• Home
  • »
  • News
  • »
  • state
  • »
  • D K Shivakumar: ಡಿಕೆ ಬ್ರದರ್ಸ್​ಗೆ ಮತ್ತೆ ಸಂಕಷ್ಟ; ವಿಚಾರಣೆ ಹಾಜರಾಗುವಂತೆ ಡಿಕೆ ಶಿವಕುಮಾರ್​, ಸುರೇಶ್​ಗೆ ಇಡಿ ನೋಟಿಸ್​!

D K Shivakumar: ಡಿಕೆ ಬ್ರದರ್ಸ್​ಗೆ ಮತ್ತೆ ಸಂಕಷ್ಟ; ವಿಚಾರಣೆ ಹಾಜರಾಗುವಂತೆ ಡಿಕೆ ಶಿವಕುಮಾರ್​, ಸುರೇಶ್​ಗೆ ಇಡಿ ನೋಟಿಸ್​!

ಡಿಕೆ ಬ್ರದರ್ಸ್​ಗೆ ನೋಟಿಸ್​

ಡಿಕೆ ಬ್ರದರ್ಸ್​ಗೆ ನೋಟಿಸ್​

ನ್ಯಾಷನಲ್​ ಹೆರಾಲ್ಡ್​ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್​ 7ನೇ ತಾರೀಖು ಖುದ್ದು ವಿಚಾರಣೆಗೆ ಹಾಜರಾಗುವಂತೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ (D.K Shivakumar) ಇಡಿ ಸಮನ್ಸ್  ನೀಡಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.04):  ಡಿಕೆ ಬ್ರದರ್ಸ್ (DK Brothers) ಮತ್ತೆ ಸಂಕಷ್ಟ ಶುರುವಾಗಿದ್ದು,  ನ್ಯಾಷನಲ್​ ಹೆರಾಲ್ಡ್​ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್​ 7ನೇ ತಾರೀಖು ಖುದ್ದು ವಿಚಾರಣೆಗೆ ಹಾಜರಾಗುವಂತೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ (D.K Shivakumar) ಇಡಿ ಸಮನ್ಸ್  ನೀಡಿದೆ.  ನವೆಂಬರ್​ 7ರಂದು ಸೋಮವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಂಸದ ಡಿ ಕೆ ಸುರೇಶ್​ಗೂ (DK Suresh) ಸಮನ್ಸ್  (Summons) ಜಾರಿ ಮಾಡಲಾಗಿದೆ. 


ಏನಿದು ನ್ಯಾಷನಲ್ ಹೆರಾಲ್ಡ್?


ನ್ಯಾಷನಲ್ ಹೆರಾಲ್ಡ್ ಎನ್ನುವುದು ಮಾಜಿ ಪ್ರಧಾನಿ ದಿ. ಜವಾಹರ್ ಲಾಲಾ ನೆಹರೂ ಅವರ ಕನಸಿನ ಪತ್ರಿಕೆ. 1938ರಲ್ಲಿ ನೆಹರೂ ಇದರ ಮಾತೃಸಂಸ್ಥೆ ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸ್ಥಾಪಿಸಿ, ಅಲ್ಲಿಂದ ನ್ಯಾಷನಲ್ ಹೆರಾಲ್ಡ್ ಸ್ಥಾಪಿಸಿದ್ರು. ಸದ್ಯ ಇದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕಂಪನಿಯ ಯಂಗ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ.


dk shivakumar case, dk shivakumar money laundering case, national herald case, kannada news, karnataka news, ಡಿಕೆ ಶಿವಕುಮಾರ್ ಕೇಸ್, ನ್ಯಾಷನಲ್ ಹೆರಾಲ್ಡ್​ ಕೇಸ್


ಹಲವು ಪತ್ರಿಕೆಗಳ ಮುದ್ರಣ


ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 5,000 ಸ್ವಾತಂತ್ರ್ಯ ಹೋರಾಟಗಾರರನ್ನು ತನ್ನ ಷೇರುದಾರರನ್ನಾಗಿ ಮಾಡಿತು. ಕಂಪನಿಯು ಇಂಗ್ಲಿಷ್ ದೈನಿಕ ನ್ಯಾಷನಲ್ ಹೆರಾಲ್ಡ್ ಅನ್ನು ಪ್ರಕಟಿಸಿತು. ಜೊತೆಗೆ ಉರ್ದುವಿನಲ್ಲಿ ಕ್ವಾಮಿ ಅವಾಜ್  ಮತ್ತು ಹಿಂದಿಯಲ್ಲಿ ನವಜೀವನ್ ಅನ್ನು ಪ್ರಕಟಿಸಿತು.


2008ರಲ್ಲಿ ಸ್ಥಗಿತ, 2016ರಲ್ಲಿ ಪುನಾರಂಭ


ಆದಾಗ್ಯೂ, ಮಾತೃಸಂಸ್ಥೆಯು ಸಾಲದ ಸುಳಿಯಲ್ಲಿ ಸಿಲುಕಿದ ನಂತರ 2008 ರಲ್ಲಿ ಪತ್ರಿಕೆಗಳನ್ನು ಮುಚ್ಚಲಾಯಿತು. ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ 90.25 ಕೋಟಿ ಬಡ್ಡಿ ರಹಿತ ಸಾಲವನ್ನು ತೆಗೆದುಕೊಂಡಿತ್ತು. 2010ರ ವೇಳೆಗೆ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ, ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. 2016ರಿಂದ ಮ್ತತೊಮ್ಮೆ ಮುದ್ರಣ ಪ್ರಾರಂಭಿಸಿತು.


ಇದನ್ನೂ ಓದಿ: Rahul Gandhi: ರಾಹುಲ್​ ಗಾಂಧಿಗೆ ಕಂಟಕವಾಯ್ತು KGF 2 ಸಾಂಗ್; ರಾಗಾ ವಿರುದ್ಧ ಬಿತ್ತು ಫೋರ್ಜರಿ ಕೇಸ್!


ನೆಹರೂ ಅಧಿಕಾರದಲ್ಲಿದ್ದಾಗ ಭಾರೀ ಮೊತ್ತದ ದೇಣಿಗೆ


ನೆಹರೂ ಪ್ರಧಾನಿಯಾಗಿದ್ದಾಗ ಎಜಿಎಲ್ ಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದುಬರುತ್ತಿತ್ತು. ಪ್ರಧಾನಿಯ ಅಧಿಕಾರ ಬಳಸಿಕೊಂಡು ದೇಶದ ವಿವಿದೆಡೆ ಭೂಮಿಯನ್ನೂ ಮಂಜೂರು ಮಾಡಿದ್ದರು.  ಎಜಿಎಲ್ ಆರ್ಥಿಕ ಸಂಕಷ್ಟದಲ್ಲಿದ್ದರೂ, ಈ ಕಂಪನಿ ಹೊಂದಿದ್ದ ಆಸ್ತಿಯ ಮೌಲ್ಯ  ಅಂದಾಜು 2 ರಿಂದ 5 ಸಾವಿರ ಕೋಟಿ ಎಂದು ಹೇಳಲಾಗಿದೆ.


ಯಂಗ್ ಇಂಡಿಯಾ ಸಂಸ್ಥೆ ಅಂದರೆ ಯಾವುದು?


ಯಂಗ್ ಇಂಡಿಯಾವನ್ನು 2010 ರಲ್ಲಿ ಸ್ಥಾಪಿಸಲಾಯಿತು, ಅದರ ನಿರ್ದೇಶಕ ರಾಹುಲ್ ಗಾಂಧಿ. ಸೋನಿಯಾ ಮತ್ತು ರಾಹುಲ್ ಇಬ್ಬರೂ ಕಂಪನಿಯಲ್ಲಿ 76 ಪ್ರತಿಶತದಷ್ಟು ಷೇರುಗಳನ್ನು ಹೊಂದಿದ್ದರೆ, ಉಳಿದ 24 ಪ್ರತಿಶತವನ್ನು ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಹೊಂದಿದ್ದಾರೆ. 2011ರಲ್ಲಿ ಯಂಗ್ ಇಂಡಿಯಾ ತನ್ನ ಆಡಳಿತ ಮಂಡಳಿಯಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ಸೇರಿಸಿಕೊಂಡು ಹೊಂದಿದ್ದು, 5,000 ಕೋಟಿ ಮೌಲ್ಯದ ಎಲ್ಲಾ ಷೇರುಗಳು ಮತ್ತು ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿತು.


ಇದನ್ನೂ ಓದಿ: Minister Sudhakar: ತುರ್ತು ಚಿಕಿತ್ಸೆಗೆ ಯಾವ ದಾಖಲೆಯೂ ಮುಖ್ಯವಲ್ಲ, ಅಮಾನವೀಯವಾಗಿ ನಡೆದುಕೊಂಡ್ರೆ ವಜಾ- ಸುಧಾಕರ್


ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮುಖ್ಯ ಆರೋಪವೇನು?


ಸಾಲದ ಸುಳಿಗೆ ಸಿಲುಕಿದ್ದ ಎಜೆಎಲ್ ಅನ್ನು 90.21 ಕೋಟಿ ರೂ.ಗೆ ಈ ಹೊಸ ಕಂಪನಿ ಖರೀದಿಸುತ್ತದೆ. ಇದೇ ವೇಳೆ, ವೈಐಎಲ್‌ಗೆ 50 ಲಕ್ಷ ರೂ. ಅನ್ನು ಕಾಂಗ್ರೆಸ್ ಖಜಾನೆಯಿಂದ ವರ್ಗಾವಣೆ ಮಾಡಲಾಗಿರುತ್ತದೆ. ದೆಹಲಿಯ 5ಎ ಬಹುದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್ ನವೀಕರಣಕ್ಕೆ ಒಂದು ಕೋಟಿ ರೂ. ಸಾಲವನ್ನು ವೈಐಎಲ್ ನೀಡುತ್ತದೆ. ಎಜೆಎಲ್ ಹೊಂದಿದ ಅನೇಕ ಆಸ್ತಿಗಳ ಪೈಕಿ ಹೆರಾಲ್ಡ್ ಹೌಸ್ ಕೂಡ ಒಂದು. ಎಜೆಎಲ್‌ನ ಒಟ್ಟು ಆಸ್ತಿಗಳ ಮೌಲ್ಯ ಅಂದಾಜು 1600 ಕೋಟಿ ರೂ.ನಿಂದ 5,000 ಕೋಟಿ ರೂ.ವರೆಗೂ ಇದೆ. ಎಜೆಎಲ್ ಮತ್ತು ಯಂಗ್ ಇಂಡಿಯಾ ಲಿ. ನಡುವೆ ನಡೆದ ವ್ಯವಹಾರ ಕಾನೂನುಗಳನ್ನು ಮೀರಿದೆ, ಅಕ್ರಮ ನಡೆದಿದೆ ಎಂಬುದು ಮುಖ್ಯ ಆರೋಪ.

Published by:ಪಾವನ ಎಚ್ ಎಸ್
First published: