ಜ. 13ಕ್ಕೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್

ಹೈಕೋರ್ಟ್​ನಿಂದ ಅರ್ಜಿ ವಜಾಗೊಂಡ ಹಿನ್ನೆಲೆ ಈ ಆದೇಶ ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದು,  120 ಬಿ ಸೆಕ್ಷನ್​ ಕೈ ಬಿಡುವಂತೆ ಬಿಡುವಂತೆ ಅರ್ಜಿ ದಾಖಲಿಸಿದ್ದಾರೆ.

news18-kannada
Updated:January 6, 2020, 6:28 PM IST
ಜ. 13ಕ್ಕೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್
ಡಿಕೆ ಶಿವಕುಮಾರ್​
  • Share this:
ನವದೆಹಲಿ(ಜ. 6): ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಪಕ್ಷದ ನಾಯಕರ ಓಲೈಕೆಗೆ ಮುಂದಾಗಿರುವ ಕನಕಪುರ ಶಾಸಕ ಡಿಕೆ ಶಿವಕುಮಾರ್​ ಅವರಿಗೆ ಮತ್ತೆ ಹೊಸದಾಗಿ ಇಡಿ ಅಧಿಕಾರಿಗಳು ಸಮನ್ಸ್​ ಜಾರಿ ಮಾಡಿದ್ದು, ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. 

2013 ರಿಂದ 14ರ ವರೆಗಿನ ತಮ್ಮ ವ್ಯವಹಾರದ ಬಗ್ಗೆ ಹೆಚ್ಚಿನ ಮಾಹಿತಿ ಅವಶ್ಯಕವಾಗಿದ್ದು.  ಇದೇ ಜ. 13ರಂದು  ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದ್ದಾರೆ. ಇನ್ನು ಸಮನ್ಸ್ ಜಾರಿಯಾದ ಬೆನ್ನಲ್ಲೇ ಡಿಕೆ ಶಿವಕುಮಾರ್​ ದೆಹಲಿಗೆ ತೆರಳಿದ್ದು, ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಅವರನ್ನು ಭೇಟಿಯಾಗಿದ್ದು, ಈ ಕುರಿತು ಚರ್ಚೆ ನಡೆಸಿದ್ದಾರೆ.

ಇನ್ನು ಜಾರಿ ನಿರ್ದೇಶನಾಲಯ ಜಾರಿ  ಮಾಡಿದ್ದ ಈ ಸಮನ್ಸ್​ ಅನ್ನು ರದ್ದು ಮಾಡುವಂತೆ  ಜ. 2ರಂದು ಡಿಕೆ ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ಉಚ್ಚ ನ್ಯಾಯಾಲಯ ವಜಾಗೊಳಿಸಿತು.

ಹೈಕೋರ್ಟ್​ನಿಂದ ಅರ್ಜಿ ವಜಾಗೊಂಡ ಹಿನ್ನೆಲೆ ಈ ಆದೇಶ ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದು,  120 ಬಿ ಸೆಕ್ಷನ್​ ಕೈ ಬಿಡುವಂತೆ ಬಿಡುವಂತೆ ಅರ್ಜಿ ದಾಖಲಿಸಿದ್ದಾರೆ.

ಇದನ್ನು ಓದಿ: ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ಅಂತರಾಷ್ಟ್ರೀಯ ಅಕ್ರಮ ಹಣ ಹಂಚಿಕೆ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್​ 3ರಂದು ಡಿಕೆ ಶಿವಕುಮಾರ್​ ಅವರನ್ನು ಇಡಿ ವಶಕ್ಕೆ ಪಡೆದು ಬಂಧಿಸಿತು. ಬಂಧನಕ್ಕೆ ಒಳಗಾದ ಮಾಜಿ ಸಚಿವರು ತಿಹಾರ್​ ಜೈಲಿನಲ್ಲಿ ಸುಮಾರು 50 ದಿನಗಳ ಸೆರೆವಾಸ ಅನುಭವಿಸಿದ್ದರು. ಬಳಿಕ, ದೆಹಲಿ ಹೈ ಕೋರ್ಟ್​ ಅವರಿಗೆ ಜಾಮೀನು ನೀಡಿತು.
Published by: Seema R
First published: January 6, 2020, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading