ಡಿಕೆಶಿಗೆ ಮತ್ತೆ ಸಮನ್ಸ್​ ನೀಡಿದ ಇ.ಡಿ; ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸುತ್ತೇನೆ ಎಂದ ಟ್ರಬಲ್​ ಶೂಟರ್

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾಳೆ ಸಿಗೋಣ, ಮಾತನಾಡೋಣ.  ಎಲ್ಲರೂ ಚೆನ್ನಾಗಿ ವ್ಯಾಖ್ಯಾನ ಮಾಡ್ತಿದ್ದೀರಾ ಮಾಡಿ. ನಾಳೆ ಎಲ್ಲವನ್ನೂ ಹೇಳ್ತೀನಿ ಎಂದಷ್ಟೇ ಹೇಳಿದರು.

HR Ramesh | news18-kannada
Updated:August 30, 2019, 7:47 AM IST
ಡಿಕೆಶಿಗೆ ಮತ್ತೆ ಸಮನ್ಸ್​ ನೀಡಿದ ಇ.ಡಿ; ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸುತ್ತೇನೆ ಎಂದ ಟ್ರಬಲ್​ ಶೂಟರ್
ಡಿ.ಕೆ.ಶಿವಕುಮಾರ್
  • Share this:
ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಇ.ಡಿ. ನೀಡಿದ್ದ ಸಮನ್ಸ್​ ರದ್ದು ಮಾಡುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್​ ವಜಾಗೊಳಿಸಿತ್ತು. ಕೋರ್ಟ್​ ಆದೇಶದ ಬಳಿಕ ರಹಸ್ಯ ಸ್ಥಳಕ್ಕೆ ತೆರಳಿದ್ದ ಡಿಕೆಶಿ ರಾತ್ರಿ ಮನೆಗ ವಾಪಸ್ಸಾಗುತ್ತಿದ್ದಂತೆ ಅವರ ಮನೆಗೆ ತೆರಳಿದ ಇ.ಡಿ. ಅಧಿಕಾರಿಗಳಿಗೆ ಡಿಕೆಶಿ ಮತ್ತೊಮ್ಮೆ ಸಮನ್ಸ್​ ನೀಡಿ ತೆರಳಿದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾಳೆ ಸಿಗೋಣ, ಮಾತನಾಡೋಣ.  ಎಲ್ಲರೂ ಚೆನ್ನಾಗಿ ವ್ಯಾಖ್ಯಾನ ಮಾಡ್ತಿದ್ದೀರಾ ಮಾಡಿ. ನಾಳೆ ಎಲ್ಲವನ್ನೂ ಹೇಳ್ತೀನಿ ಎಂದಷ್ಟೇ ಹೇಳಿದರು.

ಇದನ್ನು ಓದಿ: ಡಿಕೆಶಿಗೆ ಮತ್ತೆ ಸಂಕಷ್ಟ; ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಇ.ಡಿ. ತನಿಖೆಗಿಲ್ಲ ತಡೆ

ಹೈಕೋರ್ಟ್​ನಿಂದ ಅರ್ಜಿ ವಜಾಗೊಂಡ ಬಳಿಕ ಚುರುಕಾದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಡಿಕೆ ಶಿವಕುಮಾರ್​ ಅವರಿಗಾಗಿ ಕಾದು ಕುಳಿತು, ಅವರು ಮನೆಗ ಬಂದ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದರು. ನಾಲ್ಕು ಮಂದಿ ಅಧಿಕಾರಿಗಳ ತಂಡ  ಡಿಕೆಶಿ ಆಗಮನಕ್ಕಾಗಿ ಮನೆ ಬಳಿಯೇ ಕಾದು ಕುಳಿತಿತ್ತು. ಅವರ ಮನೆಗೆ ಬಂದಾಕ್ಷಣ ಸಮನ್ಸ್​ ನೀಡಿದೆ.

First published: August 29, 2019, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading