ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಮತ್ತೊಂದು ಇಡಿ ನೋಟೀಸ್?

ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಎರಡನೇ ಬಾರಿ ಇಡಿ ನೋಟೀಸ್ ನೀಡಿದೆ ಎನ್ನಲಾಗಿದೆ.

news18-kannada
Updated:September 17, 2019, 5:43 PM IST
ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಮತ್ತೊಂದು ಇಡಿ ನೋಟೀಸ್?
ಲಕ್ಷ್ಮೀ ಹೆಬ್ಬಾಳ್ಕರ್​.
  • Share this:
ಬೆಂಗಳೂರು(ಸೆ. 17): ಇಡಿ ಗಾಳಕ್ಕೆ ಡಿಕೆ ಶಿವಕುಮಾರ್ ಸಿಕ್ಕಿರುವ ಹೊತ್ತಿನಲ್ಲೇ ಈಗ ಅವರ ಆಪ್ತರಾಗಿರುವ ಮತ್ತೊಬ್ಬ ಶಾಸಕರಿಗೆ ಇಡಿ ಸಂಕಷ್ಟ ಎದುರಾಗಿದೆ. ಬೆಳಗಾವಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ಕಳುಹಿಸಿದೆ ಎಂದು ನ್ಯೂಸ್18 ಕನ್ನಡಕ್ಕೆ ಮೂಲಗಳು ತಿಳಿಸಿವೆ.

ಡಿಕೆಶಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಹಿಂದೆಯೂ ಇಡಿ ನೋಟೀಸ್ ನೀಡಿತ್ತು. ಆದರೆ, ಅದಕ್ಕೆ ಬೆಳಗಾವಿ ಶಾಸಕಿ ಸ್ಪಂದಿಸಿರಲಿಲ್ಲ. ಈಗ ವಿಚಾರಣೆಗೆ ಹಾಜರಾಗುವಂತೆ ಮತ್ತೊಮ್ಮೆ ಇಡಿ ನೋಟೀಸ್ ಕಳುಹಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎಲ್ಲಾ ವಿಧಿಲಿಖಿತ; ಮತದಾರ ಕೈಬಿಟ್ಟರೂ ಪಕ್ಷ ಕೈಹಿಡಿಯಿತು – ಡಿಸಿಎಂ ಸ್ಥಾನ ಸಿಕ್ಕಿದ್ದರ ಬಗ್ಗೆ ಲಕ್ಷ್ಮಣ ಸವದಿ ಪ್ರತಿಕ್ರಿಯೆ

ಇದೇ ವೇಳೆ, ದೆಹಲಿಯ ವಿಶೇಷ ನ್ಯಾಯಾಲಯವು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ನಾಳೆಯವರೆಗೂ ಡಿಕೆಶಿ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ. ಇವತ್ತಿನ ವಿಚಾರಣೆಯಲ್ಲಿ ಮುಕುಲ್ ರೋಹ್ಟಗಿ ಅವರೂ ಕೂಡ ಡಿಕೆಶಿ ಪರ ವಾದ ಮಂಡನೆ ಮಾಡಿದ್ದು ವಿಶೇಷ.

(ವರದಿ: ಧರಣೀಶ್ ಬೂಕನಕೆರೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ