Hijab, ಕೇಸರಿ ಶಾಲು ಬಳಿಕ ಸಿಂಧೂರ ಸಮರ.. ಮಹತ್ವದ ಹೇಳಿಕೆ ನೀಡಿದ ಶಿಕ್ಷಣ ಸಚಿವ BC Nagesh

ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಹಿಜಾಬ್ , ಕೇಸರಿ ಬಣ್ಣದ ಶಾಲು ಧರಿಸುವಂತಿಲ್ಲ ಅಂತ ಹೇಳಿದೆ. ಸರ್ಕಾರವೂ ಕೂಡ ಸಮವಸ್ತ್ರದ ಬಗ್ಗೆ ಮಾತ್ರ ಮಾತನಾಡಿದೆ. ಕುಂಕುಮ, ಹೂ ಮುಡಿದು ಬರಬೇಕು ಅಥವಾ ಬರಬಾರದು ಎಂಬ ಬಗ್ಗೆ ಸರ್ಕಾರ ಹೇಳಿಲ್ಲ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

  • Share this:
ತುಮಕೂರು: ಶಾಲಾ, ಕಾಲೇಜುಗಳಲ್ಲಿ (Schools and Colleges) ಹಿಂದೂ (Hindu) ಹೆಣ್ಣು ಮಕ್ಕಳು ಸಿಂಧೂರ, ಕುಂಕುಮ (Sindur) ಇಟ್ಟುಕೊಳ್ಳುವ ಬಗ್ಗೆ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್(Education Minister BC Nagesh), ಕೆಲವರು ಈ ಬಗ್ಗೆ ವಿವಾದ ಮಾಡೋಕೆ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದ, ಕೋರ್ಟಿನ ತೀರ್ಪುಗಳ ಮೂಲಕ ನಾವು ಆಡಳಿತ ಮಾಡುವಂತಾದ್ದು. ಯಾರ ಯಾರದ್ದೋ ಇಚ್ಚೆಯಂತೆ ಕೆಲಸ ಮಾಡಲ್ಲ. ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಹಿಜಾಬ್ , ಕೇಸರಿ ಬಣ್ಣದ ಶಾಲು ಧರಿಸುವಂತಿಲ್ಲ  ಅಂತ ಹೇಳಿದೆ. ಸರ್ಕಾರವೂ ಕೂಡ ಸಮವಸ್ತ್ರದ ಬಗ್ಗೆ ಮಾತ್ರ ಮಾತನಾಡಿದೆ. ಕುಂಕುಮ, ಹೂ ಮುಡಿದು ಬರಬೇಕು ಅಥವಾ ಬರಬಾರದು ಎಂಬ ಬಗ್ಗೆ ಸರ್ಕಾರ ಹೇಳಿಲ್ಲ. ಹಾಗೆ ಮಾತನಾಡಿರುವ ವಿದ್ಯಾರ್ಥಿಗಳ ಹಿಂದೆ ಪಿತೂರಿ ಇದೆ. ಮೊನ್ನೆ ಒಂದೇ ಒಂದು ಡಿಗ್ರಿ ಕಾಲೇಜಿನಲ್ಲಿ ಘಟನೆ ನಡೆದಿದೆ, ಕೂಡಲೇ ಪ್ರಿನ್ಸಿಪಲ್ ತಪ್ಪೊಪ್ಪಿಕೊಂಡಿದ್ದಾರೆ. ಮುಂದೆ ಈ ರೀತಿ ಆಗಲ್ಲ ಎಂದು  ಸಿದ್ದಗಂಗಾ ಮಠದಲ್ಲಿ‌ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಇಡೀ ಕರ್ನಾಟಕದಲ್ಲಿ Hijab ಪರವಾಗಿ 100 ಜನ ಕೂಡ ಇಲ್ಲ : ಸಚಿವ R. Ashoka ವ್ಯಂಗ್ಯ

ಕೋರ್ಟ್ ಮಧ್ಯಂತ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ

ಅನಿವಾರ್ಯವಾಗಿ ಕೆಲವು ಹೆಣ್ಣುಮಕ್ಕಳು ಕುಂಕುಮ, ಸಿಂಧೂರ ವಿಷಯಗಳನ್ನ ಎತ್ತಿರೋದು ನಾನೂ ಕೂಡ ಟಿವಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ವಿಷಯನೇ ಇಲ್ದೇ ಹೈಕೋರ್ಟ್ ನಲ್ಲಿ ಈ ಬಗ್ಗೆ ಮಾತನಾಡುವ ಒಂದಷ್ಟು ಲಾಯರ್ ಗಳನ್ನೂ ನೋಡಿದೆ. ಸದ್ಯಕ್ಕೆ ಸಮವಸ್ತ್ರದ ಮಾತುಗಳನ್ನ ಬಿಟ್ರೆ ಇನ್ಯಾವ ವಿಚಾರಗಳೂ ಬಂದಿಲ್ಲ. ಯಾವುದೇ ಶಾಲಾ ಕಾಲೇಜುಗಳಲ್ಲಿ ಈ ತರಹದ ವಿಚಾರಗಳು ನಡೆದಿಲ್ಲ. 1885ರಿಂದ ಯಾವ ಸಮವಸ್ತ್ರ ಧರಿಸಿಕೊಂಡು ಬರುತ್ತಿದ್ದರೋ ಅದೇ ಸಮವಸ್ತ್ರಗಳನ್ನ ಧರಿಸಿಕೊಂಡು ಬರಬೇಕು ಎಂಬುದು ಸರ್ಕಾರದ ಆದೇಶ ಇದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಹಿಜಾಬ್, ಕೇಸರಿ ಶಾಲು, ಸ್ಕಾರ್ಪ್ ಗಳನ್ನ ಹಾಕಿಕೊಂಡು ಬರಬಾರ್ದು ಅಂತ ಕೋರ್ಟ್ ಮಧ್ಯಂತ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ನಾನು ಮನವಿ ಮಾಡುತ್ತೇನೆ ಈ ತರಹದ ವಿಷಯಗಳನ್ನ ತೆಗೆದು ಸಮಾಜದಲ್ಲಿರುವ ಸಾಮರಸ್ಯವನ್ನ ಹಾಳು ಮಾಡಬೇಡಿ ಎಂದು ಕೇಳಿಕೊಂಡರು.

ಆದೇಶ ಉಲ್ಲಂಘನೆಯಾದ್ರೆ ಕೇಸ್​ ಹಾಕೋದು ಅನಿವಾರ್ಯ

ಹಿಜಾಬ್​ ವಿವಾದದಲ್ಲಿ ಕಾಣದ ಕೈ ಅಂತೇನಿಲ್ಲ, ಕಾಣುವ ಕೈ ಎಲ್ಲವನ್ನೂ ಮಾಡ್ತಿದೆ. ಸಿಎಫ್ ಐ ಸಂಘಟನೆ ಬಂದಿದೆ. ರಾಜಕೀಯ ನಾಯಕರು ಏನೇನು ಮಾತನಾಡುತ್ತಿದ್ದಾರೆ ಎಂಬುದನ್ನ ನಾವು ನೋಡ್ತಿದ್ದೇವೆ. ಕಾಲೇಜು ವಿದ್ಯಾರ್ಥಿನಿಯರ ಮೇಲೆ ಎಫ್ ಆರ್ ವಿಚಾರವಾಗಿ ಮಾತನಾಡಿ, ಹೈಕೋರ್ಟ್  ಆದೇಶ ಪಾಲನೆ ಮಾಡುವಂಥದ್ದು ನಮ್ಮೆಲ್ಲರ ಕರ್ತವ್ಯ. ಹೈ ಕೋರ್ಟ್ ಕೊಟ್ಟಂತಹ ಆದೇಶವನ್ನ ಪಾಲಿಸಬೇಕು, ಅದರಲ್ಲೂ ವಿದ್ಯಾರ್ಥಿಗಳು ಪಾಲಿಸಬೇಕು. ಅವರಿಗೆ ಶಿಕ್ಷಣ ಕೊಡುವುದೇ ಒಳ್ಳೆಯ ಪ್ರಜೆಗಳಾಗಬೇಕು ಎಂದು. ಅದು ಯಾವಾಗ ಉಲ್ಲಂಘನೆ ಆಗುತ್ತೆ ಆಗ ಕೇಸ್ ಹಾಕುವುದು ಅನಿವಾರ್ಯವಾಗುತ್ತೆ ಎಂದರು.

ಇದನ್ನೂ ಓದಿ: Hijab Row: ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ.. ಯಾರಿಗೆಲ್ಲಾ ಇದು ಅನ್ವಯ?

ಕೇಸರಿ ಶಾಲು ಹೊಸ ಪ್ರಾಡಕ್ಟ್

ಚಾಮರಾಜನಗರ ದಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಹಿಜಾಬ್ ಇವತ್ತಿನದ್ದಲ್ಲ, ಮೊದಲಿನಿಂದಲೂ ಇದೆ. ಆದರೆ ಕೇಸರಿ ಶಾಲು ಹೊಸ ಪ್ರಾಡಕ್ಟ್.  ಭಾರತೀಯ ಸಂಸ್ಕೃತಿ ಎಂದರೆ ಕಚ್ಚೆ ಪಂಚೆ, ಷರ್ಟ್ , ಸೀರೆ, ಬಳೆ-ಕುಂಕುಮ ಹೊರತು ಕೇಸರಿ ಶಾಲು ಅಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಮಾತನಾಡಿರುವ ಸಚಿವ ಆರ್​. ಅಶೋಕ್​ , ಹಿಜಾಬ್ ಪರ ಮಾತನಾಡುವವರು ಕೆಲವೇ ಕೆಲವು ಜನ. ಇಡೀ ಕರ್ನಾಟಕದಲ್ಲಿ ಗುಡ್ಡೆ ಹಾಕಿದರೂ 100 ಜನ ಸಿಗಲ್ಲ. ಹಿಜಾಬ್ ಪರ ಇರುವವರ ಓಟು ಬೇಡ ಸಿಂಪಥಿಯೂ ಬೇಡ. ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಹಿಜಾಬ್, ಕೇಸರಿ ಮುಖ್ಯ ಅಲ್ಲ ಅಂತ ಅವರೇ ಕರೆ ಕೊಟ್ಟಿದ್ದಾರೆ. ಬಹಳಷ್ಟು ಮೌಲ್ವಿಗಳು ಹಿಜಾಬ್ ಮುಖ್ಯ ಅಲ್ಲ ಎಂದಿದ್ದಾರೆ. ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
Published by:Kavya V
First published: