ಬೆಂಗಳೂರು(ಡಿ.14): ಅಗತ್ಯ ವಸ್ತುಗಳ ಬೆಲೆ ಏರಿಕೆ (Price Hike) ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಕಂಗೆಡಿಸುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ತರಕಾರಿ, ಹಾಲು, ಮೊಸರು ಹೀಗೆ ಎಲ್ಲದರ ದರಗಳು ಹೆಚ್ಚಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ. ಆದರೀಗ ಈ ಎಲ್ಲದರ ಮಧ್ಯೆ ಹೋಟೆಲ್ ತಿಂಡಿ (Hotel Food) ರೇಟ್ ಕೂಡಾ ಸದ್ದಿಲ್ಲದಂತೆ ಹೆಚ್ಚಾಗಿದೆ. ಇದು ಬೆಲೆ ಏರಿಕೆಯಿಂದ ನಲುಗಿರುವ ಜನರಿಗೆ ಮತ್ತೊಂದು ಹೊಡೆತ ನೀಡಿದೆ. ಹಾಲು, ಕಾಫಿ ಪುಡಿ, ಗ್ಯಾಸ್ ದರ ಹೆಚ್ಚಳದಿಂದಾಗಿ ಹೋಟೆಲ್ ತಿಂಡಿ ದರ ಹೆಚ್ಚಳವಾಗಿದೆ ಎನ್ನಲಾಗಿದೆ. ಹೋಟೆಲ್ ತಿಂಡಿಗಳ ಬೆಲೆ 15 ರಿಂದ 20% ರಷ್ಟು ಹೆಚ್ಚಳವಾಗಿದ್ದು, ಹೊಸ ರೇಟ್ ಹೆಚ್ಚಳ ಬೆನ್ನಲ್ಲೇ ಹೊಸ ರೇಟ್ (New Rate) ಫಲಕ ಅಳವಡಿಕೆ ಮಾಡಲಾಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷ ಪಿ.ಸಿ.ರಾವ್ ದಿನ ಬಳಕೆ ವಸ್ತುಗಳ ರೇಟ್ ಜಾಸ್ತಿ ಆಗಿವೆ. ಹೋಟೆಲ್ಗಳಲ್ಲಿ ಜಾಸ್ತಿ ಖರ್ಚಾಗುವುದು ಹಾಲು, ಕಾಫಿ ಪುಡಿ, ಗ್ಯಾಸ್, ಇದರಿಂದ ಚೈನೀಸ್, ನಾರ್ತ್ ತಿಂಡಿ ರೇಟ್ ಗಳು ಜಾಸ್ತಿಯಾಗಿವೆ. ಇದರೊಂದಿಗೆ ತುಪ್ಪದ ರೇಟ್ ಕೂಡಾ ಜಾಸ್ತಿಯಾಗಿದೆ. ಅನಿವಾರ್ಯವಾಗಿ ಹೋಟೆಲ್ ಮಾಲೀಕರು ಏರಿಕೆ ಮಾಡ್ತಿದ್ದಾರೆ. ಆದರೆ ದರ ಏರಿಸುವ ವಿಚಾರದಲ್ಲಿ ಸಂಘ ಇಷ್ಟೇ ದರ ಮಾಡಿ ಹೇಳಿಲ್ಲ. ಆಯಾ ಹೋಟೆಲ್ ಮಾಲೀಕರೇ ನಿರ್ಧಾರ ಮಾಡಿ ದರ ನಿಗದಿ ಮಾಡಿದ್ದಾರೆ ಎಂದಿದ್ದಾರೆ.
KMF Product Price Hike: ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದ ಕೆಎಂಎಫ್
ಜಿಎಸ್ಟಿಯಿಂದ ಹೊರೆ
ಜಿಎಸ್ಟಿಯಿಂದ ಬೀಳುವ ಹೊರೆಯ ಬಗ್ಗೆಯೂ ಮಾತನಾಡಿದ ಅವರು ಗ್ಯಾಸ್ ದರ 200 ಜಾಸ್ತಿ ಆಗಿದೆ, ಬಿಲ್ಡಿಂಗ್ ಮೇಲೆ ಜಿಎಸ್ಟಿಯಿಂದ ಹೊರೆ ಆಗ್ತಿದೆ. ಕಮರ್ಷಿಯಲ್ ಗ್ಯಾಸ್ಗೆ 80% ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಕಾರ್ಮಿಕರ ಅಭಾವವಿದೆ, ಮಾರುಕಟ್ಟೆಯಲ್ಲಿ ವಸ್ತುಗಳ ದರ ಜಾಸ್ತಿ ಆಗಿದೆ.
ಗುಣಮಟ್ಟ ಕಾಪಾಡಬೇಕಾದರೆ ದರ ಹೆಚ್ಚಿಸಬೇಕು
ಮತ್ತೆ ಹೋಟೆಲ್ ಕ್ವಾಲಿಟಿ ಮೆಂಟೇನ್ ಮಾಡೋದು ಇದ್ರಿಂದ ದರ ಏರಿಕೆ ಮಾಡಿದ್ದಾರೆ. ದರ ಏರಿಕೆ ವಿಚಾರದಲ್ಲಿ ಗ್ರಾಹಕರು ನಮಗೆ ಸಹಕರಿಸಬೇಕು. ಒಳ್ಳೆ ಆಹಾರ ಕೊಡಬೇಕಂದ್ರೆ ದರ ಏರಿಕೆ ಅನಿವಾರ್ಯ. ಆದ್ರೆ ಸಂಘದ ವತಿಯಿಂದ ದರ ಏರಿಕೆ ವಿಚಾರವಾಗಿ ಇನ್ನು ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Vegetable Price Hike: ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ ತರಕಾರಿ ಬೆಲೆ! ಇದು ಸೈಕ್ಲೋನ್ ಎಫೆಕ್ಟ್
ಸಣ್ಣ ಹೋಟೆಲ್ ತಿಂಡಿ ಊಟ ಬೆಲೆ ಹೀಗಿದೆ
* 30 ರೂಪಾಯಿದ್ದ ರೈಸ್ ಬಾತ್ ಈಗ 35 ರಿಂದ 40 ರೂಪಾಯಿಗೆ ಏರಿಕೆ
* 30 ರೂಪಾಯಿ ಇದ್ದ ಮಸಾಲ್ ದೋಸೆ, ಸೆಟ್ ದೋಸೆ, ರೂ. 40
* ಆಫ್ ರೈಸ್ 25 ರಿಂದ 30 ರೂಪಾಯಿಗೆ ಏರಿಕೆ
* ಎರಡು ಚಪಾತಿ ರೂ. 20 ಇದಿದ್ದು, ಇದೀಗ 30 ರೂ ಏರಿಕೆ
* ಮಸಾಲೆ ದೋಸೆ ಹಳೆಯ ರೆಟ್ 30-ಹೊಸ ರೇಟ್ 40 ರೂ.
* ಸೆಟ್ ದೋಸೆ ಹಳೆಯ ರೇಟ್ 30- ಹೊಸ ರೇಟ್ 40 ರೂ.
* ಪುಳಿಯೋಗರೆ ಹಳೆಯ ರೇಟ್ 30- ಹೊಸ ರೇಟ್ 40 ರೂ.
* ಪೂರಿ ಹಳೆಯ ರೆಟ್-30 ಹೊಸ ರೇಟ್ 40 ರೂ
* ಚಿತ್ರಾನ್ನ ಹಳೆಯ ರೆಟ್ 30- ಹೊಸ ರೇಟ್ 35
* ರೈಸ್ ಬಾತ್ ಹಳೆಯ ರೆಟ್ 30- ಹೊಸ ರೇಟ್ 35
* ಅನ್ನ ಸಾಂಬಾರ್ ಹಳೆಯ ರೇಟ್ 30-ಹೊಸ ರೇಟ್ 35
* ಮೊಸರನ್ನ ಹಳೆಯ ರೇಟ್ 30- ಹೊಸ ರೇಟ್ 35
* ಪರೋಟ ಹಳೆಯ ರೇಟ್ 30- ಹೊಸ ರೇಟ್ 40
* ಚಪಾತಿ ಹಳೆಯ ರೇಟ್ 20- ಹೊಸ ರೇಟ್ 30
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ