ವಿದೇಶದಲ್ಲಿ ಬೇನಾಮಿ ಹಣ ಹೂಡಿಕೆ ಕೇಸ್​​: ಡಿಕೆಶಿ ಬೆನ್ನಲ್ಲೀಗ ಜಾರ್ಜ್​​​ಗೆ ವಿರುದ್ಧ ಇಡಿ ತನಿಖೆ ಶುರು?

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೀಡಿದ್ದ ದೂರಿನ ಅನ್ವಯ ಜಾರ್ಜ್​​ ವಿರುದ್ಧ ಇಡಿ ತನಿಖೆಗೆ ಮುಂದಾಗಿದೆ. ಡಿಕೆಶಿ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕೇಸ್​​ ರೀತಿಯಲ್ಲೇ ಜಾರ್ಜ್​​ ಪ್ರಕರಣವೂ ತನಿಖೆ ನಡೆಯುತ್ತಿದೆ.

news18-kannada
Updated:November 12, 2019, 5:59 PM IST
ವಿದೇಶದಲ್ಲಿ ಬೇನಾಮಿ ಹಣ ಹೂಡಿಕೆ ಕೇಸ್​​: ಡಿಕೆಶಿ ಬೆನ್ನಲ್ಲೀಗ ಜಾರ್ಜ್​​​ಗೆ ವಿರುದ್ಧ ಇಡಿ ತನಿಖೆ ಶುರು?
ಕೆಜೆ ಜಾರ್ಜ್​
  • Share this:
ಬೆಂಗಳೂರು(ನ.12): ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಬೆನ್ನಲ್ಲೀಗ ಕಾಂಗ್ರೆಸ್​ನ ಪ್ರಮುಖ ನಾಯಕ ಕೆ.ಜೆ ಜಾರ್ಜ್​​​​ಗೆ ಇ.ಡಿ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೀಡಿದ್ದ ದೂರಿನ ಆಧಾರದ ಮೇರೆಗೆ ಮಾಜಿ ಸಚಿವ ಕೆ.ಜೆ ಜಾರ್ಜ್​​​​ ವಿರುದ್ಧ ಜಾರೀ ನಿರ್ದೇಶನಾಲಯ ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಕೆ.ಜೆ ಜಾರ್ಜ್​​ ವಿರುದ್ಧ ದೂರು ನೀಡಿದ್ದರು. ಮಾಜಿ ಸಚಿವ ಕೆ.ಜೆ ಜಾರ್ಜ್​​​ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ತಮ್ಮ ಸಂಬಂಧಿಕರ ಹೆಸರಿನಲ್ಲಿ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಜಾರ್ಜ್​​ ಬೇನಾಮಿ ಆಸ್ತಿ ಹೊಂದಿದ್ದಾರೆ. ಆದರೆ, ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ತಮ್ಮ ಬೇನಾಮಿ ಆಸ್ತಿ ಮತ್ತು ವಿದೇಶಿ ಹೂಡಿಕೆ ಬಗ್ಗೆ ಜಾರ್ಜ್​​ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಅಗತ್ಯ ದಾಖಲೆಗಳನ್ನೂ ಕೂಡ ಇಡಿಗೆ ಸಲ್ಲಿಸಿದ್ದಾರೆ.

ಜಾರ್ಜ್​​​​ ವಿರುದ್ಧ ಕೂಡಲೇ ತನಿಖೆ ಆರಂಭಿಸಬೇಕು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರಡಿ ಕಠಿಣ ಕ್ರಮ ಕೈಗೊಳ್ಳಬೇಕು. ದೂರು ನೀಡಿ ಎರಡು ತಿಂಗಳಾದರೂ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಂದಿನಿಂದಲೇ ಇಡಿ ಜಾರ್ಜ್​​ ವಿರುದ್ಧ ತನಿಖೆಗೆ ಮುಂದಾಗಬೇಕು ಎಂದು ರವಿಕೃಷ್ಣಾ ರೆಡ್ಡಿ ಇಡಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಅಧಿಕೃತ ಆದೇಶ: ರಾಷ್ಟ್ರಪತಿ ಅಂಕಿತ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೀಡಿದ್ದ ದೂರಿನ ಅನ್ವಯ ಜಾರ್ಜ್​​ ವಿರುದ್ಧ ಇಡಿ ತನಿಖೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ಡಿಕೆಶಿ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕೇಸ್​​ ರೀತಿಯಲ್ಲೇ ಜಾರ್ಜ್​​ ಪ್ರಕರಣವೂ ತನಿಖೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತಾಯಿಗೆ ವರ ಹುಡುಕಲು ಮುಂದಾದ ಮಗಳು: ವೈರಲ್​​ ಆಯ್ತು ಟ್ವೀಟ್​​

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಜಾರ್ಜ್ ಹೊಂದಿರುವ ಆಸ್ತಿಯ ಅಧಿಕೃತ ಮಾಹಿತಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜಾರ್ಜ್​​ ಇಲ್ಲಿಯವರೆಗೆ ಲೋಕಾಯುಕ್ತದಲ್ಲಿ ಘೋಷಿಸಿಕೊಂಡಿರುವ ಆಸ್ತಿಯ ವಿವರ ಆಧಾರದ ಮೇಲೆ ತನಿಖೆಗೆ ಮುಂದಾಗಿದ್ಧಾರೆ ಎಂದು ತಿಳಿದು ಬಂದಿದೆ.-----------
First published: November 12, 2019, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading