ಶಾಲೆ ಆರಂಭಿಸುತ್ತಿರುವುದು ಸರ್ಕಾರದ ಪ್ರತಿಷ್ಠೆಗಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ; ಸಚಿವ ಸುರೇಶ್ ಕುಮಾರ್

ನನ್ನ ಮತ್ತು ಸಚಿವ ಸುಧಾಕರ್ ಸ್ನೇಹ ತುಂಬಾ ಚೆನ್ನಾಗಿದೆ. ನಾವು ಸರ್ಕಾರದಲ್ಲಿ ವೈಯಕ್ತಿಕ ಪ್ರತಿಷ್ಠೆಗೆ ಕೆಲಸ ಮಾಡುತ್ತಿಲ್ಲ. ನಮ್ಮ ನಡುವೆ ಅತ್ಯುತ್ತಮ ರೀತಿಯ ಸಮನ್ವಯತೆಯಿದೆ. ಶಾಲಾ ಆರಂಭಕ್ಕೆ ನಾನು ಹಠ ಹಿಡಿದಿಲ್ಲ. ಅದರಿಂದ ನನಗೆ ಆಗಬೇಕಿರುವುದು ಏನೂ ಇಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸಚಿವ ಸುರೇಶ್​ ಕುಮಾರ್

ಸಚಿವ ಸುರೇಶ್​ ಕುಮಾರ್

  • Share this:
ಬೆಂಗಳೂರು (ಡಿ. 24): ಶಾಲೆಯನ್ನು ಶುರು ಮಾಡೋದು ಸರ್ಕಾರದ ಪ್ರತಿಷ್ಠೆಗಾಗಿ ಅಲ್ಲ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಶಾಲೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನಡುವೆ ಹೊಂದಾಣಿಕೆ ಇದೆ. ನಾವು ವೈಯಕ್ತಿಕ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿಲ್ಲ, ರಾಜ್ಯದ ಶ್ರೇಯೋಭಿವೃದ್ಧಿಗೆ ದುಡಿಯುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ನನ್ನ ಹಾಗೂ ಸುಧಾಕರ್ ನಡುವೆ ಸಮನ್ವಯತೆ ಇಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಜೊತೆಗೆ ಶಾಲೆ ಆರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಹಠ ಹಿಡಿದಿದ್ದಾರೆ ಎಂಬ ಸುದ್ದಿ ಹೋಗುತ್ತಿದೆ. ಶಾಲೆ ಶುರು ಮಾಡೋದು ಸರ್ಕಾರದ ಪ್ರತಿಷ್ಠೆಗಾಗಿ ಅಲ್ಲ. ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಶಾಲೆ ಆರಂಭದ ಬಗ್ಗೆ ನಿರ್ಧಾರ ಮಾಡಲಾಗಿದೆ. ಪ್ರತಿಯೊಂದು ಹಂತದಲ್ಲೂ ಆರೋಗ್ಯ ಇಲಾಖೆ, ಸಚಿವ ಡಾ. ಕೆ. ಸುಧಾಕರ್ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಮತ್ತೆ ಶಿಕ್ಷಣ ಹೇಗೆ ಸಮಾಜಕ್ಕೆ ಅತ್ಯವಶ್ಯವೆಂಬುದನ್ನು ಅರಿತು ನಾವು ಕೂಡ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ನಾನೇನೂ ಬೆಂಗಳೂರಲ್ಲಿ ಕುಳಿತಿಲ್ಲ, ಗ್ರಾಮೀಣ ಪ್ರದೇಶದ ಬಗ್ಗೆಯೂ ನೋಡ್ತಿದ್ದೇವೆ. ಅಲ್ಲಿ ಮಕ್ಕಳು ಬಾಲ್ಯ ವಿವಾಹ ಸೇರಿದಂತೆ ಏನೆಲ್ಲ ಪರಿಣಾಮ ಆಗಿದೆ ಅಂತ ಗೊತ್ತಿದೆ. ಅದಕ್ಕಾಗಿ ನಾವು ಶಾಲೆ ಆರಂಭದ ಬಗ್ಗೆ ನಿರ್ಧಾರ ಮಾಡಿದ್ದೇವೆ. ನಾವಿಬ್ಬರೂ ಹೊಂದಾಣಿಕೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನನ್ನ ಮತ್ತು ಸಚಿವ ಸುಧಾಕರ್ ಸ್ನೇಹ ತುಂಬಾ ಚೆನ್ನಾಗಿದೆ. ನಾವು ಸರ್ಕಾರದಲ್ಲಿ ವೈಯಕ್ತಿಕ ಪ್ರತಿಷ್ಠೆಗೆ ಕೆಲಸ ಮಾಡುತ್ತಿಲ್ಲ. ನಮ್ಮ ನಡುವೆ ಅತ್ಯುತ್ತಮ ರೀತಿಯ ಸಮನ್ವಯತೆಯಿದೆ. ಶಾಲಾ ಆರಂಭಕ್ಕೆ ನಾನು ಹಠ ಹಿಡಿದಿಲ್ಲ. ಅದರಿಂದ ನನಗೆ ಆಗಬೇಕಿರುವುದು ಏನೂ ಇಲ್ಲ. ಶಾಲೆಗಳಿಲ್ಲದೇ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ, ಬಾಲ್ಯವಿವಾಹ ನಡೆಯುತ್ತಿದೆ. ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಇಲ್ಲದ ಜಿಲ್ಲೆಗಳಲ್ಲಿ ಶಾಲೆಗಳ ಆರಂಭಕ್ಕೆ ಹೈಕೋರ್ಟ್ ಸಲಹೆ ಕೊಟ್ಟಿದೆ ಎಂದಿರುವ ಸಚಿವ ಸುರೇಶ್ ಕುಮಾರ್, ತಮ್ಮ ವಿರುದ್ಧ ಎಂಎಲ್​ಸಿ ಹೆಚ್. ವಿಶ್ವನಾಥ್ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವನಾಥ್ ಅವರು ಶಿಕ್ಷಣ ಸಚಿವರಾಗಿದ್ದವರು. ಶಾಲೆಗಳ ಬಗ್ಗೆ ಅಭಿಪ್ರಾಯ ಕೊಡಲು ವಿಶ್ವನಾಥ್ ಅವರಿಗೆ ಪೂರ್ಣ ಅಧಿಕಾರ ಇದೆ. ವಿಶ್ವನಾಥ್ ಅವರ ಅಭಿಪ್ರಾಯಗಳಿಗೆ ನಾನು ಗೌರವ ಕೊಡುತ್ತೇನೆ. ಅವರು ನೀಡಿರುವ ಸಲಹೆಗಳನ್ನು ಪರಿಗಣಿಸುತ್ತೇವೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಬಗ್ಗೆ ವಿಶ್ವನಾಥ್ ಅವರ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸುತ್ತೇನೆ. ವಿಶ್ವನಾಥ್ ಅವರು ಏನಾದರೂ ಸಲಹೆ ಕೊಟ್ಟರೆ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Published by:Sushma Chakre
First published: