HOME » NEWS » State » ECO BEACH AT UTTAR KANNADA DISTRICT TO INTERNATIONAL RECOGNITION OF BLUE FLAG DKK HK

ಇಕೋ ಬೀಚ್​ನಲ್ಲಿ ಹಾರಿತು ಬ್ಲ್ಯೂ ಫ್ಲ್ಯಾಗ್ : ಇಕೋ ಬೀಚ್ ಗೆ ಸಿಕ್ಕಿತು ಅಂತರಾಷ್ಟ್ರೀಯ ಮಾನ್ಯತೆ

news18-kannada
Updated:December 29, 2020, 7:12 AM IST
ಇಕೋ ಬೀಚ್​ನಲ್ಲಿ ಹಾರಿತು ಬ್ಲ್ಯೂ ಫ್ಲ್ಯಾಗ್ : ಇಕೋ ಬೀಚ್ ಗೆ ಸಿಕ್ಕಿತು ಅಂತರಾಷ್ಟ್ರೀಯ ಮಾನ್ಯತೆ
ಇಕೋ ಬೀಚ್​
  • Share this:
ಕಾರವಾರ (ಡಿಸೆಂಬರ್​. 29): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್‌ಗೆ ಈಗ ಬ್ಲ್ಯೂ ಪ್ಲ್ಯಾಗ್ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಇವತ್ತು ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಕಡಲತೀರದಲ್ಲಿ ಬ್ಲ್ಯೂ ಪ್ಲ್ಯಾಗ್ ಅಧಿಕೃತವಾಗಿ ಹಾರಿಸಲಾಯಿತು. ಇಕೋ ಕಡಲ ತೀರದಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಮತ್ತು ಬ್ಲೂ ಪ್ಲಾಗ್ ಮಂಡಳಿಯ ರಾಷ್ಟ್ರೀಯ ಸಂಚಾಲಕ ಸುಜೀತ್ ಡೋಂಗ್ರೆ ಇದ್ದರು..ಇಕೋ ಬೀಚ್ ಈಗ ಪ್ರವಾಸಿಗರ ಸ್ವರ್ಗವಾಗಿದೆ. ಇಲ್ಲಿ ಅಳವಡಿಸಿರುವ ವಿವಿಧ ಮೂಲ ಸೌಕರ್ಯಗಳು ಪ್ರವಾಸಿಗರನ್ನ ಆಕರ್ಷಿಸುತ್ತಿದೆ . ಜತೆಗೆ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದಪಡಿಸಲಾದ ಅಲಂಕಾರಿಕ ಪರಿಕರಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದ್ದು, ಈಗ ಇಕೋ ಬೀಚ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಕರ್ನಾಟಕದ ಹೆಮ್ಮೆ ಆಗಿದೆ..

ಕಡಲತೀರದ ವಿಶೇಷತೆ ಏನು?

ವಿಶಾಲ ಕಡಲತೀರ, ಹಚ್ಚ ಹಸಿರಿನ ಸ್ವಚ್ಛ ಪರಿಸರ ಹಾಗೂ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್​​​ಗೆ ಬ್ಲ್ಯೂ ಫ್ಲಾಗ್ ಬೀಚ್ ಎಂಬ ಅಂತಾರಾಷ್ಟ್ರೀಯ ಮಾನ್ಯತೆ ದೊರೆತ ಹಿನ್ನಲೆ ಇವತ್ತು ಅಧಿಕೃತ ವಾಗಿ ಅನಾವರಣ ಮಾಡಲಾಯಿತು.. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮದಿಂದಾಗಿ ಕಾಸರಕೋಡಿನಲ್ಲಿರುವ ಇಕೋ ಬೀಚ್ ಇದೀಗ ಅಂತಾರಾಷ್ಟ್ರೀಯ ಮಟ್ಟದ ಬೀಚ್‌ ಆಗಿ ಮೇಲ್ದರ್ಜೆಗೇರಿದೆ. ಡೆನ್ಮಾರ್ಕ್‌ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪರಿಶೀಲನೆ ಬಳಿಕ ಬ್ಲ್ಯೂ ಫ್ಲಾಗ್ ಪ್ರಮಾಣಪತ್ರ ನೀಡಿದೆ ಈ ಹಿನ್ನಲೆಯಲ್ಲಿ ಇವತ್ತು ಬ್ಲ್ಯೂ ಪ್ಲ್ಯಾಗ್  ಹಾರಿಸಲಾಯಿತು.

ಕಡಲ ತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್ ಸ್ಥಿತಿಯನ್ನು ಆಧರಿಸಿ ಬ್ಲ್ಯೂ ಫ್ಲಾಗ್ ಪ್ರಮಾಣಪತ್ರ ನೀಡಲಾಗಿದೆ. ಕಡಲ ತೀರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲ ತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯ ವ್ಯವಸ್ಥೆ ಒದಗಿಸಲಾಗಿದೆ.

ರಾಜ್ಯದಲ್ಲಿ ಎರಡು ಬೀಚ್​​​​ಗಳು ಮಾತ್ರ ಈ ಬ್ಲ್ಯೂ ಪ್ಲ್ಯಾಗ್ ಮಾನ್ಯತೆಯನ್ನು ಪಡೆದುಕೊಂಡಿದ್ದು, ಇನ್ನೊಂದು ಉಡುಪಿಯ ಪಡುಬಿದ್ರೆ ಬೀಚ್ ಆಯ್ಕೆಯಾಗಿದೆ. ಬೀಚ್​​​ನಲ್ಲಿ ಸ್ವಚ್ಛತೆ ಜತೆಗೆ ಮೂಲಭೂತ ಸೌಕರ್ಯ ಇರುವುದರಿಂದ ಸಾಕಷ್ಟು ಪ್ರವಾಸಿಗರನ್ನ ಆಕರ್ಷಿಸಲು ಅನುಕೂಲವಾಗಿದೆ.. ಮಾತ್ರವಲ್ಲದೆ ಈ ಬೀಚ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವದರಿಂದ ದೇಶ, ವಿದೇಶಗಳ ಪ್ರವಾಸಿಗರನ್ನೂ ಇತ್ತ ಸೆಳೆಯಲಿದೆ.

ಕಡಲ ತೀರವು 5.6 ಕಿಲೋ ಮೀಟರ್ ಉದ್ದವಿದ್ದು, 750 ಮೀಟರ್ ವ್ಯಾಪ್ತಿ ಹೊಂದಿದೆ. ಸದ್ಯ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಅನಾವರಣ ಮಾಡಲಾಗಿದೆ, ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.

ಇದನ್ನೂ ಓದಿ : CT Ravi: ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ಟಿದ್ದಾರೆ : ಸಿದ್ದರಾಮಯ್ಯಗೆ ಸಿಟಿ ರವಿ ತಿರುಗೇಟುಸಂಜೆ ಆಗುತ್ತಿದ್ದಂತೆ ಇಕೋ ಬೀಚ್ ಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ, ಇಲ್ಲಿನ ಸೂರ್ಯಾಸ್ತದ ದೃಶ್ಯಾವಳಿ ನೊಡೋದೆ ಕಣ್ಣಿಗೆ ಹಬ್ಬ ಹೀಗಾಗಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ.. ಜತೆಗೆ ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆ ಮಾಡಲಾಗಿರುವುದರಿಂದ ಇಲ್ಲಿ ಬರಲು ಮತ್ತೆ ಮತ್ತೆ ಮನಸ್ಸು ಮಾಡುತ್ತಾರೆ.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅಂತರಾಷ್ಟ್ರೀಯ ಗರಿ ಸಿಕ್ಕಿದ್ದು ಉತ್ತಮ‌ ಬೆಳವಣಿಗೆಯಾಗಿದೆ.
Published by: G Hareeshkumar
First published: December 29, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories