Karnataka Textbook Row: ಕುವೆಂಪು ಅವರಿಗೆ ಅವಮಾನವಾದ್ರೆ ಅದು ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತೆ: BC Nagesh

ಸಿದ್ದರಾಮಯ್ಯ ಅವರ ಚಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಶಿಕ್ಷಣ ಸಚಿವರು, ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ವೋಟ್ ಬ್ಯಾಂಕ್ ಪೋಲಿಟಿಕ್ಸ್ ಮಾಡ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಅವರು ಹೀಗೆ ಮಾಡುತ್ತಾ ಬಂದಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

  • Share this:
ಇಂದು ಧಾರವಾಡದಲ್ಲಿ (Dharwad) ಶಿಕ್ಷಣ ಸಚಿವ ಬಿ ಸಿ ನಾಗೇಶ್ (Education Minister BC Nagesh) ಸುದ್ದಿಗೋಷ್ಠಿ ನಡೆಸಿ ಪಠ್ಯಪುಸ್ತಕ ವಿವಾದ ಕುರಿತು ಮಾತನಾಡಿದರು. ಪರಿಷ್ಕರಣೆ (review) ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದ್ರೆ ತಪ್ಪು ಆಗಿದ್ದನ್ನ ನಾವು ಗಮನಿಸಿ ಅದನ್ನ ಮರು ಪರಿಷ್ಕರಣೆಗೆ (Textbook review) ಮುಂದಾಗಿದ್ದೇವೆ ಎಂದು ಹೇಳಿದರು. ಲೋಪದೋಷಗಳನ್ನ ಯಾರೇ ಕಂಡು ಹಿಡಿದರು ಅದನ್ನ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನ ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ (Children) ಮೇಲೆ ಪರಿಣಾಮ ಬಿರಬಾರದು. ಹೀಗಾಗಿ ಅದನ್ನ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಶೇ.84 ರಷ್ಟು ಪುಸ್ತಕಗಳು ಬಿಇಓ ಕಚೇರಿ ಸೇರಿದ್ದು, ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುವ ಹಾಗಾಗುತ್ತದೆ,. ಈ ಸಾರಿ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನ ತೆಗೆದುಕೊಂಡಿದ್ದೇವೆ. ಮುಂಬರೋ ದಿನಗಲ್ಲಿ ಸೈಕಲ್ ವಿತರಣೆಯನ್ನ ಸಹ ಮಾಡುವ ವಿಚಾರ ಇದೆ ಎಂದು ತಿಳಿಸಿದರು.

100 ಉದಾಹರಣೆಗಳು

ಸಾಹಿತಿಗಳನ್ನ ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ. ಮಹಾರಾಜರನ್ನ ತೆಗೆದು ಟಿಪ್ಪು ಸುಲ್ತಾನ್ ಪಠ್ಯವನ್ನು ತರಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತು ಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನ ಮಾತ್ರ ಪುಸ್ತಕದಲ್ಲಿ ತರಲಾಗಿತ್ತು. ಇಂತಹ 100 ಉದಾಹರಣೆಗಳಿವೆ ಎಂಬ ಮಾಹಿತಿ ನೀಡಿದರು.

ದೇವನೂರು ಮಹಾದೇವ ನಮಗೆ ಹೇಳಬಹುದಿತ್ತು. ಆದ್ರೆ ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಕುವೆಂಪು ಅವರಿಗೆ ಅವಮಾನ ಆದ್ರೆ ಅದು ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತದೆ. ಅವರೇ ಆ ಪಠ್ಯವನ್ನು ತೆಗೆದು ಹಾಕಿದ್ದರು.

ಇದನ್ನೂ ಓದಿ:  Threat: ಬಿಜೆಪಿ‌ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ

ಸಿದ್ದರಾಮಯ್ಯ ಸರ್ಕಾರದಲ್ಲೇ ನಾಡಗೀತೆಗೆ ಅವಮಾನ

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡಗೀತೆಗೆ ಅವಮಾನ ಆಗಿದೆ. ಪಠ್ಯಪುಸ್ತಕವನ್ನ ಒಬ್ಬರೇ ಮಾಡುವುದಿಲ್ಲ. ತಪ್ಪು ಆಗಿದೆ ಈಗ ಅದನ್ನ ಪರಿಷ್ಕರಣೆ ಮಾಡುತ್ತಿದ್ದೇವೆ ಎಂದರು.

ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ

ಸಿದ್ದರಾಮಯ್ಯ ಅವರ ಚಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಶಿಕ್ಷಣ ಸಚಿವರು, ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ವೋಟ್ ಬ್ಯಾಂಕ್ ಪೋಲಿಟಿಕ್ಸ್ ಮಾಡ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಅವರು ಹೀಗೆ ಮಾಡುತ್ತಾ ಬಂದಿದ್ದಾರೆ.

ಮತಬ್ಯಾಂಕ್ ಗಾಗಿ ಈ ರೀತಿಯ ಹೇಳಿಕೆ

ಏನು ಸಿಗದೆ ಹೋದಾಗ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಮತಬ್ಯಾಂಕ್ ಗೋಸ್ಕರ ಹೀಗೆ ಮಾಡುತ್ತಾರೆ. ಬೇಕಾದಷ್ಟು ವಿಷಯಗಳನ್ನ ಬಿಟ್ಟು RSS ಬಗ್ಗೆ ಯಾಕೆ ಮಾತನಾಡಬೇಕು. ಎಷ್ಟೊಂದು ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರಕ್ಕೆ ಅವರು ಸಲಹೆ ಕೊಡಬೇಕು. ಅದನ್ನ ಬಿಟ್ಟು ಹಿಜಾಬ್, ಮತ್ತು ಆರ್ ಎಸ್ ಎಸ್ ಬಗ್ಗೆ ಮಾತನಾಡುವುದನ್ನ ಅವರು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

ಸಮಿತಿ ವಿಸರ್ಜನೆಗೆ ಚಕ್ರತೀರ್ಥ ಅಸಮಾಧಾನ

ಓರ್ವ ಸಂಶೋಧಕನ ದಾರಿ, ಒಂದು ರಾಜಕೀಯ ಪಕ್ಷ ಅಥವಾ  ಸರ್ಕಾರದ ದಾರಿಯೂ ಆಗಬೇಕಿಲ್ಲ. ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ. ಅದಕ್ಕಾಗಿ ಆತ ಜಗತ್ತನೇ ಎದುರು ಹಾಕಿಕೊಳ್ಳುವದಕ್ಕೂ ಸಿದ್ಧನಿರುತ್ತಾನೆ. ಆದರೆ ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಗೆ ಅಂತಿಮವಾಗಿ ಮುಖ್ಯವಾಗುವುದು ಮತಗಳು. ಸತ್ಯ ಮತ್ತು ಮತ ಎಂಬ ಎರಡು ದಾರಿಗಳ ನಡುವೆ ಸಂಶೋಧಕ ಮೊದಲನೆಯದನ್ನು ಆಯ್ದುಕೊಂಡರೆ ರಾಜಕೀಯ ಶಕ್ತಿ ಎರಡನೇಯದನ್ನು ಆರಿಸಿಕೊಳ್ಳುತ್ತದೆ.

ಆರಿಸಿದ್ದೇವೆ ಎಂದಾಗ ನಾನು ಉಬ್ಬಿಲ್ಲ. ತೆಗೆದು ಹಾಕಿದ್ದೇವೆ ಎಂದಾಗ ಕುಗ್ಗಿಯೂ ಇಲ್ಲ. ಚಕ್ರತೀರ್ಥನಿಗೆ ಗೇಟ್ ಪಾಸ್ ಎಂಬ ಮಾತನ್ನು ಮಾಧ್ಯಮದಲ್ಲಿ ಓದಿದಾಗ ನಗು ಬರುತ್ತದೆ. ಗೇಟ್ ಪಾಸ್ ಕೊಡಲು ನಾನು ಯಾವ ಕಾಂಪೌಂಡಿನೊಳಗೆ ನಿಂತಿಲ್ಲ.

ಇದನ್ನೂ ಓದಿ:  Agriculture: ಜೋಯಿಡಾದ ಸರಕಾರಿ ಶಾಲೆಯಲ್ಲಿ ಕೃಷಿ ಪಾಠ; ಗಿಡ ನೆಡ್ತಾರೆ, ಬೆಳೆಯನ್ನೂ ತೆಗೀತಾರೆ ಈ ಮಕ್ಕಳು!

ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟು ಅರ್ಥಹೀನವೂ ಅಷ್ಟೇ ಅರ್ಥಹೀನವಾದದ್ದು ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎಂಬುವುದು ಕೂಡ. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನದು ಎರಡೂ ಕಡೆಗೂ ಒಪ್ಪಿಗೆಯಾದ ಪಂಥವಿರಬೇಕು. ವಿಸರ್ಜನೆ ಆದ ಮೇಲೂ ಉಳಿಯುವುದು ನನ್ನ ಜಾಯಮಾನಕ್ಕೆ ಒಗ್ಗುವಂಥಾದಲ್ಲ. ನನ್ನ  ಕೆಲಸಗಳಿಗೆ ಮರಳಿದ್ದೇನೆ ಎಂದು ರೋಹಿತ್ ಚಕ್ರತೀರ್ಥ ಹೇಳಿಕೊಂಡಿದ್ದಾರೆ.
Published by:Mahmadrafik K
First published: