Earthquake: ರಾಜಧಾನಿ ಬೆಂಗಳೂರಿನಲ್ಲಿ ಕಂಪಿಸಿದ ಭೂಮಿ, ಚಿಕ್ಕಬಳ್ಳಾಪುರದ ಜನರಿಗೂ ಭೂಕಂಪದ ಶಾಕ್
Earthquake in Bengaluru: ಬೆಂಗಳೂರಿನಿಂದ ಉತ್ತರ ಈಶಾನ್ಯ ಭಾಗದ 70 ಕಿಲೋಮೀಟರ್ ದೂರದಲ್ಲಿ 11 ಕಿಲೋ ಮೀಟರ್ ಭೂಮಿಯ ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಭೂಕಂಪನ ಇಲಾಖೆ ಮಾಹಿತಿ ನೀಡಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಉತ್ತರ- ಈಶಾನ್ಯ ಭಾಗದ 66 ಕಿಮೀ ದೂರದಲ್ಲಿ 23 ಕಿಮೀ ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ
ರಾಜ್ಯದ ಚಿಕ್ಕಬಳ್ಳಾಪುರ (Chikkaballapur) ಹಾಗೂ ಬೆಂಗಳೂರಿನಲ್ಲಿ(Bengaluru) ಆಗಾಗ ಭೂಮಿ (Earth) ನಡುಗಿದಾಗ ಶಬ್ದ(Sound) ಕೇಳಿ ಬರುತ್ತಿದೆ, ಅಲ್ಲಲ್ಲಿ ಸ್ಫೋಟಗಳು (Blast) ಎಂಬ ಮಾತುಗಳನ್ನು ಆಗಾಗ ಸಾರ್ವಜನಿಕರು ಹೇಳುತ್ತಲೇ ಇದ್ದರು.. ಆಘಾತದಿಂದ ಜನರು ಹೊರ ಬರುವ ಮುನ್ನವೇ ಇಂದು ಬೆಂಗಳೂರಿನ ಉತ್ತರ (North) ಹಾಗೂ ಈಶಾನ್ಯ ಭಾಗದಲ್ಲಿ ಲಘು ಭೂಕಂಪ ಸಂಭವಿಸಿದೆ.. ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಿರುವ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಇಂದು ಬೆಳಗ್ಗೆ ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲು ಹಲವೆಡೆ ಲಘು ಭೂಕಂಪನ ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದೆ ಎಂದು ಮಾಹಿತಿ ನೀಡಿದೆ.ಭೂಕಂಪನ ತೀವ್ರತೆ:3.3, 22-12-2021 ರಂದು ಸಂಭವಿಸಿದೆ, 07:14:32 IST, ಲ್ಯಾಟ್: 13.55 ಮತ್ತು ಉದ್ದ: 77.76, ಆಳ: 23 ಕಿಮೀ, ಸ್ಥಳ: ಕರ್ನಾಟಕದ ಬೆಂಗಳೂರಿನ 66 ಕಿಮೀ ಎನ್ಎನ್ಇ,' ಎಂದು ಎನ್ಎಸ್ಸಿ ಟ್ವೀಟ್ ಆಘಾತ ಕಾರಿ ಮಾಹಿತಿಯನ್ನು ನೀಡಿದ .
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡುಗಿದ ಭೂಮಿ
ಇನ್ನು ಬೆಂಗಳೂರು ಮಾತ್ರವಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಹ ಭೂಮಿ ಕಂಪಿ ಸಿದ್ದು ಮಂಡಿಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಹಳ್ಳಿ, ಅಡ್ಡಗಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡಹಳ್ಳಿ, ಭೋಗಪರ್ತಿ, ಮುದ್ದೇನಹಳ್ಳಿ ಪಂಚಾಯತ್ ವ್ಯಾಪ್ತಿಯ ಬಂಡಹಳ್ಳಿ, ಆರೂರು ಸುತ್ತಮುತ್ತ ಇಂದು ಬೆಳಗ್ಗೆ 7.10ರ ಸುಮಾರಿಗೆ ಭೂಕಂಪ ಸಂಭವಿಸಿರುವುದಾಗಿ ತಿಳಿದುಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಈಶಾನ್ಯ ಭಾಗದ 70 ಕಿಲೋಮೀಟರ್ ದೂರದಲ್ಲಿ 11 ಕಿಲೋ ಮೀಟರ್ ಭೂಮಿಯ ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಭೂಕಂಪನ ಇಲಾಖೆ ಮಾಹಿತಿ ನೀಡಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಉತ್ತರ- ಈಶಾನ್ಯ ಭಾಗದ 66 ಕಿಮೀ ದೂರದಲ್ಲಿ 23 ಕಿಮೀ ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ವಿದ್ಯಾ ಅದೃಷ್ಟವಶಾತ್ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಯಾವುದೇ ಭಾಗಗಳಲ್ಲಿ ಭೂಕಂಪನದಿಂದ ಯಾವುದೇ ರೀತಿಯ ಹಾನಿಯಾಗಿಲ್ಲ.
ಕಲಬುರ್ಗಿ ಜಿಲ್ಲೆಯಲ್ಲೂ ಕೇಳಿಬಂದಿದ್ದ ಭೂಕಂಪನದ ಶಬ್ದ
ಇನ್ನು ಇಂದು ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪನದ ಶಬ್ದ ಕೇಳಿ ಬಂದಿದ್ದರೆ ನಿನ್ನೆ ರಾತ್ರಿ ಕಲಬುರ್ಗಿ (Kalburgi) ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಮಿಯ ಒಳಗಡೆಯಿಂದ ಶಬ್ದ ಕೇಳಿ ಬಂದಿದೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಚಿಂಚೋಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಸಂಜೆ 7 ಗಂಟೆ ಸುಮಾರಿಗೆ 2 ಬಾರಿ ಸದ್ದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಭಾರೀ ಸದ್ದಿನಿಂದಾಗಿ ಜನರು ಬೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಸದ್ದು ಕೇಳಿದೆ. ಗಡಿಕೇಶ್ವರದಲ್ಲಿ ಬೆಳಗ್ಗೆ ಕೂಡ ಭಾರೀ ಶಬ್ದ ಕೇಳಿ ಬಂದಿದ್ದು, ಕೆಲವೆಡೆ ಭೂಕಂಪನದ ಅನುಭವವೂ ಆಗಿದೆ.
ಇನ್ನು ಕಳೆದ ಕೆಲವು ವಾರಗಳ ಹಿಂದೆ ಬೆಂಗಳೂರಿನ
ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದ ಕೆಲ ಭಾಗಗಳಲ್ಲಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿತು ಎಂದು ನಿವಾಸಿಗಳು ಹೇಳಿದ್ದರು. ಹೀಗಾಗಿ ಬೆಂಗಳೂರಿಗೆ ಭೂಕಂಪನದ ಆತಂಕ ಇದೆ ಎಂದು ಜನರು ಭಯ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ಯಾವುದೇ ರೀತಿಯ ಭೂಕಂಪ ಸಂಭವಿಸಿದ ಎಂದು ಅಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸಾರ್ವಜನಿಕರಿಗೆ ಸಮಾಧಾನ ಮಾಡಿತ್ತು. ಆದರೆ ಇಂದು ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ಭೂಕಂಪನ ಸಂಭವಿಸಿರುವುದು ಬೆಂಗಳೂರು ಎಷ್ಟರಮಟ್ಟಿಗೆ ಸೇಫ್ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.