ಡಿಕೆಶಿ ಮಗಳು ಐಶ್ವರ್ಯಾಗೂ ಕಾಡಿದ ಇ.ಡಿ. ಸಂಕಷ್ಟ; ವಿಚಾರಣೆಗೆ ಬರುವಂತೆ ಸಮನ್ಸ್​ ನೀಡಿದ ಅಧಿಕಾರಿಗಳು

ಡಿಕೆಶಿ ಉದ್ಯಮದ ಪಾಲುದಾರರಾದ ಸುನೀಲ್​ ಕುಮಾರ್ ಶರ್ಮಾ, ದೆಹಲಿಯ ಆಪ್ತ ಸಹಾಯಕ ಆಂಜನೇಯ ಹಾಗೂ ಸಚಿನ್​ ನಾರಾಯಣ್​ ಅವರನ್ನು ಇ.ಡಿ. ಅಧಿಕಾರಿಗಳು ದೆಹಲಿಯಲ್ಲಿ ಇಂದು ಏಕಕಾಲದಲ್ಲಿ ವಿಚಾರಣೆ ನಡೆಸಿದ್ದಾರೆ.

HR Ramesh | news18-kannada
Updated:September 10, 2019, 4:14 PM IST
ಡಿಕೆಶಿ ಮಗಳು ಐಶ್ವರ್ಯಾಗೂ ಕಾಡಿದ ಇ.ಡಿ. ಸಂಕಷ್ಟ; ವಿಚಾರಣೆಗೆ ಬರುವಂತೆ ಸಮನ್ಸ್​ ನೀಡಿದ ಅಧಿಕಾರಿಗಳು
ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ
  • Share this:
ಬೆಂಗಳೂರು: ಹಣ ಪತ್ತೆ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಏಳು ದಿನಗಳಿಂದ ಇ.ಡಿ. ವಶದಲ್ಲಿರುವ ಡಿಕೆಶಿ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಡಿಕೆಶಿ ಮಗಳಿಗೂ ಇ.ಡಿ. ಸಂಕಷ್ಟ ತಟ್ಟಿದೆ.

ಸೆ.12ರಂದು ವಿಚಾರಣೆಗೆ ಬರುವಂತೆ ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರಿಗೆ ಇ.ಡಿ. ಅಧಿಕಾರಿಗಳು ಇಂದು ಸಮನ್ಸ್​ ನೀಡಿದ್ದಾರೆ. ಇಂದು ಮಧ್ಯಾಹ್ನ ಸದಾಶಿವನಗರದಲ್ಲಿರುವ ಡಿಕೆಶಿ ಮನಗೆ ತೆರಳಿದ ಅಧಿಕಾರಿಗಳು ಮಗಳು ಐಶ್ವರ್ಯಾ ಅವರಿಗೆ ಸಮನ್ಸ್​ ನೀಡಿ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ಡಿಕೆಶಿ ಪಿಎ ಆಂಜನೇಯ ವಿಚಾರಣೆ

ಡಿಕೆಶಿ ಉದ್ಯಮದ ಪಾಲುದಾರರಾದ ಸುನೀಲ್​ ಕುಮಾರ್ ಶರ್ಮಾ, ದೆಹಲಿಯ ಆಪ್ತ ಸಹಾಯಕ ಆಂಜನೇಯ ಹಾಗೂ ಸಚಿನ್​ ನಾರಾಯಣ್​ ಅವರನ್ನು ಇ.ಡಿ. ಅಧಿಕಾರಿಗಳು ದೆಹಲಿಯಲ್ಲಿ ಇಂದು ಏಕಕಾಲದಲ್ಲಿ ವಿಚಾರಣೆ ನಡೆಸಿದ್ದಾರೆ.

ದೆಹಲಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಮೊದಲಿಗೆ ಈ ಹಣ ಡಿಕೆಶಿಯದ್ದು ಎಂದು ಆಂಜನೇಯ ಹೇಳಿಕೆ ನೀಡಿದ್ದರು. ಆದರೆ, ಆ ಹಣ ತನ್ನದ್ದಲ್ಲ ಎಂದು ಡಿ.ಕೆ‌. ಶಿವಕುಮಾರ್ ಹೇಳಿದ್ದರು. ಈ ನಡುವೆ ಹಣ ತನ್ನದು ಎಂದು ಪಾಲುದಾರ ಸುನೀಲ್ ಕುಮಾರ್ ಶರ್ಮಾ ಹೇಳಿದ್ದರು. ಆಂಜನೇಯ ಹೇಳಿಕೆಯಿಂದ ಅನುಮಾನ ಉಂಟಾಗಿದೆ. ಈಗ ಶರ್ಮಾ, ಆಂಜನೇಯ ಹೇಳಿಕೆ ಆಧರಿಸಿ ಡಿಕೆಶಿ ಭವಿಷ್ಯ ನಿರ್ಧಾರವಾಗಲಿದೆ. ಈ ಹೇಳಿಕೆಗಳನ್ನು ಆಧರಿಸಿ ಇ.ಡಿ. ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯೂಸ್ 18ಕನ್ನಡಕ್ಕೆ ಇಡಿ ಮೂಲಗಳು ಮಾಹಿತಿ ನೀಡಿದೆ.

ಇದನ್ನು ಓದಿ: ಸದ್ಯಕ್ಕಿಲ್ಲ ಡಿಕೆ ಶಿವಕುಮಾರ್​ ಬಿಡುಗಡೆ; ಮತ್ತೆ 4 ದಿನ ಇಡಿ ವಶಕ್ಕೆ?

ಡಿಕೆಶಿ ಬೇನಾಮಿ ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಸಚಿನ್ ನಾರಾಯಣ್ ಎಂಬುವವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಶಾಲಕ್ಷಿ ದೇವಿ ಆಸ್ತಿ ಮೇಲೆ ಡಿಕೆಶಿ ಹೂಡಿಕೆ ಮಾಡಿದ್ದಾರೆಂಬ ಶಂಕೆ ಮೇಲೆ ವಿಚಾರಣೆ ನಡೆಸಲಾಗಿದೆ.
First published: September 10, 2019, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading