• Home
  • »
  • News
  • »
  • state
  • »
  • Mantri Group ನಿರ್ದೇಶಕ ಸುಶೀಲ್ ಪಾಂಡುರಂಗ ಅರೆಸ್ಟ್; ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಆರೋಪ

Mantri Group ನಿರ್ದೇಶಕ ಸುಶೀಲ್ ಪಾಂಡುರಂಗ ಅರೆಸ್ಟ್; ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಆರೋಪ

ಸುಶೀಲ್ ಪಾಂಡುರಂಗ ಮಂತ್ರಿ

ಸುಶೀಲ್ ಪಾಂಡುರಂಗ ಮಂತ್ರಿ

ವಿವಿಧ ಹಣಕಾಸಿನ ಸಂಸ್ಥೆಗಳಿಂದ ಸುಶೀಲ್ ಪಾಂಡುರಂಗ, 5 ಸಾವಿರ ಕೋಟಿ ರೂ ಸಾಲ ಪಡೆದುಕೊಂಡಿದ್ದಾರೆ. ಇದರಲ್ಲಿ ಒಂದು ಸಾವಿರ ಕೋಟಿ ರೂ  ಸಾಲ ಪಾವತಿಯಾಗದ ಸಾಲ ಎಂದು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.

  • Share this:

ರಿಯಲ್ ಎಸ್ಟೇಟ್ ಕಂಪನಿ ಮಂತ್ರಿ ಡೆವಲಪರ್ಸ್ (Manrtri Developers)​ ನಿರ್ದೇಶಕ ಸುಶೀಲ್ ಪಾಂಡುರಂಗ ಮಂತ್ರಿ (Susheel Panduranga Mantri) ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು (Enforcement Directorate) ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸುಶೀಲ್ ಪಾಂಡುರಂಗ ಅವರ ಮೇಲೆ ಅಕ್ರಮ ಹಣ ವರ್ಗಾವಣೆ (Money Laundering) ಮತ್ತು ತೆರಿಗೆ ವಂಚನೆಯ (Tax Cheating) ಆರೋಪಗಳಿವೆ. ಸುಶೀಲ್ ಪಾಂಡುರಂಗ ಸಾವಿರಾರು ಜನರ ಬಳಿ ಹಣ  ಪಡೆದು ಫ್ಲ್ಯಾಟ್ (Flats) ನೀಡಿಲ್ಲ. ಕಳೆದ 10 ವರ್ಷಗಳಿಂದ ಹಣ ಪಡೆದುಕೊಂಡರೂ ಫ್ಲ್ಯಾಟ್ ನೀಡಿಲ್ಲ. ಈ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ (Money Transfer) ಮಾಡಿಕೊಂಡಿರುವ ಆರೋಪಗಳು ಸಹ ಸುಶೀಲ್ ಪಾಂಡುರಂಗ ಅವರ ಮೇಲಿದೆ. ವಂಚನೆಗೊಳಗಾದ ಜನರು ಈ ಸಂಬಂಧ 2020ರಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗಿತ್ತು.


ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಸುಶೀಲ್ ಪಾಂಡುರಂಗ ಅಧಿಕಾರಿಗಳ ಪ್ರಶ್ನೆಗೆ ಸಮಂಜಸ ಉತ್ತರಗಳನ್ನು ನೀಡಿರಲಿಲ್ಲ. ಶನಿವಾರ ಮತ್ತೆ ವಿಚಾರಣೆಗೆ ಕರೆದರೂ ಸುಶೀಲ್ ಪಾಂಡುರಂಗ್ ವಿಚಾರಣೆ ಸಹಕಾರ ನೀಡದ ಹಿನ್ನೆಲೆ ಬಂಧಿಸಲಾಗಿದೆ.


5 ಸಾವಿರ ಕೋಟಿಗೂ ಅಧಿಕ ಸಾಲ, ನಗದು ವ್ಯವಹಾರ


RERA (ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಅಥಾರಿಟಿ) ಯಿಂದ ನಿರ್ದೇಶನ ಬಂದಿದ್ರೂ ಸುಶೀಲ್ ಹಣ ಹಿಂದಿರುಗಿಸದೇ ನಿರ್ಲಕ್ಷ್ಯ ಮಾಡಿದ್ರು. ಜೊತೆಗೆ ಅದೇ ಪ್ರಾಜೆಕ್ಟ್ ಹೆಸರಲ್ಲಿ 5 ಸಾವಿರ ಕೋಟಿ ಸಾಲವನ್ನು ಈ ಕಂಪನಿ ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಸುಶೀಲ್ ಪಾಂಡುರಂಗ್ ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿರೋದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಬಹುತೇಕ ವ್ಯವಹಾರ ನಗದು ರೂಪದಲ್ಲಿ ನಡೆದಿರೋದು ತಿಳಿದು ಬಂದಿದೆ.


ಇದನ್ನೂ ಓದಿ:  Sister Kidnap: ತವರು ಮನೆಗೆ ಹೋದವಳು ನಾಪತ್ತೆ, ರಿಸೆಪ್ಷನ್​ಗೂ ಮುನ್ನ ತಂಗಿಯನ್ನೇ ಕಿಡ್ನ್ಯಾಪ್ ಮಾಡಿದ್ನಾ ಸಹೋದರ?


ಈ ಹಿನ್ನೆಲೆ ಮನಿಲ್ಯಾಂಡ್ರಿಂಗ್ ಕೇಸ್ ನಲ್ಲಿ ಬಂಧನ ಮಾಡಿ ಹೆಚ್ಚಿನ ವಿಚಾರಣೆ ಮಾಡುತ್ತಿರೋದಾಗಿ ಜಾರಿ ನಿರ್ದೇಶನಾಲಯ ಅಧಿಕೃತ ಪ್ರಕಟನೆ ಹೊರಡಿಸಿದೆ.


ಯೋಜನೆಯ ಬಗ್ಗೆ ತಪ್ಪು ಮಾಹಿತಿ ನೀಡಿ ಹಣ ಪಡೆದ ಆರೋಪ


ಬಂಧಿತ ಸುಶೀಲ್ ಅಕ್ರಮವಾಗಿ ನಗದು ವ್ಯವಹಾರ ನಡೆಸಿರೋದಕ್ಕೆ ಕಲೆ ಮಹತ್ವದ ದಾಖಲೆಗಳಿ ಇಡಿಗೆ ಲಭ್ಯವಾಗಿವೆ ಎಂದು ಏಷಿಯಾ ನೆಟ್ ನ್ಯೂಸ್ ವರದಿ ಮಾಡಿದೆ. ಹಣಕಾಸು ವ್ಯವಹಾರದಲ್ಲಿ ಸಾಕಷ್ಟು ಲೋಪದೋಷಗಳು ಸಹ ಕಂಡು ಬಂದಿವೆ. ಗ್ರಾಹರಿಗೆ ದಾರಿ ತಪ್ಪಿಸುವ ಬ್ರೌಚರ್ ತೋರಿಸಿ ಯೋಜನೆಯ ಬಗ್ಗೆ ತಪ್ಪು ಮಾಹಿತಿ ನೀಡಿ ಹಣ ಪಡೆದುಕೊಂಡಿದ್ದರು. ಈ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡದೇ ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ.


ಒಂದು ಸಾವಿರ ಕೋಟಿ ಪಾವತಿಯಾಗದ ಸಾಲ


ವಿವಿಧ ಹಣಕಾಸಿನ ಸಂಸ್ಥೆಗಳಿಂದ ಸುಶೀಲ್ ಪಾಂಡುರಂಗ, 5 ಸಾವಿರ ಕೋಟಿ ರೂ ಸಾಲ ಪಡೆದುಕೊಂಡಿದ್ದಾರೆ. ಇದರಲ್ಲಿ ಒಂದು ಸಾವಿರ ಕೋಟಿ ರೂ  ಸಾಲ ಪಾವತಿಯಾಗದ ಸಾಲ ಎಂದು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ:  H D Kumaraswamy: ಅದು ಹೇಗಾದ್ರೂ ಸರಿ ಮುಂದಿನ ಬಾರಿ ನಾನೇ ಸಿಎಂ; ಭಾಷಣದುದ್ದಕ್ಕೂ ಮುಖ್ಯಮಂತ್ರಿ ಕುರ್ಚಿ ಜಪ


ನಾಡಪ್ರಭು ಕೆಂಪೇಗೌಡ ಪ್ರಶಸ್ತಿ


ನಾಡಪ್ರಭು ಕೆಂಪೇಗೌಡರ (Kempegowda) ಗೌರವಾರ್ಥ ಈ ವರ್ಷದಿಂದ ಸರ್ಕಾರ ನೀಡುವ 'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ (Kempegowda Award) ಹಿರಿಯ ರಾಜಕಾರಣಿ ಎಸ್.ಎಂ ಕೃಷ್ಣ, (S M Krishna) ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ (N. R Narayana Murti) ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ (Prakash Padukone) ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂವರನ್ನು ಆಯ್ಕೆ ಮಾಡಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಸಚಿವ ಅಶ್ವತ್ಥ ನಾರಾಯಣ ಅವರು, ಕೃಷ್ಣ ಅವರನ್ನು ಶನಿವಾರ ಅವರ ಮನೆಯಲ್ಲಿ ಭೇಟಿಯಾಗಿ, ಕೆಂಪೇಗೌಡ ಜಯಂತಿಗೆ ಬಂದು ಪ್ರಶಸ್ತಿ ಸ್ವೀಕರಿಸುವಂತೆ ಆಹ್ವಾನ ನೀಡಿದರು.

Published by:Mahmadrafik K
First published: