Karnataka Local Body Elections; ಮೇ.29ಕ್ಕೆ ರಾಜ್ಯ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಪಡಿಸಿದ ಆಯೋಗ; ಮೈತ್ರಿ ಸರ್ಕಾರಕ್ಕೆ ಮತ್ತೊಂದು ಕಂಟಕ..!

Karnataka State Election Commission: ಲೋಕಸಭೆ ಚುನಾವಣೆಯ ಅಗ್ನಿ ಪರೀಕ್ಷೆಯನ್ನು ಒಟ್ಟಾಗಿ ಎದುರಿಸಿದ್ದ ಮೈತ್ರಿ ಸರ್ಕಾರಕ್ಕೆ ಇದೀಗ ಸ್ಥಳೀಯ ಚುನಾವಣೆಗಳ ಹೆಸರಿನಲ್ಲಿ ಮತ್ತೊಂದು ಕಂಟಕ ಎದುರಾಗಿರುವುದು ಮಾತ್ರ ಸುಳ್ಳಲ್ಲ. ಆದರೆ, ಈ ಚುನಾವಣೆಯನ್ನು ಉಬಯ ಪಕ್ಷಗಳು ಹೇಗೆ ಎದುರಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

MAshok Kumar
Updated:May 3, 2019, 8:46 AM IST
Karnataka Local Body Elections; ಮೇ.29ಕ್ಕೆ ರಾಜ್ಯ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಪಡಿಸಿದ ಆಯೋಗ; ಮೈತ್ರಿ ಸರ್ಕಾರಕ್ಕೆ ಮತ್ತೊಂದು ಕಂಟಕ..!
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ.
  • Share this:
ನವ ದೆಹಲಿ; ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಇಳಿಯುತ್ತಿದ್ದಂತೆ ಸ್ಥಳೀಯ ಪಂಚಾಯತ್ ಚುನಾವಣೆಗಳು ಸದ್ದು ಮಾಡುತ್ತಿವೆ. ಗುರುವಾರ ಈ ಕುರಿತು ಅಧಿಸೂಚನೆ ಹೊರಡಿಸಿರುವ ಕರ್ನಾಟಕ ಚುನಾವಣಾ ಆಯೋಗ, ಮೇ.29 ರಂದು ರಾಜ್ಯದಲ್ಲಿ ಪಂಚಾಯತ್ ಚುನಾವಣೆಗಳು ನಡೆಯಲಿವೆ ಎಂದು ತಿಳಿಸಿದೆ. ಪರಿಣಾಮ ಎಲ್ಲಾ ಪಕ್ಷಗಳು ಮತ್ತೊಂದು ಸುತ್ತಿನ ಚುನಾವಣಾ ಕಣಕ್ಕೆ ಅಣಿಯಾಗುತ್ತಿವೆ.

ಚುನಾವಣಾ ಆಯೋಗದ ಆದೇಶದಂತೆ ಮೇ. 29 ರಂದು ರಾಜ್ಯದ 10 ತಾಲೂಕು ಪಂಚಾಯತ್, 202 ಗ್ರಾಮ ಪಂಚಾಯತ್, ಬೆಂಗಳೂರು ಹಾಗೂ ತುಮಕೂರಿನ 2 ಪಾಲಿಕೆ ವಾರ್ಡ್ ಹಾಗೂ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿವೆ.

ಮುಂದುವರೆಯಲಿದೆಯೇ ಮೈತ್ರಿ? : ಕರ್ನಾಟಕದ ಮಟ್ಟಿಗೆ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಗಿಂತ ಸ್ಥಳೀಯ ಪಂಚಾಯತ್​ ಚುನಾವಣೆಯ ಕಾವು ಯಾವಾಗಲೂ ತುಸು ಹೆಚ್ಚೆ ಇರುತ್ತದೆ. ಮಂಡ್ಯ, ಮೈಸೂರು, ಹಾಸನ ತುಮಕೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲಿ ಹಿಂಸಾಚಾರ ಎಂಬುದು ಸಾಮಾನ್ಯ ಸಂಗತಿ. ಹಲವು ಬಾರಿ ಚುನಾವಣೆ ಸಂಬಂಧ ಕೊಲೆಗಳು ನಡೆದಿರುವ ಕುರಿತು ಸಹ ಸಾಕಷ್ಟು ವರದಿಗಳಾಗಿವೆ. ಅಲ್ಲದೆ ಈ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖ ವಿರೋಧಿ ಬಣಗಳು ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ : ಯಾರ ವೋಟು ಯಾರಿಗೆ? ಮಂಡ್ಯ ರೆಬೆಲ್​ ನಾಯಕರ ಜೊತೆ ಸಿದ್ದರಾಮಯ್ಯ ಸಭೆ; ಸಿಎಂ ನಡೆಗೆ ಅಸಮಾಧಾನ

ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸಾಧಿಸಿವೆ. ಮೇ.23ರಂದು ನಡೆಯಲಿರುವ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯನ್ನು ಈ ಎರಡೂ ಪಕ್ಷಗಳು ಒಟ್ಟಾಗಿಯೇ ಎದುರಿಸಲಿವೆ. ಆದರೆ ಈವರೆಗೆ ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳದ ಈ ಎರಡೂ ಪಕ್ಷಗಳು ಈ ಬಾರಿ ಮೈತ್ರಿ ಧರ್ಮ ಪಾಲಿಸಲಿವೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಇತರೆ ಚುನಾವಣೆಗಳಿಗಿಂತ ಸ್ಥಳೀಯ ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರ ಸಂಖ್ಯೆ ಹೆಚ್ಚಿರುತ್ತದೆ. ಅಲ್ಲದೆ ದಶಕಗಳಿಂದ ಪರಸ್ಪರ ವಿರೋಧಿ ಬಣಗಳಾಗಿ ಹೋರಾಟ ನಡೆಸುತ್ತಿದ್ದವರನ್ನು ಇದೀಗ ಮತ್ತೆ ಒಂದೇ ಮೈತ್ರಿ ಎಡೆಗೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲದೆ ಇತ್ತೀಚಿನ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಧರ್ಮ ಪಾಲಿಸಿಲ್ಲ ಎಂಬ ಆರೋಪ ಎದುರಿಸುತ್ತಿದ್ದು ಉಬಯ ಪಕ್ಷಗಳ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಡ್ಯ ಲೋಕಸಭಾ ಚುನಾವಣೆ ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ಅದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ರೆಬೆಲ್ ನಾಯಕರು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದು ಸಾಮಾನ್ಯವಾಗಿ ಜೆಡಿಎಸ್ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ ಲೋಕಸಭಾ ಫಲಿತಾಂಶದ ನಂತರ ಈ ಮೈತ್ರಿ ಮುರಿದು ಬೀಳಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಹೀಗಾಗಿ ಸ್ಥಳೀಯ ಪಂಚಾಯತ್ ಚುನಾವಣೆಯನ್ನು ಈ ಎರಡೂ ಪಕ್ಷಗಳು ಒಟ್ಟಾಗಿ ಎದುರಿಸುವುದು ಅಸಾಧ್ಯ ಎನ್ನಲಾಗುತ್ತಿದೆ.ಇದನ್ನೂ ಓದಿ : ಅಂಬಿ ಇಲ್ಲದ ಹುಟ್ಟುಹಬ್ಬಕ್ಕೆ ಬೇಸರದಲ್ಲೂ ಖುಷಿ : ಮೇ 23ಕ್ಕೆ ಮಂಡ್ಯ ಫಲಿತಾಂಶ, 24ಕ್ಕೆ ಸಿನಿಮಾ ರಿಲೀಸ್ !

ಈ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಉಬಯ ಪಕ್ಷಗಳು ಸ್ಥಳೀಯ ಚುನಾವನೆಯನ್ನೂ ಒಟ್ಟಾಗಿಯೇ ಎದುರಿಸಿದರೆ ಕಾರ್ಯಕರ್ತರು ಪಕ್ಷ ತ್ಯಜಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಮೈತ್ರಿ ಪಕ್ಷದಿಂದ ಹೊರ ನಡೆಯುವ ಕಾರ್ಯಕರ್ತರಿಗೆ ಗಾಳ ಹಾಕಲು ಬಿಜೆಪಿ ಸಹ ಸಕಲ ತಯಾರಿ ನಡೆಸಿದೆ. ಒಟ್ಟಾರೆ ಲೋಕಸಭೆ ಚುನಾವಣೆಯ ಅಗ್ನಿ ಪರೀಕ್ಷೆಯನ್ನು ಒಟ್ಟಾಗಿ ಎದುರಿಸಿದ್ದ ಮೈತ್ರಿ ಸರ್ಕಾರಕ್ಕೆ ಇದೀಗ ಸ್ಥಳೀಯ ಚುನಾವಣೆಗಳ ಹೆಸರಿನಲ್ಲಿ ಮತ್ತೊಂದು ಕಂಟಕ ಎದುರಾಗಿರುವುದು ಮಾತ್ರ ಸುಳ್ಳಲ್ಲ. ಆದರೆ, ಈ ಚುನಾವಣೆಯನ್ನು ಉಬಯ ಪಕ್ಷಗಳು ಹೇಗೆ ಎದುರಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

First published: May 3, 2019, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading