ಸಿಎಂ ಕುಮಾರಸ್ವಾಮಿ ಅನುಮಾನ ನಿಜವಾಯ್ತಾ?; ಡಿಕೆಶಿ ವಿರುದ್ಧ ಎಫ್​ಐಆರ್ ದಾಖಲಿಸಲು ಇಡಿ ಸಿದ್ಧತೆ

news18
Updated:September 8, 2018, 10:08 AM IST
ಸಿಎಂ ಕುಮಾರಸ್ವಾಮಿ ಅನುಮಾನ ನಿಜವಾಯ್ತಾ?; ಡಿಕೆಶಿ ವಿರುದ್ಧ ಎಫ್​ಐಆರ್ ದಾಖಲಿಸಲು ಇಡಿ ಸಿದ್ಧತೆ
news18
Updated: September 8, 2018, 10:08 AM IST
ಮಂಜುನಾಥ್, ನ್ಯೂಸ್​ ​18 ಕನ್ನಡ

ಬೆಂಗಳೂರು (ಸೆ. 8): ಹವಾಲಾ ಮೂಲಕ ಹಣ ವರ್ಗಾವಣೆ ಪ್ರಕರಣದಲ್ಲಿ ದೂರು ದಾಖಲಿಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಯಾವುದೇ ಕ್ಷಣದಲ್ಲಿ ಬೇಕಾದರೂ ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ಎಫ್​ಐಆರ್​ ದಾಖಲಿಸುವ ಸಾಧ್ಯತೆಯಿದೆ.

ದೆಹಲಿ ಫ್ಲ್ಯಾಟ್​ನಲ್ಲಿ 4 ಕೋಟಿ ರೂ. ಪತ್ತೆ ಪ್ರಕರಣದಲ್ಲಿ ದೆಹಲಿ ಇಡಿ ಕಚೇರಿಯಲ್ಲಿ ಎಫ್​ಐಆರ್​ ದಾಖಲಿಸಲು ಸಿದ್ಧತೆಗಳು ನಡೆಯುತ್ತಿವೆ.  ಈ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್​ ಅವರಿಗೆ ನೋಟಿಸ್​ ನೀಡಿ ವಿವರಣೆ ಪಡೆದಿದೆ. ಒಂದುವೇಳೆ, ಸಚಿವ ಡಿಕೆಶಿ ವಿರುದ್ಧದ ಆರೋಪ ಸಾಬೀತಾದರೆ 3ರಿಂದ 7 ವರ್ಷ ಜೈಲು ಶಿಕ್ಷೆ ಖಚಿತ. ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲಾದರೆ ಡಿಕೆಶಿ ಹೆಸರಿನಲ್ಲಿ ಇರುವ ಆಸ್ತಿಪಾಸ್ತಿ ಜಪ್ತಿ ಮಾಡಬಹುದು, ಅವರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗಬಹುದು.

ಮೊನ್ನೆಯಷ್ಟೇ ಜಾರಿ ನಿರ್ದೇಶನಾಲಯದ ದುರ್ಬಳಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದರು. ಐಟಿ, ಇಡಿಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೆಚ್ಡಿಕೆ ಆರೋಪಿಸಿದ್ದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಷಡ್ಯಂತರಗಳು ಹೆಚ್ಚುತ್ತಿದೆ. ಸಿಎಂ ಕೇಂದ್ರ ಸರ್ಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲು ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್​ ಕಾಂಗ್ರೆಸ್​ ಪಕ್ಷದ ಪ್ರಭಾವೀ ರಾಜಕಾರಣಿ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಡಿಕೆಶಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಕಷ್ಟು ಶ್ರಮಿಸಿದವರು. ಇದೀಗ, ಸಿಎಂ ಕುಮಾರಸ್ವಾಮಿ ಅವರಿಗೂ ಆಪ್ತರಾಗಿರುವ ಡಿಕೆಶಿ ಅವರಿಗೆ ಹಣ ಬಲ ಮಾತ್ರವಲ್ಲದೆ ಜನಬಲವೂ ಇರುವುದರಿಂದ ರಾಜ್ಯ ರಾಜಕೀಯದಲ್ಲಿ ಅವರ ಆಟ ಒಂದು ಕೈ ಮೇಲೆಂದೇ ಹೇಳಬಹುದು. ಅವರ ಮೇಲೆ ಪ್ರಕರಣ ದಾಖಲಿಸಿ ಮಟ್ಟ ಹಾಕಿದರೆ ರಾಜ್ಯ ಕಾಂಗ್ರೆಸ್​-ಜೆಡಿಎಸ್​ ನಾಯಕರನ್ನು ಮಣಿಸುವುದು ಸುಲಭ ಎಂಬ ಲೆಕ್ಕಾಚಾರವೂ ಬಿಜೆಪಿ ಹೈಕಮಾಂಡ್​ಗೆ ಇರಬಹುದು.ಈ ಹಿಂದೆ ಕೂಡ ಡಿ.ಕೆ. ಶಿವಕುಮಾರ್​ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿತ್ತು.

 

 
Loading...

 
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ