ಮನಗೂಳಿಯಲ್ಲಿ ಭೂಮಿ ಕಂಪಿಸಿದ ಅನುಭವ; ರಾತ್ರೋರಾತ್ರಿ ಮನೆಯಿಂದ ಹೊರಗೆ ಓಡಿ ಬಂದು ಕುಳಿತ ಜನತೆ

ಇದು ಭೂಕಂಪವೋ ಅಥವಾ ಭೂಮಿ ಕಂಪಿಸಿದ ಅನುಭವವಾಗಲು ಬೇರೇನಾದರೂ ಕಾರಣಗಳಿವೆಯಾ ಎಂಬುದರ ಕುರಿತು ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.  ಈ ಕುರಿತು ವಿಜಯಪುರ ಜಿಲ್ಲಾಡಳಿತವೂ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. 

news18-kannada
Updated:September 17, 2020, 12:02 PM IST
ಮನಗೂಳಿಯಲ್ಲಿ ಭೂಮಿ ಕಂಪಿಸಿದ ಅನುಭವ; ರಾತ್ರೋರಾತ್ರಿ ಮನೆಯಿಂದ ಹೊರಗೆ ಓಡಿ ಬಂದು ಕುಳಿತ ಜನತೆ
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ (ಸೆ. 17) ಮನೆಯಲ್ಲಿ ನಿದ್ರೆಗೆ ಜಾರಿದ್ದ ಜನ ಭೂಮಿ ಕಂಪಿಸಿದಂತಾಗಿ ಹೊರಗೋಡಿ ಬಂದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ. ನಿನ್ನೆ ರಾತ್ರಿ 11:30ರ ಸುಮಾರಿಗೆ ಬಹುತೇಕ ಜನ ತಮ್ಮ ತಮ್ಮ ಮನೆಗಳಲ್ಲಿ ನಿದ್ರೆಗೆ ಜಾರಿದ್ದರು. ಇನ್ನೂ ಕೆಲವರು ಟಿವಿ ನೋಡುತ್ತ ಮತ್ತೆ ಹಲವರು ಮೊಬೈಲ್ ವೀಕ್ಷಿಸುತ್ತ, ಮತ್ತೆ ಕೆಲವರು ಮಾತನಾಡುತ್ತ ಮಲಗಿದ್ದರು.  ಆದರೆ, ಏಕಾಏಕಿ ಭೂಮಿ ಕಂಪಿಸಿದ ಅನುಭವವಾಗಿದ್ದರಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಅಷ್ಟೇ ಅಲ್ಲದೇ, ಮನೆಯಿಂದ ಹೊರಗಡೆ ಕುಳಿತು ರಾತ್ರಿ ಕಳೆದಿದ್ದಾರೆ.

ಮನೆಯಲ್ಲಿ ಮಲಗಿದ್ದಾಗ ಏಕಾಏಕಿ ಭೂಮಿ ಕಂಪಿಸಿದಂತಾಗಿದೆ. ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಮನೆಯಲ್ಲಿ ಸೋಫಾದ ಮೇಲೆ ಮಗಿ ಮೊಬೈಲ್ ನೋಡುತ್ತಿದ್ದೆ.  ಸೋಫಾ ತೂಗಿದಂತಾಗಿ ಗಾಬರಿಯಾಗಿ ಹೊರಗೆ ಓಡಿ ಬಂದೆ.  ಅಷ್ಟರಲ್ಲಿ ಬೇರೆ ಮನೆಯವರೂ ಹೊರಗೆ ಓಡಿ ಬಂದಿದ್ದರು.  ಧಡ್ ಧಡ್ ಅಂತ ಯಾವುದೇ ಸಪ್ಪಳ ಕೇಳಿಸಲಿಲ್ಲ.  ಆದರೆ, ತೂಗಿದಂತಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದೇವೆ, ಎಂದು ಮನೆಯ ಹೊರಗಡೆ ಬಂದು ಗಾಬರಿಯಾಗಿ ಕುಳಿತಿದ್ದ ಅಜ್ಜಿಯೊಬ್ಬರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.


ಇದು ಭೂಕಂಪವೋ ಅಥವಾ ಭೂಮಿ ಕಂಪಿಸಿದ ಅನುಭವವಾಗಲು ಬೇರೇನಾದರೂ ಕಾರಣಗಳಿವೆಯಾ ಎಂಬುದರ ಕುರಿತು ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.  ಈ ಕುರಿತು ವಿಜಯಪುರ ಜಿಲ್ಲಾಡಳಿತವೂ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.  ಆದರೆ, ಮನಗೂಳಿ ಮತ್ತು ಸುತ್ತಮುತ್ತಲಿನ ಜನ ಮಾತ್ರ ಇನ್ನೂ ಆತಂಕದಲ್ಲಿಯೇ ಇದ್ದಾರೆ.  ಇದು ಭೂಕಂಪ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ದೂರದಲ್ಲಿ ಎಲ್ಲಿಯಾದರೂ ಕಲ್ಲಿನ ಗಣಿಯಲ್ಲಿ ಸ್ಫೋಟ ಉಂಟಾಗಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲಾಡಳಿ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.

ಜನ ಭಯ ಪಡುವ ಅಗತ್ಯವಿಲ್ಲ:

ವಿಜಯಪುರ ಜಿಲ್ಲೆಯ ಮನಗೂಳಿಯಲ್ಲಿ ಭೂಕಂಪವಾಗಿಲ್ಲ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸಿಸ್ಮಿಕ್ ಸೆಂಟರ್​ನಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ಅಂಶಗಳು ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರದ ಮಾಹಿತಿ ನೀಡಿದೆ.
Published by: Rajesh Duggumane
First published: September 17, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading