ಚಿಕ್ಕಬಳ್ಳಾಪುರ: ಆ ಗ್ರಾಮದ (Village) ಜನರೆಲ್ಲ (People) ರಾತ್ರಿ ಊಟ (Dinner) ಮಾಡಿ ಮಲಗಿದ್ದರು (Sleeping). ಕೆಲವರು ಟಿವಿ (TV) ನೋಡುತ್ತಾ ಕಾಲ ಕಳೆಯುತ್ತಿದ್ದರೆ, ಇನ್ನು ಕೆಲ ಯುವಕರೆಲ್ಲ ಊಟ ಮಾಡಿ, ಒಂದ್ ರೌಂಡ್ (Round) ವಾಕ್ (Walk) ಹೋಗಿ ಬರೋಣ ಅಂತ ಹೊರಟಿದ್ದರು. ಆಗ ಕೇಳಿಸಿತು ನೋಡಿ ಭಯಾನಕ ಶಬ್ದ (Sound). ಅಬ್ಬಾ. ಭಾರೀ ಶಬ್ದದ ಹೊಡೆತಕ್ಕೆ ಜನರೆಲ್ಲ ಬೆಚ್ಚಿ ಬಿದ್ದರು. ಮಲಗಿದ್ದವರು ಎದ್ದು ಕುಳಿತರೆ, ಮನೆ ಒಳಗಿದ್ದವರೆಲ್ಲ ಮನೆಯಿಂದ ಓಡಿ ಬಂದು, ರಸ್ತೆ (Road), ಬಯಲಿಗೆ ಬಂದು ನಿಂತುಕೊಂಡರು. ಹೊರಕ್ಕೆ ಹೊರಟಿದ್ದವರು ಮುಂದೆ ಎಲ್ಲಿಗೆ ಹೋಗಬೇಕು ಅಂತ ತಿಳಿಯದೇ ಕಂಗಾಲಾಗಿ ನಿಂತು ಬಿಟ್ಟಿದ್ದರು. ಅಂದಹಾಗೆ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ (Earth Quake) ಅನುಭವ ಆಗಿದ್ಯಂತೆ. ಪದೇ ಪದೇ ಹೀಗೆ ಆಗುತ್ತಿರುವುದಕ್ಕೆ ಅಲ್ಲಿನ ಜನ ಆತಂಕಗೊಂಡಿದ್ದಾರೆ.
ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಏಕಾ ಏಕಿ ಭೂಮಿಯಿಂದ ಭಾರೀ ಪ್ರಮಾಣದ ಶಬ್ಗ ಕೇಳಿ ಬಂದಿದ್ಯಂತೆ. ಈ ರೀತಿ ಭಾರೀ ಶಬ್ದ ಕೇಳಿ ಅಲ್ಲಿನ ಜನರೆಲ್ಲ ಬೆಚ್ಚಿಬಿದ್ದಿದ್ದಾರೆ.
ರಾತ್ರಿ 9.30ರಿಂದ 9-45ರ ಸುಮಾರಿಗೆ ಘಟನೆ
ನಿನ್ನೆ ರಾತ್ರಿ 9:30 ಹಾಗೂ 9:45 ಗಂಟೆ ಸುಮಾರಿಗೆ ಎರಡು ಬಾರಿ ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಆತಂಕದಿಂದಲೇ ಕಾಲ ಕಳೆದಿದ್ದಾರೆ.
ಇದನ್ನೂ ಓದಿ: Crime News: ಮೈಸೂರಿನ ವೈದ್ಯೆ ಹತ್ಯೆ ಪ್ರಕರಣ - ಆರೋಪಿ ಬರೋಬ್ಬರಿ 350 ಕೋಟಿ ರೂ ಆಸ್ತಿ ಒಡೆಯನಂತೆ
ಎಲ್ಲೆಲ್ಲಿ ಭೂಕಂಪನದ ಅನುಭವ?
ಬಾಗೇಪಲ್ಲಿ ತಾಲ್ಲೂಕಿನ ಪೆದ್ದ ತುಮಕೇಪಲ್ಲಿ, ಲಘು ಮದ್ದೇಪಲ್ಲಿ, ಗರ‍್ರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ಈರಗಂಟಪಲ್ಲಿ ಹಾಗೂ ಟೆಂಕಮಾಕಲಪಲ್ಲಿ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಮಿಯ ಒಳಗಿಂದ ಭಾರೀ ಪ್ರಮಾಣದ ಶಬ್ದ ಕೇಳಿಸಿಕೊಂಡಿದ್ದಾಗಿ ಜನರು ಹೇಳಿದ್ದಾರೆ.
ಭೂಮಿಯಿಂದ ಕೇಳಿಬಂದ ಭಾರೀ ಶಬ್ದಕ್ಕೆ ಬೆದರಿದ ಜನ
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಮತ್ತು ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಪೆದ್ದ ತುಮಕೇಪಲ್ಲಿ, ಲಘುಮದ್ದೇಪಲ್ಲಿ, ಗುರ್ರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ನೀರಗಂಟಿಪಲ್ಲಿ, ಟೆಂಕಮಾಕಲಪಲ್ಲಿಯಲ್ಲಿಯೂ ಜನ ಶಬ್ದ ಕೇಳಿಸಿಕೊಂಡು, ಬೆಚ್ಚಿ ಬಿದ್ದಿದ್ದಾರೆ. 9.30 ನಿಮಿಷ ಹಾಗೂ 9.45 ನಿಮಿಷದ ಸುಮಾರಿಗೆ ಎರಡು ಬಾರಿ ಭಾರೀ ಶಬ್ದ ಕೇಳಿದ್ದು, ಇದರಿಂದ ಹೆದರಿದ ಜನ ಮನೆಯಿಂದ ಹೊರಕ್ಕೆ ಓಡಿ ಬಂದು, ರಸ್ತೆ ಹಾಗೂ ಬಯಲಿನಲ್ಲಿ ನಿಂತಿದ್ದರು. ಹತ್ತಾರು ಗ್ರಾಮಗಳ ನಿವಾಸಿಗಳು ರಾತ್ರಿ ಇಡೀ ಭಯ ಭೀತಿಯಿಂದಲೇ ಕಾಲ ಕಳೆಯುವಂತಾಯ್ತು.
ಈ ಸುತ್ತಮುತ್ತಲ ಗ್ರಾಮಗಳಲ್ಲಿ ಪದೇ ಪದೇ ಕಂಪನದ ಅನುಭವ
ಕಳೆದ ನಾಲ್ಕು ವರ್ಷಗಳಿಂದ ಸದರಿ ಗ್ರಾಮಗಳಲ್ಲಿ ಜನರಿಗೆ ಮೂರು ಬಾರಿ ಭೂಮಿ ಕಂಪಿಸಿರುವ ಅನುಭವ ಎದುರಾಗಿದೆ. ಇದರಿಂದ ಗ್ರಾಮಸ್ಥರೆಲ್ಲ ಕಂಗಾಲಾಗಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Rain Updates: ಮೇ ಅಂತ್ಯಕ್ಕೆ ಮುಂಗಾರು ಪ್ರವೇಶ; ರಾಜ್ಯದಲ್ಲಿ ಇನ್ನೂ 5 ದಿನ ಅಬ್ಬರಿಸಲಿದ್ದಾನೆ ವರುಣ
ಕಳೆದ ಜನವರಿಯಲ್ಲೂ ಇದೇ ಅನುಭವ
ಕಳೆದ ಜನವರಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂಕಂಪನದಿಂದ ಅಲ್ಲಿನ ಜನರು ಭಯಭೀತಿ ಗೊಂಡಿದ್ದು ಮನೆಯ ಹೊರಗಡೆ ಬಂದಿದ್ದರು. ತಾಲೂಕಿನ ಶೆಟ್ಟಿಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸುವ ರೀತಿಯಲ್ಲಿ ಅಲ್ಲಿನ ಜನರಿಗೆ ಅನುಭವ ಉಂಟಾಗಿತ್ತು. ಕಳೆದ ಡಿಸೆಂಬರಿನಲ್ಲಿ ಮೂರು ಬಾರಿ ಭೂಕಂಪನ ಉಂಟಾಗಿತ್ತು. ಕೆಲವು ಮನೆಗಳು ಬಿದ್ದು ಹೋಗಿದ್ದವು, ಗೋಡೆಗಳು ಕುಸಿದು ಬಿದ್ದಿದ್ದವು. ಸುಮಾರು 7 ರಿಂದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಭೂಕಂಪನ ಸಂಭವಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ