Ede Tumbi Haduvenu: ಎದೆ ತುಂಬಿ ಹಾಡುವೆನು ಸ್ಪರ್ಧಿ ಸೂರ್ಯಕಾಂತ ಮನವಿಗೆ ಸಿಎಂ ಸ್ಪಂದನೆ- ಊರಿಗೆ ಬಸ್ಸಿನ ವ್ಯವಸ್ಥೆ ಮಾಡಿದ ಸರ್ಕಾರ

Suryakanth: ಇದರ ನಡುವೆ ನಮ್ಮ ಹುಡುಗ, ಕರ್ನಾಟಕ ಜನತೆಯಂತೆಯೆ ನಾನು ಕೂಡ ಸೂರ್ಯಕಾಂತ ಅವರ ಅಭಿಮಾನಿ, ಚೆನ್ನಾಗಿ ಹಾಡು ಹಾಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಅವರು ಸೂರ್ಯಕಾಂತ್‌ರ ಗುಣಗಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎದೆ ತುಂಬಿ ಹಾಡುವೆನು ಹಾಡುಗಾರರಿಗೆ ಅದ್ಭುತ ವೇದಿಕೆ ಕಲ್ಪಿಸಿಕೊಡುವ ವೇದಿಕೆ. ದಿವಂಗತ ಗಾನ ಕೋಗಿಲೆ ಎಸ್​.ಪಿ.ಬಿ(SPB) ಅವರು ಸುಮಾರು ವರ್ಷಗಳ ಹಿಂದೆ ನಡೆಸಿಕೊಡುತ್ತಿದ್ದ, ಈ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮತ್ತೆ ಆರಂಭಿಸಲಾಗಿದೆ. ಈ ಸ್ಪರ್ಧೆಗೆ ನಾಡಿನ ಮೂಲೆ ಮೂಲೆಯಿಂದ ಸ್ಪರ್ಧಿಗಳು ಬಂದಿದ್ದಾರೆ.  ಹಾಗೆಯೇ ಈ ಸ್ಪರ್ಧೆಗೆ  ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಹಳ್ಳಿ ಎಂಬ ಕುಗ್ರಾಮದಿಂದ ಸೂರ್ಯಕಾಂತ್ ಎನ್ನುವ ಅದ್ಭುತ ಪ್ರತಿಭೆ ಕೂಡ  ಬಂದಿದ್ದಾರೆ.  ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಸ್ಪರ್ಧಿ. ಸೂರ್ಯಕಾಂತ್‌ಗೆ ಸರಿಯಾಗಿ  ಮಾತು ಬರಲ್ಲ, ಆದರೆ ಹಾಡು ಮಾತ್ರ ಚೆನ್ನಾಗಿ ಹಾಡುತ್ತಾರೆ. ಸೂರ್ಯಕಾಂತ್‌ಗೆ ಮಾತು ಕೈಕೊಟ್ಟರೂ, ಸಂಗೀತ ಕೈಬಿಡಲಿಲ್ಲ. ಜನರು ಕೂಡ ಅವರ ಸಂಗೀತಕ್ಕೆ ಮನಸೋತಿದ್ದರು. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಕೂಡ ಆಗ್ತಿದೆ.  ಆದರೆ ಸೂರ್ಯಕಾಂತ ಅವರ ಊರಿಗೆ ಬಸ್(Bus) ವ್ಯವಸ್ಥೆ ಇರಲಿಲ್ಲ.  ಊರಿನ ಜನರು  ಪ್ರಯಾಣ ಮಾಡಲು ಪರದಾಡಬೇಕಾಗಿತ್ತು, ಆದರೆ ಇದೀಗ ಸೂರ್ಯಕಾಂತ ಮೂಲಕ ಊರಿಗೆ ಬಸ್ಸಿನ ವ್ಯವಸ್ಥೆಯಾಗಿದೆ.

27 ವರ್ಷದಿಂದ ಗಡಿಲಿಂಗದಹಳ್ಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಎದೆ ತುಂಬಿ ಹಾಡುವೆನು' ಶೋನಲ್ಲಿ ಸೂರ್ಯಕಾಂತ್ ಅವರು ಊರಿನ ಸಮಸ್ಯೆ ಹೇಳಿಕೊಂಡು, ಮುಖ್ಯಮಂತ್ರಿ ಅವರ ಬಳಿ  ಊರಿಗೆ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮಾನವಿ ಮಾಡಿದ್ದರು. . ಅದನ್ನು ನೋಡಿ ಸರ್ಕಾರ ಇದೀಗ ಸ್ಪಂದಿಸಿದೆ.  ಹೌದು, ಸೂರ್ಯಕಾಂತ್ ಮನವಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಂದಿಸಿದ್ದು, ಬಸ್ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸೂರ್ಯಕಾಂತ, ನಮ್ಮೂರಲ್ಲಿ ಬಸ್ ವ್ಯವಸ್ಥೆಯೇ ಇರಲಿಲ್ಲ. ನಮ್ಮ ಊರಿನಲ್ಲಿ ಸಿಕ್ಕಾಪಟ್ಟೆ ಹೋರಾಟ ಮಾಡಿದ್ದಾರೆ, ಆದರೆ ಸರ್ಕಾರ ಬಸ್ ವ್ಯವಸ್ಥೆ ನೀಡಿರಲಿಲ್ಲ. ಆದರೆ ಈಗ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನಾನು ಸಿಎಂ ಬಸವರಾಜ್ ಬೊಮ್ಮಾಯಿ  ಅವರಿಗೆ ಧನ್ಯವಾದ ತಿಳಿಸುವೆ  ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೀತಾ ಪಾತ್ರಕ್ಕೆ 12 ಕೋಟಿ ಬೇಡಿಕೆ; ಟ್ರೋಲ್ ಪೇಜ್​ಗಳ ಬಗ್ಗೆ ಕರೀನಾ ಕಫೂರ್​ ಹೇಳಿದ್ದೇನು ಗೊತ್ತಾ?

ಇದರ ನಡುವೆ ನಮ್ಮ ಹುಡುಗ, ಕರ್ನಾಟಕ ಜನತೆಯಂತೆಯೆ ನಾನು ಕೂಡ ಸೂರ್ಯಕಾಂತ ಅವರ ಅಭಿಮಾನಿ, ಚೆನ್ನಾಗಿ ಹಾಡು ಹಾಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಅವರು ಸೂರ್ಯಕಾಂತ್‌ರ ಗುಣಗಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನನ್ನ  ಮೊಬೈಲ್‌ಗೆ ನಮ್ಮ ಊರಿಗೆ ಬಸ್ ಬಿಡಲಾಗಿದೆ ಎಂಬ ಮೆಸೇಜ್ ಬರುತ್ತಿದ್ದಂತೆ  ಹಂಡೆ ಹಾಲು ಕುಡಿದಷ್ಟು ಸಂತೋಷವಾಯ್ತು ಎಂದು ಸೂರ್ಯಕಾಂತ ಹೇಳಿಕೊಂಡಿದ್ದಾರೆ. ಗಡಿಲಿಂಗದಹಳ್ಳಿಗೆ ಬಸ್ ವ್ಯವಸ್ಥೆ ಮಾಡಿದ್ದಕ್ಕೆ ನಮ್ಮ ಊರಿನ ಮಂದಿ ಖುಷಿಯಿಂದ ಕಣ್ಣೀರು ಹಾಕಿದ್ರು. ಗರ್ಭಿಣಿ ಹೆಣ್ಣುಮಕ್ಕಳು ಆಸ್ಪತ್ರೆಗೆ ಹೋಗಬೇಕು ಎಂದರೆ ತುಂಬ ಕಷ್ಟ  ಪಡಬೇಕಾಗಿತ್ತು. ರಸ್ತೆಯಲ್ಲಿಯೇ ಹೆರಿಗೆಯಾದ ಹಲವಾರು  ಘಟನೆಗಳಿವೆ . ಎಲ್ಲಾದರೂ ಹೋಗಬೇಕು ಎಂದರೆ ದೇವರಿಗೆ ಶಾಪ ಹಾಕಿ ಹೋಗುತ್ತಿದ್ದೆ ಎಂದು ಸೂರ್ಯಕಾಂತ್ ಭಾವುಕರಾಗಿ ಮಾತನಾಡಿದ್ದಾರೆ.

ಸೂರ್ಯಕಾಂತ್ ಅವರಿಗೆ ಮಾತಿನ ಸಮಸ್ಯೆ ಇರೋದರಿಂದ ರಘು ದೀಕ್ಷಿತ್ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು.  ಅದರ ಜೊತೆಗೆ ಸಿಹಿಕಹಿ ಚಂದ್ರು ಅವರು ಕೂಡ ಸೂರ್ಯಕಾಂತ್ ಸಮಸ್ಯೆಗೆ  ಪರಿಹಾರ ಒದಗಿಸುವುದಾಗಿ  ಹೇಳಿದ್ದಾರೆ.

ಇನ್ನು ತುಂಬ ಕಷ್ಟದಲ್ಲಿ ಬೆಳೆದ ಸೂರ್ಯಕಾಂತ್‌ಗೆ ತಾಯಿಯೇ ಸರ್ವಸ್ವ. ತಾಯಿ ಕಷ್ಟವಿದ್ದರೂ ತಮ್ಮನ್ನು ಬೆಳೆಸಿದ್ದನ್ನು ಸೂರ್ಯಕಾಂತ್‌ ಹೇಳಿಕೊಳ್ಳುತ್ತಾರೆ. ಇನ್ನು ಗದಗದ ಆಶ್ರಮದಲ್ಲಿಯೇ ಸೂರ್ಯಕಾಂತ್ ಸಂಗೀತದ ಪಾಠ ಕಲಿತಿದ್ದಾರೆ.
ಇದನ್ನೂ ಓದಿ: ಶಟ್ ಅಪ್ ಬೆಂಡ್ ಓವರ್’ ಎನ್ನುತ್ತಿದ್ದಾರೆ ‘ಕಣ್ಣು ಹೊಡೆಯುವ' ಚೆಲುವೆ ಪ್ರಿಯಾ ವಾರಿಯರ್..!

ದೇವರು ಒಂದು ಕೊಟ್ಟರೆ, ಇನ್ನೊಂದು ಕಸಿದುಕೊಳ್ಳುತ್ತಾನೆ. ನನ್ನನ್ನು ಟೀಕೆ ಮಾಡಿದವರು ನನಗೆ ದೇವರು ಹೊರತು ಶತ್ರುಗಳಲ್ಲ, ಅವರಿಂದಲೇ ನಾನು ಇಂದು ಈ ಸ್ಥಿತಿಯಲ್ಲಿದ್ದೇನೆ, ಅವರಿಗೆಲ್ಲ ನಾನು ಮಾತನಾಡದೆ ಹಾಡಿನ ಮೂಲಕ ಉತ್ತರ ಕೊಡ್ತೀನಿ. ಅಂದು ಟೀಕೆ ಮಾಡಿದವರು ಇವತ್ತು ಸೋಶಿಯಲ್ ಮೀಡಿಯಾದಲ್ಲಿ ನನ್ನ ಸ್ಟೇಟಸ್ ಹಾಕ್ತಾರೆ ಎಂದು ಸೂರ್ಯಕಾಂತ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
Published by:Sandhya M
First published: