ಬಾರ್ ಓಪನ್​ ಮಾಡ್ತೀರಾ ಆದರೆ, ಸ್ಕೂಲ್​​ ಯಾಕೆ ಇಲ್ಲ; ಕೂಡಲೇ ಶಾಲೆ‌ ತೆರೆಯುವಂತೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಒತ್ತಾಯ

ಕಳೆದ 15 ತಿಂಗಳಿನಿಂದ ಕೊರೋನಾ ದಿಂದ ಶಾಲೆ ಸಂಪೂರ್ಣ ಬಂದ್ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾಗಿ ಆನ್ ಲೈನ್ ಶಿಕ್ಷಣ ಸಿಕ್ಕಿಲ್ಲ. ಈಗಾಗಲೇ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ

ಸಭೆ

ಸಭೆ

  • Share this:
ಬೆಂಗಳೂರು (ಜು. 7): ರಾಜ್ಯದಲ್ಲಿ ಕೊರೊನಾ‌ ಪ್ರಕರಣಗಳ ಸಂಖ್ಯೆ ಇಳಿ ಮುಖವಾಗುತ್ತಿದ್ದಂತೆ ಸರ್ಕಾರ ಎಲ್ಲ ವಲಯಗಳ ಮೇಲಿದ್ದ‌ ನಿರ್ಬಂದ ಸಡಿಲವಾಯಿತು. ಆದರೆ ಶಾಲೆ ತೆರೆಯಲು ಮಾತ್ರ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದಕ್ಕೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ವಾಗ್ದಾಳಿ ನಡೆಸಿದ ಅವರು,  ಈಗಾಗಲೇ ತಜ್ಞರ ಸಮಿತಿ ಶಾಲೆ ತೆರೆಯುವಂತೆ ವರದಿ ನೀಡಿದೆ. ನಾವೂ ಶಾಲೆ ಆರಂಭಿಸಿ ಎಂದು ಹೇಳಿದ್ದೇವೆ. ಆದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಸುಮ್ಮನಾಗಿದ್ದಾರೆ. ಸಿಎಂ ಈ ಕೂಡಲೇ ಗಮನಹರಿಸಿ ಶಾಲೆ ತೆರೆಯಬೇಕು. ಮದುವೆ ಅವಕಾಶ ಕೊಡ್ತೀರಿ, ಬಾರ್ ಓಪನ್ ಮಾಡಿಸ್ತೀರಿ. ಆದರೆ ಶಾಲೆ ಯಾಕೆ ತೆರೆಯುತ್ತಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಕಳೆದ 15 ತಿಂಗಳಿನಿಂದ ಕೊರೋನಾ ದಿಂದ ಶಾಲೆ ಸಂಪೂರ್ಣ ಬಂದ್ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾಗಿ ಆನ್ ಲೈನ್ ಶಿಕ್ಷಣ ಸಿಕ್ಕಿಲ್ಲ. ಈಗಾಗಲೇ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಾಲ್ಯ ವಿವಾಹ, ಬಾಲ ಕಾರ್ಮಿಕರಾಗಿ ಮಕ್ಕಳು ಬದಲಾಗುತ್ತಿದ್ದಾರೆ. ಕೊರೊನಾಕ್ಕಿಂತಲೂ ಇತರೆ ಅಪೌಷ್ಟಿಕತೆಯಿಂದ‌ ಮಕ್ಕಳು ಸಾಯುತ್ತಿದ್ದಾರೆ. ಕಲಿಕೆಯ ವಿಧಾನವನ್ನು ಆನ್‌ಲೈನ್ ನಿಂದ ಸಂಪೂರ್ಣಗೊಳಿಸಲು ಸಾಧ್ಯವಿಲ್ಲ.‌ ಕೂಡಲೇ ಸರ್ಕಾರ ಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ವಿದ್ಯಾಗಮ ಅಥವಾ ಯಾವುದೇ ಮಾದರಿಯಲ್ಲಿ ಅದ್ರೂ ಶಾಲೆ ಪ್ರಾರಂಭಿಸುವ ಅನಿವಾರ್ಯತೆಯಿದೆ ಎಂದು ಶಿಕ್ಷಣ‌ ತಜ್ಞ ವಿವರಿಸಿದರು. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣ ದಿಂದ ದೂರ ಉಳಿಯುತ್ತಿದ್ದಾರೆ. ಶಾಲೆ ಪ್ರಾರಂಭಿಸುವ ವಿಚಾರದಲ್ಲಿ  ಸರ್ಕಾರಿ ಶಾಲೆಗಳ ಜೊತೆ ಖಾಸಗಿ ಶಾಲೆಗಳನ್ನ ಪ್ರಾರಂಭಿಸಲು ಖಾಸಗಿ ಶಾಲಾಕಾಲೇಜು ಒಕ್ಕೂಟ ಅಧ್ಯಕ್ಷ‌ ಲೋಕೇಶ್‌ ತಾಳಿಕಟ್ಟೆ ಒತ್ತಾಯ ಮಾಡಿದರು.

ಕೊರೊನಾದಿಂದ ಶೇ.30ರಷ್ಟು ಮಕ್ಕಳಿಗೆ ಶಿಕ್ಷಣ ದೊರೆತಿಲ್ಲ ಎಂದು ಶಿಕ್ಷಣ ಇಲಾಖೆ ಸರ್ವೆ ಯಿಂದ ಬಹಿರಂಗಗೊಂಡಿದೆ. ಮಕ್ಕಳ ಶಿಕ್ಷಣದ ಕುರಿತು ವಿಶ್ವದ ಯಾವುದೇ ಸಂಶೋಧನೆ ಗಮನಿಸಿ ಶಾಲೆ ತುಂಬ ಮುಖ್ಯ ಎಂಬುದೇ ತಿಳಿಸಿವೆ. ಈಗಾಗಲೇ‌ ಸರ್ಕಾರ‌ ತಜ್ಞರ ವರದಿ ಇದ್ದರೂ ಇದೀಗ‌ ಮತ್ತೊಂದು ಸಮಿತಿ‌ ರಚಿಸಿ ವರದಿ‌ ತರಿಸುತ್ತಿರುವುದು ಏಕೆ‌ ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕಿದೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: