National Herald Scam: 2 ಗಂಟೆಗಳ ಕಾಲ ED ಅಧಿಕಾರಿಗಳಿಂದ ‘ಕೈ‘​ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ

ನಷ್ಟದಲ್ಲಿದ್ದ ಅಸೋಸಿಯೇಟ್ ಜನರಲ್ಸ್ ಲಿಮಿಟೆಡ್ ಅನ್ನು ಯಂಗ್ ಇಂಡಿಯಾ ಲಿಮಿಟೆಡ್ 9.21 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರಲ್ಲಿ ಅಕ್ರಮ ನಡೆದಿದೆ ಎಂಬ ದೂರು ಆಧರಿಸಿ ಇಡಿ ತನಿಖೆ ನಡೆಸುತ್ತಿದೆ.

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

  • Share this:
ನವದೆಹಲಿ, ಏ. 11: ನ್ಯಾಷನಲ್ ಹೆರಾಲ್ಡ್ (National Herald) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Senior Congress leader Mallikarjuna Kharge) ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (Enforcement Directorate Officers) ಸೋಮವಾರ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕಿದ್ದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುತ್ಸದಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆಗೆ ಕರೆದಿರುವುದು ಅಚ್ಚರಿ ಮೂಡಿಸಿದೆ‌.

ಹಿನ್ನೆಲೆ ಏನು?

ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ಆಪ್ತ ಬಳಗದಲ್ಲಿರುವ ಮುಖಂಡ ಹಾಗೂ ಯಂಗ್ ಇಂಡಿಯಾ ಲಿಮಿಟೆಡ್‌ ಟ್ರಸ್ಟಿ. ಯಂಗ್ ಇಂಡಿಯ ಲಿಮಿಟೆಡ್ 2011ರಲ್ಲಿ ಸ್ಥಾಪಿತವಾದ ಸಂಸ್ಥೆ. ನಂತರ ಯಂಗ್ ಇಂಡಿಯಾ ಲಿಮಿಟೆಡ್ ನಷ್ಟದಲ್ಲಿದ್ದ ಅಸೋಸಿಯೇಟ್ ಜನರಲ್ಸ್ ಲಿಮಿಟೆಡ್ ಅನ್ನು 9.21 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.  ಅಸೋಸಿಯೇಟ್ ಜನರಲ್ಸ್ ಲಿಮಿಟೆಡ್ ಪ್ರಕಟ ಮಾಡುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೂ ಹಣ ವರ್ಗವಾಗಿತ್ತು. ನ್ಯಾಷನಲ್ ಹೆರಾಲ್ಡ್ ಹೌಸ್ ನವೀಕರಣಕ್ಕೆ 1 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇದರಲ್ಲಿ ಅಕ್ರಮವಾಗಿದೆ ಎಂದು ಹೇಳಲಾಗುತ್ತಿದೆ.

ನಿಂತು ನಡೆಯುತ್ತಿರುವ ತನಿಖೆ

ನಷ್ಟದಲ್ಲಿದ್ದ ಅಸೋಸಿಯೇಟ್ ಜನರಲ್ಸ್ ಲಿಮಿಟೆಡ್ ಅನ್ನು ಯಂಗ್ ಇಂಡಿಯಾ ಲಿಮಿಟೆಡ್ 9.21 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ದೂರು ಆಧರಿಸಿ ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2015ರ ಆಗಸ್ಟ್‌ 18ರಂದು ತಾಂತ್ರಿಕ ಕಾರಣಗಳಿಂದ ತನಿಖೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ 2015ರ ಸೆಪ್ಟೆಂಬರ್ 18ರಂದು ಮತ್ತೆ ತನಿಖೆ ಆರಂಭಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Karnataka Politics: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ? 2023ರಲ್ಲಿ ಚುನಾವಣಾ ಅಖಾಡಕ್ಕಿಳೀತಾರಾ ಅಂಬಿ ಪುತ್ರ ಅಭಿಷೇಕ್!?

2 ಗಂಟೆಗೂ ಹೆಚ್ಚು ಕಾಲ ಖರ್ಗೆ ವಿಚಾರಣೆ

ಈಗ ತನಿಖೆಯ ಮುಂದುವರೆದ ಭಾಗವಾಗಿ ಸೋಮವಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಚಾರಣೆಗೆ ಬರುವಂತೆ ಹೇಳಲಾಗಿತ್ತು. ಸದ್ಯ ಯಂಗ್ ಇಂಡಿಯಾ ಲಿಮಿಟೆಡ್ ಟ್ರಸ್ಟಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸುಮಾರು ಎರಡು ಗಂಟೆಯಿಂದ ದೆಹಲಿಯ ಪ್ರವರ್ತನ್ ಭವನದಲ್ಲಿ ಇರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ‌.

ಭೂಪೇಂದ್ರ ಹೂಡ ವಿಚಾರಣೆ ನಡೆಸಿದ ಇಡಿ

ಕಳೆದ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿ, ಈ ಪ್ರಕರಣದಲ್ಲಿ ಹರಿಯಾಣದಲ್ಲಿ ಇಡಿ 64 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಹರಿಯಾಣದ ಪಂಚಕುಲದಲ್ಲಿನ ಪ್ಲಾಟ್ ಅನ್ನು ಆಗಿನ ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಗೆ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ನಾವು ಪಾಕಿಸ್ತಾನದ ಮುಸ್ಲಿಮರಲ್ಲ, ಭಾರತದ ಮುಸ್ಲಿಮರು: Zameer Ahmed Khan

ಇಡಿ ಪ್ರಕಾರ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರು ತಮ್ಮ ಅಧಿಕೃತ ಸ್ಥಾನವನ್ನು ಸ್ಪಷ್ಟವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಅಪ್ರಾಮಾಣಿಕವಾಗಿ ಎಜೆಎಲ್‌ಗೆ ಮರು-ಹಂಚಿಕೆಯ ನೆಪದಲ್ಲಿ ಮೂಲ ದರಗಳು ಮತ್ತು ಅಗತ್ಯ ಷರತ್ತುಗಳು ಮತ್ತು ಹುಡಾ ನೀತಿಯ ಉಲ್ಲಂಘನೆಯ ಬಡ್ಡಿಯೊಂದಿಗೆ ಹೊಸದಾಗಿ ಹೇಳಿದ ಪ್ಲಾಟ್ ಅನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Published by:Pavana HS
First published: