HOME » NEWS » State » ECLIPSE FOR KANNADA SAHITYA SAMMELANA BOTH MLAS IN BENGALURU FOR MINISTERIAL POSITION HK

ಸಾಹಿತ್ಯ ಸಮ್ಮೇಳನಕ್ಕೆ ಸಂಪುಟ ಗ್ರಹಣ - ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಶಾಸಕರು

ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಮೈದಾನದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದರೂ ಜಿಲ್ಲೆಯ ಬಹುತೇಕ ಶಾಸಕರು ಅತ್ತ ಕಡೆ ಸುಳಿಯುತ್ತಿಲ್ಲ.

news18-kannada
Updated:February 4, 2020, 8:14 PM IST
ಸಾಹಿತ್ಯ ಸಮ್ಮೇಳನಕ್ಕೆ ಸಂಪುಟ ಗ್ರಹಣ - ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಶಾಸಕರು
ಬಿಜೆಪಿ ಶಾಸಕರಾದ ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಬಸವರಾಜ ಮತ್ತಿಮಡು
  • Share this:
ಕಲಬುರ್ಗಿ(ಫೆ.04): ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಸಂಪುಟ ಗ್ರಹಣ ಆವರಿಸಿದೆ. ಸಮ್ಮೇಳನದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಬೇಕಿದ್ದ ಶಾಸಕರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾರಜೋಳ ಅವರೂ ನಾಳೆ ಬೆಳಿಗ್ಗೆಯೇ ಬಂದು ಸಿಎಂ ಜೊತೆಗೆ ವಾಪಸ್ಸಾಗಲಿದ್ದಾರೆ. ಜನಪ್ರತಿನಿಧಿಗಳ ವರ್ತನೆಗೆ ಜನತೆ ಆಕ್ರೋಶ ವ್ಯಕ್ತಪಡಿಸಿದೆ.

ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಮೈದಾನದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದರೂ ಜಿಲ್ಲೆಯ ಬಹುತೇಕ ಶಾಸಕರು ಅತ್ತ ಕಡೆ ಸುಳಿಯುತ್ತಿಲ್ಲ. ವೇದಿಕೆ ಸಮಿತಿ, ಆಹಾರ, ಮೆರವಣಿಗೆ ಸಮಿತಿ ಸೇರಿ ಒಟ್ಟು 16 ಸಮಿತಿಗಳಿದ್ದು, ಅವುಗಳಿಗೆ ಶಾಸಕರೇ ಅಧ್ಯಕ್ಷರಾಗಿದ್ದಾರೆ.

ಅದರಲ್ಲಿಯೂ ಪ್ರಮುಖ ಸಮಿತಿಗಳಾದ ವೇದಿಕೆ ಸಮಿತಿಗೆ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಅಧ್ಯಕ್ಷರಾಗಿದ್ದರೆ, ಆಹಾರ ಸಮಿತಿಗೆ ಬಸವರಾಜ ಮತ್ತಿಮಡು ಅಧ್ಯಕ್ಷ, ಮೆರವಣಿಗೆ ಸಮಿತಿಗೆ ರಾಜಕುಮಾರ ಪಾಟೀಲ ತೇಲ್ಕೂರ ಅಧ್ಯಕ್ಷ. ಈ ಮುವ್ವರೂ ಶಾಸಕರು ಸೇರಿದಂತೆ ಜಿಲ್ಲೆಯ ಬಹುತೇಕ ಶಾಸಕರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಅದಕ್ಕೆ ಮುಖ್ಯ ಕಾರಣ ಸಚಿವ ಸಂಪುಟ ವಿಸ್ತರಣೆ. ಸಂಪುಟ ವಿಸ್ತರಣೆಯಲ್ಲಿ ತಾವೂ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಬೆಂಗಳೂರಿನಲ್ಲಿ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನ ಅವರ ಕಣ್ಣಿಗೆ ಕಾಣುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮತ್ತೊಂದೆಡೆ ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೂ ನಾಳೆ ಬೆಳಿಗ್ಗೆ ಕಲಬುರ್ಗಿಗೆ ಬರುತ್ತಿದ್ದಾರೆ. ಸಿಎಂ ಅವರ ಜೊತೆಗೂಡಿ ನಾಳೆ ಮದ್ಯಾಹ್ನವೇ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇವರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳೋದು, ಉಳಿಸಿಕೊಳ್ಳೋ ಬಗೆಗಿನ ಕಾಳಜಿಬಿಟ್ಟರೆ. ಸಮ್ಮೇಳನದ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ. 33 ವರ್ಷಗಳ ನಂತರ ಸಮ್ಮೇಳನ ನಡೆಯುತ್ತಿದೆ ಎಂಬ ಹೆಮ್ಮೆ ನಮೆಗೆಲ್ಲ ಇದ್ದರೂ, ಜನಪ್ರತಿನಿಧಿಗಳ ವರ್ತನೆಯಿಂದ ತೀವ್ರ ಬೇಸರವಾಗುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದೆ.

ಗಡಿ ವಿಷಯದಲ್ಲಿ ರಾಜಕೀಯ ಬೇಡ; ಪ್ರತ್ಯೇಕತೆಯ ಕೂಗು ಸಮ್ಮತವಲ್ಲ: ಎಚ್.ಎಸ್. ವೆಂಕಟೇಶಮೂರ್ತಿ

ಆಡಳಿತಾರೂಢ ಶಾಸಕರು, ಸಚಿವರ ವರ್ತನೆಗೆ ಸಾಹಿತ್ಯಾಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಕಲಬುರ್ಗಿ ಮತ್ತು ಕಲ್ಯಾಣ ಕರ್ನಾಟಕದ ಹಲವಾರು ಸಚಿವರು ಲಾಬಿ ನಡೆಸುತ್ತಿರುವುದರಿಂದಾಗಿ ಯಾರ ಗಮನವೂ ಸಮ್ಮೇಳನದ ಕಡೆಗೆ ಹರಿಯದಂತಾಗಿದೆ. ಸಮ್ಮೇಳನದ ಮೇಲೆ ಸಚಿವ ಸಂಪುಟ ವಿಸ್ತರಣೆ ಗ್ರಹಣ ಆವರಿಸಿದಂತಾಗಿದೆ.
Youtube Video
 
First published: February 4, 2020, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories