ್ಲರೂ ಪಾಲಿಸಬೇಕು. ಸಮವಸ್ತ್ರ ಮಾತ್ರ ಅವಕಾಶವಿದೆ. ಇದರಲ್ಲಿ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿದರು.


ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು


ಇಟಲಿಕರಣ ಮಾಡಲು ಹೋಗ್ತಿಲ್ಲ


ಇನ್ನೂ ನಿನ್ನೆ ಸಿದ್ದರಾಮಯ್ಯ ಆರ್ ಎಸ್ ಎಸ್ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಇಟಲೀಕರಣ ಮಾಡಲು ಹೋಗುತ್ತಿಲ್ಲ. ಇಟಲೀಕರಣ ಮಾಡಲು ಹೊರಟವರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ಪಂಚಾಯತ್ ಗೊಂದು ಮಾದರಿ ಕನ್ನಡ ಶಾಲೆ ಆರಂಭಿಸಿದ್ದಾರೆ ಎಂದರು.


ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿಕೆ


ಪಠ್ಯದಲ್ಲಿ ಆರ್ ಎಸ್ ಎಸ್ ಹಾಗೂ ಪಕ್ಷದ ವಿಚಾರ ಸೇರಿಸಲಾಗುತ್ತಿದೆ. ಬರಗೂರರ ಪಠ್ಯ ಪರಿಷ್ಕರಣಾ ಸಮಿತಿಯು ಸಂವಿಧಾನ ಆಶಯದಂತೆ ಪಠ್ಯ ಸೇರಿಸಲಾಗಿತ್ತು. ಆದರೆ ಈಗಿ ಸರಕಾರ ಪಠ್ಯದಲ್ಲಿ ಸಂವಿದಾನ ಆಶಯಕ್ಕೆ ವಿರೋಧಿಯಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯವು ವಿದ್ಯಾರ್ಥಿಗಳನ್ನು ಚಕ್ರತೀರ್ಥದಲ್ಲಿ ಸೆಳೆಯುವಂತೆ ಮಾಡಲಾಗುತ್ತಿದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿಕೆ ನೀಡಿದ್ದಾರೆ.


ಹಂಪಿಯ ಬಳಿಯ ಚಕ್ರತೀರ್ಥವು ಎಲ್ಲವನ್ನು ತನ್ನೊಳಗೆ ಸೆಳೆಯುತ್ತದೆ. ಅದರಂತೆ ಪಕ್ಷದ ವಿಚಾರವನ್ನು ಪಠ್ಯದಲ್ಲಿ ಸೆಳೆಯುವಂತೆ ಮಾಡಿದೆ. ಭಾರತ ಬಹು ಭಾಷೆ, ಬಹು ಸಂಸ್ಕೃತಿಯ ಒಕ್ಕೂಟ ದೇಶ. ಇಲ್ಲಿ ಪ್ರಾದೇಶಿಕತೆ ಮೆಟ್ಟಲು ಏರಿದ ನಂತರ ರಾಷ್ಟ್ರೀಯತೆ ಹೆಚ್ಚಿಸಬೇಕು. ಇಲ್ಲದಿದ್ದರೆ ಸಂಘರ್ಷವಾಗುತ್ತದೆ.


ಹಡಗೇವಾರ ಪಠ್ಯದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡಿಲ್ಲ


ಬರಗೂರರ ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ 172 ಜನರಿದ್ದರು. ಸಂವಿದಾನದ ಆಶಯದಂತೆ ಪಠ್ಯ ರಚಿಸಲಾಗಿದೆ. ಹಡಗೇವಾರ ಪಠ್ಯದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡಿಲ್ಲ. ಅಲ್ಲಿ ಆರ್ ಎಸ್ ಧ್ವಜಕ್ಕೆ ಗೌರವ ಎಂದಿದೆ. ಹಡಗೆವಾರ ವಯಕ್ತಿಕವಾಗಿ ಆರ್ ಎಸ್ ಎಸ್ ಧ್ವಜ ಗೌರವಿಸಲಿ. ಆದರೆ ಅದನ್ನು ಸಾರ್ವತ್ರಿಕರಣಗೊಳಿಸುವುದು ಬೇಡ ಎಂದು ಅಲ್ಲಮಪ್ರಭು ಬೆಟ್ಟದೂರ ಆಗ್ರಹಿಸಿದರು. ಅಲ್ಲಮಪ್ರಭು ಬೆಟ್ಟದೂರ ಬರಗೂರು ರಾಮಚಂದ್ರ ಅವರ ಸಮಿತಿಯ ಸದಸ್ಯರಾಗಿದ್ದರು.


ಶಾಲೆಗೆ ತಲುಪಬೇಕಾದ ಪಠ್ಯಪುಸ್ತಕ ವಿಳಂಬ


ಶಾಲೆಗಳು ಆರಂಭವಾಗಿ ಒಂದು ವಾರ ಕಳೆದರೂ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ತಲುಪಿಲ್ಲ.. ನವೆಂಬರ್ ನಲ್ಲಿ ಪಠ್ಯಪುಸ್ತಕಕ್ಕೆ ಆರ್ಡರ್ ಕೊಡುತ್ತಿದ್ರು. ಈ ಬಾರಿ ಫೆಬ್ರವರಿಯಲ್ಲಿ ಆರ್ಡರ್ ಕೊಟ್ಟಿದ್ದಾರೆ. 4 ತಿಂಗಳು ತಡವಾಗಿ ಪಠ್ಯಪುಸ್ತಕಕ್ಕೆ ಆರ್ಡರ್ ನೀಡಿದರಿಂದ ಪುಸ್ತಕ ಪ್ರಿಂಟ್ ಆಗುವುದು ವಿಳಂಬವಾಗಿದೆ ಎಂದು ಪಠ್ಯಪುಸ್ತಕದ ಪ್ರಮುಖ ಮುದ್ರಕ ಅಭಿಮಾನಿ ಪ್ರಕಾಶನದ ಆಡಳಿತಾಧಿಕಾರಿ ಅನಿಲ್ ಹೊಸಕೊಪ್ಪ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ:  Hijab Row: ಸೊಕ್ಕಿನಿಂದ ವರ್ತನೆ ಮಾಡುತ್ತ ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಿ: ಪ್ರಮೋದ್ ಮುತಾಲಿಕ್


ಕಾಗದದ ಕೊರತೆಯಿಂದ ಪಠ್ಯ ಮುದ್ರಣ ವಿಳಂಬವಾಗಿದೆ. 5 ಕೋಟಿ 65 ಲಕ್ಷದ 25,228 ಸಫ್ಲೆ ಆಗಬೇಕಾದ ಪುಸ್ತಕ. ಪುಸ್ತಕ ಸಫ್ಲೆ ಮಾಡಲು 21 ಜನ ಪ್ರಿಂಟರ್ಸ್ ಇದ್ದಾರೆ. ಇಲ್ಲಿಯವರೆಗೂ 72% ಪುಸ್ತಕ ಪೂರೈಕೆ ಆಗಿದೆ. 3 ಕೋಟಿ 70 ಲಕ್ಷ ಪುಸ್ತಕ ಪ್ರಿಂಟ್ ಆಗಿದೆ. ಇನ್ನು 25% ಪುಸ್ತಕ ಪುಸ್ತಕ ಮುದ್ರಣವಾಗಿ ತಲುಪಬೇಕಾಗಿದೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ  ಮಕ್ಕಳಿಗೆ ಪುಸ್ತಕ ತಲುಪಲು 1 ತಿಂಗಳು ಸಮಯಾವಕಾಶ ಬೇಕಾಗುತ್ತದೆ.

top videos
    First published: